ಕ್ರೀಡೆ Archives - Vibrant Mysore News https://vibrantmysorenews.com/category/sports/ Vibrant Mysore News Tue, 07 Jan 2025 04:47:07 +0000 en-US hourly 1 https://wordpress.org/?v=6.7.2 https://i0.wp.com/vibrantmysorenews.com/wp-content/uploads/2024/08/cropped-vibrantmysorenews-logo-1.png?fit=32%2C32&ssl=1 ಕ್ರೀಡೆ Archives - Vibrant Mysore News https://vibrantmysorenews.com/category/sports/ 32 32 183513056 ತುಮಕೂರು-ಪೊಲೀಸರು ಜನಸಾಮಾನ್ಯರ ಕಷ್ಟಗಳಿಗೆ ಶೀಘ್ರ ಸ್ಪಂದಿ ಸಬೇಕು-ಜಿಲ್ಲಾಧಿಕಾರಿ ಶುಭಕಲ್ಯಾಣ್ ಸಲಹೆ https://vibrantmysorenews.com/tmk-police-sports/ https://vibrantmysorenews.com/tmk-police-sports/#respond Tue, 07 Jan 2025 04:45:27 +0000 https://vibrantmysorenews.com/?p=9401 ತುಮಕೂರು-ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕಾರ್ಯೋನ್ಮುಖರಾಗಿರುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಅತ್ಯವಶ್ಯ ಎಂದು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ತಿಳಿಸಿದರು. ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಜಿಲ್ಲಾ…

The post ತುಮಕೂರು-ಪೊಲೀಸರು ಜನಸಾಮಾನ್ಯರ ಕಷ್ಟಗಳಿಗೆ ಶೀಘ್ರ ಸ್ಪಂದಿ ಸಬೇಕು-ಜಿಲ್ಲಾಧಿಕಾರಿ ಶುಭಕಲ್ಯಾಣ್ ಸಲಹೆ appeared first on Vibrant Mysore News.

]]>

ತುಮಕೂರು-ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕಾರ್ಯೋನ್ಮುಖರಾಗಿರುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಅತ್ಯವಶ್ಯ ಎಂದು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ತಿಳಿಸಿದರು.

ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಬಲೂನ್ ಮತ್ತು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ದೇಶ, ರಾಜ್ಯದಲ್ಲಿನ ನಾಗರಿಕರನ್ನು ರಕ್ಷಣೆ ಮಾಡುವಂತೆ ಪೊಲೀಸರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಇಂತಹ ಕ್ರೀಡಾಕೂಟ ಆಯೋಜಿಸುವುದು ಬಹುಮುಖ್ಯ.ಪೊಲೀಸರು ವರ್ಷಕ್ಕೊಮ್ಮೆ ಮೂರು ದಿನ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ. ತಮ್ಮ ದೈಹಿಕ ಹಾಗೂ ಮಾನಸಿಕ ಸದೃಢ ತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಮಯ ಸಿಕ್ಕಾಗ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಸಲಹೆ ನೀಡಿದರು.

ಸಾರ್ವಜನಿಕರಿಗೆ ಸರ್ಕಾರ ಎಂದಾಕ್ಷಣ ನೆನಪಾಗುವುದು ಪೊಲೀಸ್ ಇಲಾಖೆ. ಪೊಲೀಸರ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರೆ. ನಿಮ್ಮ ಕೈಯಲ್ಲಿ ಮಾತ್ರ ತಕ್ಷಣ ನ್ಯಾಯ ಒದಗಿಸಲು ಸಾಧ್ಯ. ಇದನ್ನು ಅರ್ಥೈಸಿಕೊಂಡು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಗರಿಕರು ಸಮಸ್ಯೆ ಹೊತ್ತು ಠಾಣೆಗಳಿಗೆ ಬಂದಾಗ ಕಾಳಜಿ, ಆಸಕ್ತಿಯಿಂದ ಸ್ಪಂದಿಸುವ ಮೂಲಕ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸರ್ಕಾರದ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಪೊಲೀಸರು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಪೊಲೀಸರು ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ನಾವು ಪೊಲೀಸರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂದಾಗ ಕಾನೂನು ಸುವ್ಯವಸ್ಥೆ ವಿಚಾರ, ಒತ್ತಡ ಇರುತ್ತದೆ. ಇಂದು ಎಲ್ಲರನ್ನು ಶಾಂತಿಯುತವಾಗಿರುವುದನ್ನು ನೋಡುತ್ತಿ ರುವುದು ಖುಷಿ ತಂದಿದೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು, ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿ, ಗಣ್ಯರನ್ನು ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಉಪವಿಭಾಗದ ಪೊಲೀಸ್ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಈ ಸಂದರ್ಭದರ್ಲಿ ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ, ಅಬ್ದುಲ್ ಖಾದರ್, ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಮಲ್ಲಿಕಾರ್ಜುನ್, 12ನೇ ಬೆಟಾಲಿಯನ್ ಕಮಾಂಡೆoಟ್ ಹಂಜಾ ಹುಸೇನ್ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

