ಚಿಕ್ಕಮಗಳೂರು-ತುಳಿತಕ್ಕೊಳಗಾದ,ದಲಿತ ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳುವಳಿ ರೂಪಿಸಿದವರು ಕಾನ್ಸಿರಾಂ:ಜಾಕೀರ್‌ ಹುಸೇನ್

ಚಿಕ್ಕಮಗಳೂರು-ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವೊಂದನ್ನು ಸ್ಥಾಪಿಸಿ ತುಳಿತಕ್ಕೊಳಗಾದ ದಲಿತ ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳವಳಿ ರೂಪಿಸಿದ ಕಾನ್ಸಿರಾಂ ಅವರು ದೇಶ ಕಂಡ ಅತ್ಯುನ್ನತ ರಾಜಕಾರಣಿ ಎಂದು ಬಿ.ಎಸ್‌.ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.

ನಗರದ ಜಿಲ್ಲಾ ಬಿ.ಎಸ್‌.ಪಿ ಕಚೇರಿಯಲ್ಲಿ ಬಿ.ಎಸ್.ಪಿ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸಿರಾಂ ಅವರ ಪರಿನಿಬ್ಬಾಣ ದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬುಧವಾರ ಅವರು ಮಾತನಾಡಿದರು.

ಕಾನ್ಸಿರಾಂ ಅವರು ರಾಜಕೀಯ ಅಧಿಕಾರದ ಒಂದರಿoದ ಮಾತ್ರ ಬಹುಜನರ ಅಭಿವೃದ್ದಿ, ಸಮಾಜದಲ್ಲಿ ಸಮಾನತೆ ತರಲು ಸಾಧ್ಯವೆಂದು ಅರಿತು ಬಹುಜನ ಸಮಾಜ ಪಕ್ಷವನ್ನು ಕಟ್ಟಿ ದೇಶದಲ್ಲಿ ಮೂರನೇ ಅತಿದೊಡ್ಡ ಪಕ್ಷವನ್ನಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸಮಾಜದಲ್ಲಿನ ಮೇಲು,ಕೀಳು,ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಪ್ರತಿಯೊಂದು ವರ್ಗಕ್ಕೂ ಅಧಿಕಾರದ ಅವಕಾಶ ಸಿಗಬೇಕು.ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ, ವಿದ್ಯೆಗೆ ತಕ್ಕಂತೆ ನೌಕರಿ ಸಿಗಬೇಕೆಂದು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು ಎಂದು ಹೇಳಿದರು.

????????????????????????????????????

ಡಾ|| ಬಿ.ಆರ್.ಅಂಬೇಡ್ಕರ್, ಕಾನ್ಷಿರಾಂ ಅವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮ ಸಮಾಜ ಮಾಡಬೇಕೆಂದು ಸಂಕಲ್ಪ ಮಾಡಿದ್ದರು.ಆದರೆ ಕೆಲವು ರಾಜಕೀಯ ಪಕ್ಷಗಳು ಜಾತಿಯನ್ನು ಪ್ರಬಲ ಅಸ್ತ್ರವನ್ನಾಗಿಸಿ , ಜಾತಿಯ ಮೇಲೆ ರಾಜಕಾರಣ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಾಮಾಜಿಕ,ಆರ್ಥಿಕ, ರಾಜಕೀಯವಾಗಿ ತುಳಿತಕ್ಕೆ ಒಳಗಾದ ಶೋಷಿತರ ಏಳಿಗೆಗೆ ಶ್ರಮಿಸಿದವರು ದಿ.ಕಾನ್ಸಿರಾಂ. ಮಾನವತಾವಾದಿ ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ತತ್ವ ಆದರ್ಶಗಳನ್ನು, ಆಚಾರ-ವಿಚಾರಗಳನ್ನು ಸೈಕಲ್ ಮೂಲಕ ದೇಶ ಸಂಚಾರ ಮಾಡಿ ಜನರಿಗೆ ತಿಳಿಸುವ ಮೂಲಕ ಸಮಾನತೆಗಾಗಿ ಹೋರಾಡಿದವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೆಂಬ್ಲಿ ಅಧ್ಯಕ್ಷ ಹೆಚ್.ಕುಮಾರ್, ದೇಶ ಕಂಡ ಮಹಾನ್ ನಾಯಕ ಕಾನ್ಸ್ಸಿರಾಂ ಅವರು,ಸಮ ಸಮಾಜ ನಿರ್ಮಾಣಕ್ಕೆ ಹಲವಾರು ಹೋರಾಟ ನಡೆಸಿದ್ದಾರೆ. ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಿದರೆ ಮುಂದಿನ ಪೀಳಿಗೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿಗಳಾದ ಕೆ.ಬಿ.ಸುಧಾ, ಜಾಕಿರ್ ಅಲಿಖಾನ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಯೋಜಕ ಪಿ.ಪರಮೇಶ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂ ಜುಳಾ, ಕಚೇರಿ ಕಾರ್ಯದರ್ಶಿ ಪಿ.ವಿ.ತಂಬನ್, ಅಸ್ಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಮುಖಂಡರುಗಳಾದ ಟಿ.ಎಚ್.ರತ್ನ, ದೀಪು ಮತ್ತಿತರರಿದ್ದರು.

—–ಸುರೇಶ್

Leave a Reply

Your email address will not be published. Required fields are marked *

× How can I help you?