ಚಿಕ್ಕಮಗಳೂರು-ಹಿಂದೂಗಳ-ಸುರಕ್ಷತೆಗಾಗಿ-ಉಗಮಗೊಂಡ-ಪಕ್ಷ- ಬಿಜೆಪಿ-ಎಂ.ಆರ್.ದೇವರಾಜ್‌ಶೆಟ್ಟಿ

ಚಿಕ್ಕಮಗಳೂರು,- ಭವ್ಯಭಾರತ ವಿಭಜನೆಗೊಂಡ ಬಳಿಕ ನೆರೆದೇಶದಲ್ಲಿ ಸಿಲುಕಿಕೊಂಡ ಸಮಗ್ರ ಹಿಂದೂ ಅಣ್ಣ-ತಮ್ಮಂದಿರು ಹಾಗೂ ಮಾತೆಯರ ಸುರಕ್ಷತೆಗಾಗಿ ಮೊಟ್ಟಮೊದಲು ಉಗಮಗೊಂಡ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.

ನಗರದ ಪಾಂಚಜನ್ಯ ಕಚೇರಿಯಲ್ಲಿ ನಗರ ಬಿಜೆಪಿ ಮಂಡಲ ವತಿಯಿಂದ ಏರ್ಪಡಿಸಿದ್ಧ ಭಾರತೀಯ ಜನತಾ ಪಾರ್ಟಿ ೪೫ನೇ ಸಂಸ್ಥಾಪನ ದಿನದ ಪ್ರಯುಕ್ತ ದ್ವಜಾರೋಹಣ ನೆರವೇರಿಸಿ ಹಾಗೂ ಪಕ್ಷಗಾಗಿ ದು ಡಿದ ಮಹಾನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾನುವಾರ ಅವರು ಮಾತನಾಡಿದರು.

ರಾಷ್ಟ್ರ ಹಿತಗಾಗಿ ಶ್ಯಾಮ್ ಪ್ರಕಾಶ್ ಮುಖರ್ಜಿ ನೆಹರು ಮಂತ್ರಿ ಮಂಡಲದ ಸ್ಥಾನವನ್ನು ತ್ಯಜಿಸಿ ಭಾರ ತಾಂಭೆಯ ಸೇವೆಗೆ ಮುಡಿಪಿಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಪಾಕಿಸ್ತಾನಕ್ಕೆ ಬಿಡಬೇಕೆಂಬ ನಿರ್ಧಾರ ಕೈಗೊಂಡಾಗ, ಸಾರಸಗಟಾಗಿ ವಿರೋಧಿಸಿ ರಾಷ್ಟçದ ನೆಲವನ್ನು ಭಾರತೀಯರಿಗೆ ಉಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಹಿAದೂರಾಷ್ಟç ಕಲ್ಪನೆಯೊಂದಿಗೆ ಜನಸಂಘ ರಾಷ್ಟçದಲ್ಲಿ ಹೆಮ್ಮರವಾಗಿ ಬೆಳೆಯಿತು. ಅಂದಿನ ಕಾಂಗ್ರೆಸ್ ಸರ್ಕಾರ ಈ ಬೆಳವಣಿಗೆ ಸಹಿಸದೇ ಅನೇಕ ತೊಂದರೆ ನೀಡಿದ್ದನ್ನು ಮನಗಂಡು ಜನಸಂಘ ವಿಸರ್ಜಿಸಿ ಮುಂಚೂಣಿ ನಾಯಕರಾದ ವಾಜಪೇಯಿ, ಅಡ್ವಾಣಿ ಸಾರಥ್ಯದಲ್ಲಿ ೧೯೮೦ರಲ್ಲಿ ಬಿಜೆಪಿ ಪಕ್ಷ ಉಗಮಗೊಂಡು ರಾಷ್ಟç ರಾಜಕಾರಣಕ್ಕೆ ಸಂಸದರನ್ನು ಕೊಡುಗೆ ನೀಡಿತು ಎಂದು ಹೇಳಿದರು.

????????????????????????????????????

ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ, ರಾಷ್ಟ್ರದ ಅಸ್ಮಿತೆ ಉಳಿವಿಗಾಗಿ ವೈಚಾರಿಕತೆಯಡಿ ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪಿಸಿ ಕಾರ್ಯಕರ್ತರನ್ನು ಸಂಘಟಿಸಿತು. ವ್ಯಕ್ತಿಗಿಂತ ರಾಷ್ಟç ಮುಖ್ಯ, ದೇಶದ ಹಿತವೇ ಸ್ವಹಿತ ಎಂಬ ತತ್ವವನ್ನು ಸಾರಿದ ಮೊದಲ ಪಕ್ಷ ಭಾಜಪ ಎಂದು ತಿಳಿಸಿದರು.

ಭಾಜಪವು ಅಧಿಕಾರಕ್ಕೆ ಜೋತುಬೀಳದೇ ಸ್ವಾತಂತ್ರ್ಯ ಹೋರಾಟಗಾರ ಮೊರಾರ್ಜಿ ದೇಸಾಯಿ ಅವರ ನ್ನು ದೇಶದ ೪ನೇ ಪ್ರಧಾನಿ ಸೂಚಿಸಿತು. ಬಳಿಕ ಪ್ರಧಾನಮಂತ್ರಿ ಹುದ್ದೆಗೂ ವಾಜಪೇಯಿ ಹಾಗೂ ಅಡ್ವಾಣಿ ಯು ಆಸೆಪಟ್ಟಿಲ್ಲ. ಈ ಮಹಾನೀಯರ ಔಹಾರ್ದತೆ, ಆದರ್ಶ ಇಂದಿನ ರಾಜಕೀಯ ಮುಖಂಡರುಗಳು ಅ ಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್ ಬಿಜೆಪಿ ಆರಂಭದಲ್ಲಿ ಅನೇಕ ಸವಾಲು, ಸಂಕಷ್ಟವನ್ನು ಧೈರ್ಯವನ್ನು ಎದುರಿಸಿದ ಕಾರಣ ಇಂದು ರಾಷ್ಟçದಲ್ಲೇ ಹೆಚ್ಚು ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡಿದೆ. ಅಲ್ಲದೇ ಹೆಚ್ಚಿನ ಸದಸ್ಯತ್ವ ನೋಂದಾಯಿಸಿ ಪ್ರಪಂಚದ ದೊಡ್ಡಪಕ್ಷವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಹಿಂದುಳಿದ ವರ್ಗ ಮೋ ರ್ಚಾದ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರ ಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮಾಜಿ ಅಧ್ಯಕ್ಷ ಕವಿತಾ ಶೇಖರ್, ಉಪಾಧ್ಯಕ್ಷೆ ಅನುಮಧುಕರ್, ನಗರಸಭೆ ಸದಸ್ಯರಾದ ಮಧುಕುಮಾರ್, ರೂಪ, ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮು ಖಂಡರುಗಳಾದ ಜಸಂತಾ ಅನಿಲ್‌ಕುಮಾರ್, ವೀಣಾ, ಹೆಚ್.ಕೆ.ಕೇಶವಮೂರ್ತಿ, ಸಚ್ಚಿನ್‌ಗೌಡ, ದಿನೇಶ್, ಪ್ರದೀಪ್, ಎಸ್‌ಡಿ ಎಂ ಮಂಜು, ನಾರಾಯಣ್, ಬ್ಯಾಟರಿ ಮಂಜುನಾಥ್ ಮತ್ತಿತರರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?