———–—–ಕೆ.ಬಿ ಚಂದ್ರಚೂಡ

The post ತುಮಕೂರು-ಪೊಲೀಸರು ಜನಸಾಮಾನ್ಯರ ಕಷ್ಟಗಳಿಗೆ ಶೀಘ್ರ ಸ್ಪಂದಿ ಸಬೇಕು-ಜಿಲ್ಲಾಧಿಕಾರಿ ಶುಭಕಲ್ಯಾಣ್ ಸಲಹೆ appeared first on Vibrant Mysore News.

]]>
https://vibrantmysorenews.com/tmk-police-sports/feed/ 0 9401
ತುಮಕೂರು:ಸಾಹೇ ವಿಶ್ವವಿದ್ಯಾಲಯ-ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿ-16 ಪುರುಷರ ಹಾಗೂ 8 ಮಹಿಳಾ ತಂಡಗಳಿಂದ ಪ್ರಶಸ್ತಿಗಾಗಿ ಸೆಣೆಸಾಟ https://vibrantmysorenews.com/tmk-saahe-sports-news/ https://vibrantmysorenews.com/tmk-saahe-sports-news/#respond Thu, 26 Dec 2024 11:59:24 +0000 https://vibrantmysorenews.com/?p=8592 ತುಮಕೂರು:ವಿದ್ಯಾರ್ಥಿಗಳ ಜೀವನದಲ್ಲಿ ಪಾಠದ ಜೊತೆಗೆ ಆಟೋಟವು ಸಹ ಉತ್ತಮವಾದ ಪಾತ್ರವನ್ನು ವಹಿಸುತ್ತದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಾಹೇ ವಿಶ್ವವಿದ್ಯಾಲಯ ಹಾಗೂ ಎಸ್‌ಎಸ್‌ಐಟಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿರುವ…

The post ತುಮಕೂರು:ಸಾಹೇ ವಿಶ್ವವಿದ್ಯಾಲಯ-ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿ-16 ಪುರುಷರ ಹಾಗೂ 8 ಮಹಿಳಾ ತಂಡಗಳಿಂದ ಪ್ರಶಸ್ತಿಗಾಗಿ ಸೆಣೆಸಾಟ appeared first on Vibrant Mysore News.

]]>

ತುಮಕೂರು:ವಿದ್ಯಾರ್ಥಿಗಳ ಜೀವನದಲ್ಲಿ ಪಾಠದ ಜೊತೆಗೆ ಆಟೋಟವು ಸಹ ಉತ್ತಮವಾದ ಪಾತ್ರವನ್ನು ವಹಿಸುತ್ತದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ತಿಳಿಸಿದರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಾಹೇ ವಿಶ್ವವಿದ್ಯಾಲಯ ಹಾಗೂ ಎಸ್‌ಎಸ್‌ಐಟಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವಂತಹ ಕ್ರೀಡಾಕೂಟದಂತಹ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಾಹೇ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಫ್ಲೋರಿಡಾ ಯೂನಿವರ್ಸಿಟಿಯ ಪ್ರೊ. ಎಸ್. ಎಸ್. ಅಯ್ಯಂಗಾರ್ ಮಾತನಾಡಿ, ಕ್ರೀಡೆ ಎನ್ನುವುದು ಜೀವನದಲ್ಲಿ ಪ್ರಮುಖವಾದ ಒಂದು ಅಂಶ. ಕ್ರೀಡೆ ಮನುಷ್ಯನಿಗೆ ಉತ್ತಮ ಯೋಚನೆ, ಕ್ರಿಯಾ ಶೀಲತೆ, ಧನಾತ್ಮಕ ಚಿಂತನೆಯನ್ನು ನೀಡುತ್ತದೆ ಅಲ್ಲದೆ ಮನುಷ್ಯ ದೈಹಿಕವಾಗಿ, ಆರೋಗ್ಯವಾಗಿ ಉತ್ತಮ ಜೀವನ ನಡೆಸಲು ಸಹಕಾರಿ ಎಂದು ಹೇಳಿದರು.

