ಅರಕಲಗೂಡಿನಲ್ಲಿ ಬುದ್ಧ ಜಯಂತಿ ಆಚರಣೆ-ಬುದ್ಧನ ಆದರ್ಶಗಳ ಅನುಸರಣೆ ಅವಶ್ಯಕ – ತಹಶೀಲ್ದಾರ್ ಸೌಮ್ಯ

ಅರಕಲಗೂಡು: ಮನುಕುಲದಿಗಾಗಿ ಬೌದ್ಧ ಧರ್ಮದ ಪ್ರಚಾರಕನಾದ ಗೌತಮ ಬುದ್ಧನ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅದರಂತೆ ನಡೆದುಕೊಂಡಾಗ ಮಾತ್ರ ದೇಶ ಉಳಿಯಲು ಸಾಧ್ಯವೆಂದು ತಹಶೀಲ್ದಾರ್ ಸೌಮ್ಯ ಹೇಳಿದರು.

ಪಟ್ಟಣದ ಡಿ. ದೇವರಾಜ ಅರಸು ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2558ನೇ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವರು ಹೇಳಿದರು, “ಗೌತಮ ಬುದ್ಧನು ತನ್ನ ಚಿಕ್ಕ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಪ್ರವಾಸ ಮಾಡಿ, ಗುರು ಹಿರಿಯರಿಂದ ಮಾರ್ಗದರ್ಶನ ಪಡೆದು, ನಂತರ ಅರಳಿಮರದ ಕೆಳಗೆ ತಪಸ್ಸುಮಾಡಿ ಜ್ಞಾನ ದೀಕ್ಷೆ ಪಡೆದರು. ನಂತರ ತನ್ನ ಜ್ಞಾನವನ್ನು ಇತರರಿಗೆ ಹಂಚುವ ಸಲುವಾಗಿ ದೇಶದಾದ್ಯಂತ ಪರ್ಯಟನೆ ನಡೆಸಿದರು. ಅಪಾರ ಶಿಷ್ಯವರ್ಗದ ಮೂಲಕ ಬೌದ್ಧ ಧರ್ಮದ ಪ್ರಚಾರದಲ್ಲಿ ಯಶಸ್ಸು ಗಳಿಸಿದರು. ಬುದ್ಧನ ಮಹಿಮೆ ಇಡೀ ಪ್ರಪಂಚವನ್ನೇ ಆವರಿಸಿಬಿಟ್ಟಿದೆ.”ಎಂದರು.

ಈ ಸಂದರ್ಭದಲ್ಲಿ ಗ್ರೇಟ್ 2 ಸ್ವಾಮಿ, ಬರಗೂರು ಆನಂದ್, ದುಮ್ಮಿ ಕೃಷ್ಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾರ್ಡನ್ ಉಮೇಶ್, ಪ.ಪಂ. ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ಹಾಗೂ ಇತರರು ಉಪಸ್ಥಿತರಿದ್ದರು.

– ಶಶಿಕುಮಾರ

Leave a Reply

Your email address will not be published. Required fields are marked *