ಚಿಕ್ಕಮಗಳೂರು-ಕಾಂಗ್ರೆಸ್-ಶಾಸಕರನ್ನು-ಎಫ್‌ಐಆರ್‌ನಲ್ಲಿ- ದಾಖಲಿಸಲು-ಬಿಜೆಪಿ-ಒತ್ತಾಯ

ಚಿಕ್ಕಮಗಳೂರು:- ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣದಲ್ಲಿ ವಿರಾಜಪೇಟೆ ಹಾಗೂ ಮಡೀಕೆರೆ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಬೇಕು ಎಂದು ಬಿಜೆಪಿ ನಗರ ಘಟಕದಿಂದ ಶಿರ ಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ರಾಜ್ಯಪಾಲರಿಗೆ ಮುಖಂಡರುಗಳು ಶನಿವಾರ ಮನವಿ ಸಲ್ಲಿ ಸಿದರು.

ಈ ಕುರಿತು ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾ ರದಿಂದ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಳಗೊಂಡಿವೆ. ಅಲ್ಲದೇ ಹಿಂದೂ ಸಮಾಜಕ್ಕೆ ಕಡೆಗಣಿಸಿ ಒಲೈಕೆ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂಥರಗೌಡರ ಬೆಂಬಲಿಗರ ಬೆದರಿಕೆ ಮತ್ತು ಕಿರುಕುಳದಿಂದ ಬೇಸತ್ತು ಕೊಡಗಿನ ಬಿಜೆಪಿ ಮುಖಂಡ ವಿನಯ್ ಸೋಮಯ್ಯ ಆತ್ಮಹತೆಗೆ ಶರಣಾಗಿದ್ದಾರೆ. ಈ ಶಾಸಕರೇ ಆತ್ಮಹತ್ಯೆಗೆ ನೇರ ಕಾರಣ ಮರಣಪತ್ರ ಬರೆದಿಟ್ಟರೂ ಕ್ರಮ ಕೈಗೊಳ್ಳದಿರುವುದು ದುರ್ದೈವ ಎಂದು ಹೇಳಿದರು.‌

ಈ ಪ್ರಕರಣದಲ್ಲಿ ಶಾಸಕರ ಹೆಸರನ್ನು ಕೈಬಿಟ್ಟು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ನೈಜ ವಾಗಿ ಆತ್ಮಹತ್ಯೆಯಲ್ಲಿ ಶಾಸಕರ ಬೆದರಿಕೆ, ಕಿರುಕುಳ ಎಂಬುದು ಸ್ಪಷ್ಟವಾಗಿದ್ದರೂ ಶಾಸಕರ ವಿರುದ್ಧ ಎಫ್‌ಐ ಆರ್‌ನಲ್ಲಿ ಸೇರಿಸದೇ ರಾಜ್ಯಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ಕೂಡಲೇ ರಾಜ್ಯಪಾಲರು ಶಾಸಕರು ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸದಿದ್ದರೆ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಓಬಿಸಿ ಅಧ್ಯಕ್ಷ ಸಿ.ಟಿ.ಜಯ ವರ್ಧನ್, ನಗರ ಉಪಾಧ್ಯಕ್ಷರಾದ ಸತೀಶ್, ವೆಂಕಟೇಶ್, ರೇವನಾಥ್, ಪ್ರಧಾನ ಕಾರ್ಯದರ್ಶಿ ಎಂ.ಜಿ. ಬಸವರಾಜ್, ಕಾರ್ಯದರ್ಶಿ ಮಧು, ಮುಖಂಡರುಗಳಾದ ಸೀತರಾಮಭರಣ್ಯ, ಚಮೀನ್ ಮತ್ತಿರರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?