ಸಾಹೇ ವಿವಿಯ ಕುಲಸಚಿವರಾದ ಡಾ. ಎಂ. ಝಡ್. ಕುರಿಯನ್ ಅವರು ಮಾತನಾಡಿ, ಕ್ರೀಡಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಾಗುತ್ತದೆ, ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ನಾಯಕತ್ವದ ಗುಣ ಹೆಚ್ಚಾಗುತ್ತದೆ ಹಾಗೂ ತಮ್ಮ ತಂಡಕ್ಕಾಗಿ ಹೋರಾಡುವ ಮನಸ್ಥಿತಿಯನ್ನ ಕ್ರೀಡಾಪಟುಗಳು ಬೆಳೆಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ ಮಾತನಾಡಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಹಲವು ಕಾಲೇಜಿನ ತಂಡಗಳು ಭಾಗವಹಿಸಿವೆ. ಆಟದಲ್ಲಿ ಸೋಲು ಗೆಲುವು ಅನ್ನುವುದಕ್ಕಿಂತ ಸ್ಪಧೆಯಲ್ಲಿ ಭಾಗವಹಿ ಸುವುದು ಪ್ರಮುಖವಾಗಿದೆ. ಹಾಗಾಗಿ ಎಲ್ಲರೂ ಉತ್ತಮವಾಗಿ ಪಂದ್ಯದಲ್ಲಿ ಪಾಲ್ಗೊಳಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು.

ಈ ವಾಲೀಬಾಲ್ ಪಂದ್ಯದಲ್ಲಿ ಹಾಸನ, ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಾಲೇಜಿನ ತಂಡಗಳ 16 ಪುರುಷರ ತಂಡ ಹಾಗೂ 8 ಮಹಿಳಾ ತಂಡಗಳು ಭಾಗವಹಿಸಿದ್ದು ಈ ಪೈಕಿ ಒಟ್ಟು 12 ಪಂದ್ಯಗಳು ನಡೆದಿದ್ದು ನಾಲ್ಕು ತಂಡಗಳಾದ ಎಸ್‌ಎಸ್‌ಐಟಿ, ಎಸ್‌ಐಟಿ, ಎನ್‌ಎಂಎಐಟಿ ಮತ್ತು ಬಿಜಿಎಸ್‌ಸಿಇ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಇಂದು ಮಹಿಳಾ ವಿಭಾಗಕ್ಕೆ ಸೆಣಸಾಟ ನಡೆಯಲಿದೆ.

ಈ ವೇಳೆ ರೆಫರಿಗಳಾಗಿ ಸುರೇಶ್, ಗಿರೀಶ್, ಚನ್ನೆಗೌಡ, ಪ್ರದೀಪ್,ನಿಖಿಲ್ ಗೌಡ ಹಾಗೂ ನಂದೀಶ್ ಪಾಲ್ಗೊಂಡು ಪಂದ್ಯಗಳನ್ನು ನಡೆಸಿಕೊಟ್ಟರು.

ಇನ್ನು ಈ ವಾಲಿಬಾಲ್ ಪಂದ್ಯದ ಉದ್ಘಾಟನ ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಜಿ ಗುರುಶಂಕರ್, ಹಾಗೂ ಎಸ್‌ಎಸ್‌ಐಟಿ ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ರೇಣುಕಲತಾ ಎಸ್, ಎಸ್‌ಎಸ್‌ಎಸ್‌ಇ ಪ್ರಾಂಶುಪಾಲರಾದ ಡಾ. ಸಂಜೀವ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ರುದ್ರೇಶ್ ಕೆ.ಆರ್ ಮತ್ತು ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಜರಿದ್ದರು.

The post ತುಮಕೂರು:ಸಾಹೇ ವಿಶ್ವವಿದ್ಯಾಲಯ-ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿ-16 ಪುರುಷರ ಹಾಗೂ 8 ಮಹಿಳಾ ತಂಡಗಳಿಂದ ಪ್ರಶಸ್ತಿಗಾಗಿ ಸೆಣೆಸಾಟ appeared first on Vibrant Mysore News.

]]>
https://vibrantmysorenews.com/tmk-saahe-sports-news/feed/ 0 8592
ತುಮಕೂರು-ಸರ್ವೋದಯ ಬಾಲಕರ ಪ್ರೌಢ ಶಾಲೆ-ಪ್ರೀತಮ್ ಆರ್.-ತೇಜಸ್ ಎಂ ರವರಿಗೆ ಖೋಖೋ ಸ್ಪರ್ಧೆಯಲ್ಲಿ ಮೂರನೇ ಸ್ಥಾನ https://vibrantmysorenews.com/tmk-sarvodaya-boys-school-news/ https://vibrantmysorenews.com/tmk-sarvodaya-boys-school-news/#respond Wed, 25 Dec 2024 13:02:28 +0000 https://vibrantmysorenews.com/?p=8514 ತುಮಕೂರು-ನಗರದ ವಿಜಯನಗರದ ಸರ್ವೋದಯ ಬಾಲಕರ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೀತಮ್ ಆರ್. ಮತ್ತು ತೇಜಸ್ ಎಂ. ಇವರುಗಳು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ17ವರ್ಷ ಒಳಗಿನ ಬಾಲಕರ ಕ್ರೀಡಾಕೂಟದ 68ನೇ ರಾಷ್ಟ್ರೀಯ ಖೊಖೊ ಪಂದ್ಯಾವಳಿಯಲ್ಲಿ ಭಾಗವಹಿಸಿ ಎರಡನೇ ರನ್ನರ್ ಅಫ್ ನಲ್ಲಿ…

The post ತುಮಕೂರು-ಸರ್ವೋದಯ ಬಾಲಕರ ಪ್ರೌಢ ಶಾಲೆ-ಪ್ರೀತಮ್ ಆರ್.-ತೇಜಸ್ ಎಂ ರವರಿಗೆ ಖೋಖೋ ಸ್ಪರ್ಧೆಯಲ್ಲಿ ಮೂರನೇ ಸ್ಥಾನ appeared first on Vibrant Mysore News.

]]>

ತುಮಕೂರು-ನಗರದ ವಿಜಯನಗರದ ಸರ್ವೋದಯ ಬಾಲಕರ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೀತಮ್ ಆರ್. ಮತ್ತು ತೇಜಸ್ ಎಂ. ಇವರುಗಳು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ17ವರ್ಷ ಒಳಗಿನ ಬಾಲಕರ ಕ್ರೀಡಾಕೂಟದ 68ನೇ ರಾಷ್ಟ್ರೀಯ ಖೊಖೊ ಪಂದ್ಯಾವಳಿಯಲ್ಲಿ ಭಾಗವಹಿಸಿ ಎರಡನೇ ರನ್ನರ್ ಅಫ್ ನಲ್ಲಿ ಮೂರನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

The post ತುಮಕೂರು-ಸರ್ವೋದಯ ಬಾಲಕರ ಪ್ರೌಢ ಶಾಲೆ-ಪ್ರೀತಮ್ ಆರ್.-ತೇಜಸ್ ಎಂ ರವರಿಗೆ ಖೋಖೋ ಸ್ಪರ್ಧೆಯಲ್ಲಿ ಮೂರನೇ ಸ್ಥಾನ appeared first on Vibrant Mysore News.

]]>
https://vibrantmysorenews.com/tmk-sarvodaya-boys-school-news/feed/ 0 8514
ಬಣಕಲ್-ಈಶ ಫೌಂಡೇಶನ್ ಕ್ರೀಡಾಕೂಟ-ರಾಜ್ಯಮಟ್ಟಕ್ಕೆ ಆಯ್ಕೆ ಯಾದ ‘ಅಲಿಫ್ ಸ್ಟಾರ್’ ತಂಡ-ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ ಗ್ರಾಮಸ್ಥರು https://vibrantmysorenews.com/banakal-alif-star-tanda/ https://vibrantmysorenews.com/banakal-alif-star-tanda/#respond Mon, 25 Nov 2024 12:38:24 +0000 https://vibrantmysorenews.com/?p=6220 ಬಣಕಲ್-ಈಶ ಫೌಂಡೇಷನ್‌ ನ ಅಂಗ ಸಂಸ್ಥೆಯಾದ ಈಶ ಔಟ್‌ ರೀಚ್‌ ವತಿಯಿಂದ ಚಿಕ್ಕಮಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಬಣಕಲ್ ನ ಅಲಿಫ್ ಸ್ಟಾರ್ ತಂಡ ಪ್ರಥಮ ಸ್ಥಾನ ಗಳಿಸಿಕೊಳ್ಳುವುದರ ಜೊತೆಗೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ರಾಜ್ಯ…

The post ಬಣಕಲ್-ಈಶ ಫೌಂಡೇಶನ್ ಕ್ರೀಡಾಕೂಟ-ರಾಜ್ಯಮಟ್ಟಕ್ಕೆ ಆಯ್ಕೆ ಯಾದ ‘ಅಲಿಫ್ ಸ್ಟಾರ್’ ತಂಡ-ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ ಗ್ರಾಮಸ್ಥರು appeared first on Vibrant Mysore News.

]]>

ಬಣಕಲ್-ಈಶ ಫೌಂಡೇಷನ್‌ ನ ಅಂಗ ಸಂಸ್ಥೆಯಾದ ಈಶ ಔಟ್‌ ರೀಚ್‌ ವತಿಯಿಂದ ಚಿಕ್ಕಮಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಬಣಕಲ್ ನ ಅಲಿಫ್ ಸ್ಟಾರ್ ತಂಡ ಪ್ರಥಮ ಸ್ಥಾನ ಗಳಿಸಿಕೊಳ್ಳುವುದರ ಜೊತೆಗೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ರಾಜ್ಯ ಮಟ್ಟಕ್ಕೆಆಯ್ಕೆಯಾದ ಅಲೀಫ್ ಸ್ಟಾರ್ ತಂಡದ ಆಟಗಾರರು

ನಾಯಕ :ಆದಿಲ್,ಉಪನಾಯಕ :ಕಿಶೋರ್, ಸಫಾನ್,ನಿಹಾಲ್,ಮನೋಜ್.ಸೂಹೆಲ್, ರೀಫಾದ್, ರಶೀದ್, ಆಕಾಶ್, ಕಿರಣ.

ರಾಜ್ಯ ಮಟ್ಟದ ಪಂದ್ಯಾವಳಿ ಮೈಸೂರ್ ನಲ್ಲಿ ನಡೆಯಲಿದ್ದು,ಅಲಿಫ್ ಸ್ಟಾರ್ ತಂಡ ಅಲ್ಲಿ ಗೆಲುವನ್ನು ಸಾದಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂಬುದು ಬಣಕಲ್ ಜನರ ಹಾರೈಕೆಯಾಗಿದೆ.

—————-——–:ಸೂರಿ ಬಣಕಲ್

The post ಬಣಕಲ್-ಈಶ ಫೌಂಡೇಶನ್ ಕ್ರೀಡಾಕೂಟ-ರಾಜ್ಯಮಟ್ಟಕ್ಕೆ ಆಯ್ಕೆ ಯಾದ ‘ಅಲಿಫ್ ಸ್ಟಾರ್’ ತಂಡ-ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ ಗ್ರಾಮಸ್ಥರು appeared first on Vibrant Mysore News.

]]>
https://vibrantmysorenews.com/banakal-alif-star-tanda/feed/ 0 6220
ಮೈಸೂರು-ಪೈಲ್ವಾನ್ ಎಂ.ಮಹದೇವ ಪ್ರಸಾದ್ ಅವರಿಗೆ ದಿ.ಉಸ್ತಾದ್ ಕರಗಯ್ಯ ಪ್ರಶಸ್ತಿ https://vibrantmysorenews.com/mysuru-m-mahadev-news/ https://vibrantmysorenews.com/mysuru-m-mahadev-news/#respond Tue, 19 Nov 2024 13:38:07 +0000 https://vibrantmysorenews.com/?p=5880 ಮೈಸೂರು-ಮಾಜಿ ಮೇಯರ್ ಪೈಲ್ವಾನ್ ಪುರುಷೋತ್ತಮ್ ಅವರ ಅಭಿಮಾನಿ ಬಳಗದ ವತಿಯಿಂದ ನ.17ರoದು ದೊಡ್ಡಕೆರೆ ಮೈದಾನದ ದಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ 42 ಜೊತೆ ರಾಷ್ಟ್ರಮಟ್ಟದ ಅಮೋಘ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಅಶೋಕಪುರಂನ ಪೈಲ್ವಾನ್ ಮಹದೇವ ಪ್ರಸಾದ್ ಎಂ. ಭಾಗವಹಿಸಿ ಬೆಂಗಳೂರಿನ ಪೈಲ್ವಾನ್…

The post ಮೈಸೂರು-ಪೈಲ್ವಾನ್ ಎಂ.ಮಹದೇವ ಪ್ರಸಾದ್ ಅವರಿಗೆ ದಿ.ಉಸ್ತಾದ್ ಕರಗಯ್ಯ ಪ್ರಶಸ್ತಿ appeared first on Vibrant Mysore News.

]]>

ಮೈಸೂರು-ಮಾಜಿ ಮೇಯರ್ ಪೈಲ್ವಾನ್ ಪುರುಷೋತ್ತಮ್ ಅವರ ಅಭಿಮಾನಿ ಬಳಗದ ವತಿಯಿಂದ ನ.17ರoದು ದೊಡ್ಡಕೆರೆ ಮೈದಾನದ ದಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ 42 ಜೊತೆ ರಾಷ್ಟ್ರಮಟ್ಟದ ಅಮೋಘ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಅಶೋಕಪುರಂನ ಪೈಲ್ವಾನ್ ಮಹದೇವ ಪ್ರಸಾದ್ ಎಂ. ಭಾಗವಹಿಸಿ ಬೆಂಗಳೂರಿನ ಪೈಲ್ವಾನ್ ಗಣೇಶ್ಅ ವರನ್ನು ಪರಾಭವಗೊಳಿಸಿ, ದಿ.ಉಸ್ತಾದ್ ಕರಗಯ್ಯರವರ ಪ್ರಶಸ್ತಿ ಹಾಗೂ ಫಲಕವನ್ನು ಪಡೆದು ಜಯಶೀಲರಾಗಿದ್ದಾರೆ.

ಪೈಲ್ವಾನ್ ಮಹದೇವ ಪ್ರಸಾದ್ ಅವರು ಅಶೋಕಪುರಂ 12ನೇ ಕ್ರಾಸ್‌ನ ನಿವಾಸಿ ಮಹದೇವು ಹಾಗೂ ಲೇ.ಮಹದೇವಮ್ಮನವರ ಪುತ್ರ.ಅಶೊಕಪುರಂ ಚಿಕ್ಕಗರಡಿ ಪೈಲ್ವಾನ್ ಬಾಲಣ್ಣನವರ ಶಿಷ್ಯರು.

The post ಮೈಸೂರು-ಪೈಲ್ವಾನ್ ಎಂ.ಮಹದೇವ ಪ್ರಸಾದ್ ಅವರಿಗೆ ದಿ.ಉಸ್ತಾದ್ ಕರಗಯ್ಯ ಪ್ರಶಸ್ತಿ appeared first on Vibrant Mysore News.

]]>
https://vibrantmysorenews.com/mysuru-m-mahadev-news/feed/ 0 5880
ಮೂಡಿಗೆರೆ-14 ವರ್ಷದೊಳಗಿನವರ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ಪಂದ್ಯಾವಳಿ-ಚಿನ್ನದ ಸಾಧನೆಗೈದ ಶರಣ್ಯ,ಅಂಕಿತ https://vibrantmysorenews.com/mudigere-kabbaddi-news/ https://vibrantmysorenews.com/mudigere-kabbaddi-news/#respond Tue, 19 Nov 2024 11:46:37 +0000 https://vibrantmysorenews.com/?p=5849 ಮೂಡಿಗೆರೆ-14 ವರ್ಷದೊಳಗಿನವರ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬಿಳುಗುಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶರಣ್ಯ,ಮೂಡಿಗೆರೆ ಬಾಲಕಿಯರ ಪ್ರೌಢ ಶಾಲೆಯ ಅಂಕಿತ ಹಾವೇರಿ ತಂಡದ ಆಟಗಾರ್ತಿಯರಾಗಿ ಭಾಗವಹಿಸಿ ಚಿನ್ನದ ಪದಕ ಗಳಿಸುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

The post ಮೂಡಿಗೆರೆ-14 ವರ್ಷದೊಳಗಿನವರ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ಪಂದ್ಯಾವಳಿ-ಚಿನ್ನದ ಸಾಧನೆಗೈದ ಶರಣ್ಯ,ಅಂಕಿತ appeared first on Vibrant Mysore News.

]]>

ಮೂಡಿಗೆರೆ-14 ವರ್ಷದೊಳಗಿನವರ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬಿಳುಗುಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶರಣ್ಯ,ಮೂಡಿಗೆರೆ ಬಾಲಕಿಯರ ಪ್ರೌಢ ಶಾಲೆಯ ಅಂಕಿತ ಹಾವೇರಿ ತಂಡದ ಆಟಗಾರ್ತಿಯರಾಗಿ ಭಾಗವಹಿಸಿ ಚಿನ್ನದ ಪದಕ ಗಳಿಸುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬೆಳಗೊಡು ಗ್ರಾಮದ ಪ್ರೇಮ ದಿ.ಹರೀಶ್ ಅವರ ಮಗಳಾದ ಅಂಕಿತ ಹಾಗೂ ಹೊಕ್ಕಳ್ಳಿ ಗ್ರಾಮದ ಸಾವಿತ್ರಿ,ರವಿ ದಂಪತಿಯರ ಪುತ್ರಿ ಶರಣ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾಗವಹಿಸಿ ಈ ಸಾಧನೆಗೈದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ,ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

———–ಸೂರಿ ಬಣಕಲ್

The post ಮೂಡಿಗೆರೆ-14 ವರ್ಷದೊಳಗಿನವರ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ಪಂದ್ಯಾವಳಿ-ಚಿನ್ನದ ಸಾಧನೆಗೈದ ಶರಣ್ಯ,ಅಂಕಿತ appeared first on Vibrant Mysore News.

]]>
https://vibrantmysorenews.com/mudigere-kabbaddi-news/feed/ 0 5849
ಚಿಕ್ಕಮಗಳೂರು-ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶಕ್ಕೆ ಒತ್ತಾಯ https://vibrantmysorenews.com/ckm-kricket-news/ https://vibrantmysorenews.com/ckm-kricket-news/#respond Tue, 12 Nov 2024 13:22:28 +0000 https://vibrantmysorenews.com/?p=5369 ಚಿಕ್ಕಮಗಳೂರು-ಕ್ರಿಕೇಟ್ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಹಾಗೂ ಕ್ರೀಡಾಕೂಟ ಹಮ್ಮಿಕೊಳ್ಳಲು ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೋಮವಾರ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರನ್ನು ಭೇಟಿ ಮಾಡಿದ ಅವರು ತಾಲ್ಲೂಕಿನಲ್ಲಿ…

The post ಚಿಕ್ಕಮಗಳೂರು-ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶಕ್ಕೆ ಒತ್ತಾಯ appeared first on Vibrant Mysore News.

]]>

ಚಿಕ್ಕಮಗಳೂರು-ಕ್ರಿಕೇಟ್ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಹಾಗೂ ಕ್ರೀಡಾಕೂಟ ಹಮ್ಮಿಕೊಳ್ಳಲು ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೋಮವಾರ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರನ್ನು ಭೇಟಿ ಮಾಡಿದ ಅವರು ತಾಲ್ಲೂಕಿನಲ್ಲಿ ಲೆದರ್‌ಬಾಲ್ ಕ್ರಿಕೇಟ್ ಕ್ರೀಡಾಂಗಣಕ್ಕೆ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಜಿಲ್ಲಾಡಳಿತ ಕನಿಷ್ಟ 8 ಎಕರೆ ಭೂಮಿ ನೀಡಿದರೆ ಗುತ್ತಿಗೆ ಮೇರೆಗೆ ಅಭಿವೃದ್ಧಿಪಡಿಸಿ ಲೆದರ್ ಬಾಲ್ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಆಟೋಟಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡರು.

ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ಸಮರ್ಪಕ ಕ್ರೀಡಾಂಗಣವಿಲ್ಲದೇ ಅವಕಾಶದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಕ್ರಿಕೇಟ್ ಮೈದಾನ ನಿರ್ಮಿಸುವ ಉದ್ದೇಶವಿದೆ. ಅಲ್ಲದೇ ಸಾರ್ವಜನಿಕರಿಗೆ ವಾಕಿಂಗ್ ಅವಕಾಶವನ್ನು ಕಲ್ಪಿಸಿಕೊಡುವ ಆಕಾಂಕ್ಷಿಯಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಕೇಟ್ ಅಸೋಸಿಯೇಷನ್ ಶಿವಮೊಗ್ಗ ವಲಯ ಸಂಚಾಲಕ ಸದಾ ನಂದ, ನಿಕಟಪೂರ್ವ ವಲಯ ಸಂಚಾಲಕ ಡಿ.ಆರ್ ನಾಗರಾಜ್, ಶಿವಮೊಗ್ಗ ವಲಯ ಸಮಿತಿ ಸದಸ್ಯರಾದ ಹರೀಶ್, ಅಶೋಕ್, ಚಿಕ್ಕ ಮಗಳೂರು ಕ್ರಿಕೆಟ್ ಕ್ಲಬ್‌ನ ಕಾರ್ಯದರ್ಶಿ ಶಶಿಕುಮಾರ್, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್‌ನ ಸೈಯದ್ ಅಲಿ, ಸ್ಥಳಿಯ ವಲಯ ಸಂಚಾಲಕ ರಾಣಾ ಸ್ಪೋರ್ಟ್ಸ್ ಕ್ಲಬ್‌ನ ಹರೀಶ್ ಇದ್ದರು.

———-—ಸುರೇಶ್

The post ಚಿಕ್ಕಮಗಳೂರು-ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶಕ್ಕೆ ಒತ್ತಾಯ appeared first on Vibrant Mysore News.

]]>
https://vibrantmysorenews.com/ckm-kricket-news/feed/ 0 5369
ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್-ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ https://vibrantmysorenews.com/hasana-kabbaddi-selection-news/ https://vibrantmysorenews.com/hasana-kabbaddi-selection-news/#respond Sun, 10 Nov 2024 14:10:24 +0000 https://vibrantmysorenews.com/?p=5199 ಸಾಂದರ್ಭಿಕ ಚಿತ್ರ ಹಾಸನ-ಕೋಲಾರದಲ್ಲಿ ಇದೆ ತಿಂಗಳ 22 ನೇ ತಾರೀಕಿನಿಂದ 24 ನೇ ತಾರೀಕಿನವರೆಗೆ ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಹಾಸನ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ನ ತಂಡವು ಪಾಲ್ಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ…

The post ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್-ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ appeared first on Vibrant Mysore News.

]]>

ಸಾಂದರ್ಭಿಕ ಚಿತ್ರ

ಹಾಸನ-ಕೋಲಾರದಲ್ಲಿ ಇದೆ ತಿಂಗಳ 22 ನೇ ತಾರೀಕಿನಿಂದ 24 ನೇ ತಾರೀಕಿನವರೆಗೆ ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ.

ಈ ಚಾಂಪಿಯನ್ ಶಿಪ್ ನಲ್ಲಿ ಹಾಸನ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ನ ತಂಡವು ಪಾಲ್ಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ತಂಡಕ್ಕೆ ಆಟಗಾರರ ಆಯ್ಕೆಯು 12 ನೇ ತಾರೀಕಿನ ಮಂಗಳವಾರದಂದು ಚನ್ನರಾಯಪಟ್ಟಣದ ಎ1 ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.

ಆಸಕ್ತ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದೆಂದು ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ನ ಚೇರ್ಮೆನ್ ಸಿ.ಹೆಚ್ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕ್ರೀಡಾಪಟುಗಳು ಹಾಜರಿದ್ದು ನೋಂದಣಿ ಮಾಡಿಕೊಳ್ಳಬಹುದಾಗಿದ್ದು ಸಮಯಕ್ಕೆ ಸರಿಯಾಗಿ ಬಂದವರನ್ನಷ್ಟೇ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಕ್ರೀಡಾಪಟುಗಳಿಗೆ 31/01/2025 ಕ್ಕೆ 20 ವರ್ಷ ವಯೋಮಿತಿ ಮೀರಿರಬಾರದು,ಹಾಗು ಬಾಲಕರು 70 ಕೇಜಿ ಹಾಗೂ ಬಾಲಕಿಯರು 65 ಕೇಜಿ ತೂಕ ಮೀರಿರಬಾರದು ಎಂಬ ನಿಬಂಧನೆಗಳಿದ್ದು ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ರಂಗನಾಥ್ 8660014606
ಸಿ.ಹೆಚ್ ಮಹೇಶ್ 9740227042
ಇವರನ್ನು ಸಂಪರ್ಕಿಸಬಹುದು ಎಂದು ಸೂಚಿಸಲಾಗಿದೆ .

The post ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್-ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ appeared first on Vibrant Mysore News.

]]>
https://vibrantmysorenews.com/hasana-kabbaddi-selection-news/feed/ 0 5199
ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ https://vibrantmysorenews.com/hasana-kabbaddi-game-news/ https://vibrantmysorenews.com/hasana-kabbaddi-game-news/#respond Sun, 10 Nov 2024 13:57:08 +0000 https://vibrantmysorenews.com/?p=5194 ——————————————-ಸಾಂದರ್ಭಿಕ ಚಿತ್ರ ಹಾಸನ-ಕೋಲಾರದಲ್ಲಿ ಇದೆ ತಿಂಗಳ 22 ನೇ ತಾರೀಕಿನಿಂದ 24 ನೇ ತಾರೀಕಿನವರೆಗೆ ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಹಾಸನ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ನ ತಂಡವು ಪಾಲ್ಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ…

The post ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ appeared first on Vibrant Mysore News.

]]>

——————————————-ಸಾಂದರ್ಭಿಕ ಚಿತ್ರ

ಹಾಸನ-ಕೋಲಾರದಲ್ಲಿ ಇದೆ ತಿಂಗಳ 22 ನೇ ತಾರೀಕಿನಿಂದ 24 ನೇ ತಾರೀಕಿನವರೆಗೆ ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ.

ಈ ಚಾಂಪಿಯನ್ ಶಿಪ್ ನಲ್ಲಿ ಹಾಸನ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ನ ತಂಡವು ಪಾಲ್ಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ತಂಡಕ್ಕೆ ಆಟಗಾರರ ಆಯ್ಕೆಯು 12 ನೇ ತಾರೀಕಿನ ಸೋಮವಾರದಂದು ಚನ್ನರಾಯಪಟ್ಟಣದ ಎ1 ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.

ಆಸಕ್ತ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದೆಂದು ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ನ ಕಾರ್ಯದರ್ಶಿ ಸಿ.ಹೆಚ್ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕ್ರೀಡಾಪಟುಗಳು ಹಾಜರಿದ್ದು ನೋಂದಣಿ ಮಾಡಿಕೊಳ್ಳಬಹುದಾಗಿದ್ದು ಸಮಯಕ್ಕೆ ಸರಿಯಾಗಿ ಬಂದವರನ್ನಷ್ಟೇ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಕ್ರೀಡಾಪಟುಗಳಿಗೆ 31/01/2025 ಕ್ಕೆ 20 ವರ್ಷ ವಯೋಮಿತಿ ಮೀರಿರಬಾರದು,ಹಾಗು ಬಾಲಕರು 70 ಕೇಜಿ ಹಾಗೂ ಬಾಲಕಿಯರು 65 ಕೇಜಿ ತೂಕ ಮೀರಿರಬಾರದು ಎಂಬ ನಿಬಂಧನೆಗಳಿದ್ದು ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ರಂಗನಾಥ್ 8660014606
ಸಿ.ಹೆಚ್ ಮಹೇಶ್ 9740227042
ಇವರನ್ನು ಸಂಪರ್ಕಿಸಬಹುದು ಎಂದು ಸೂಚಿಸಲಾಗಿದೆ .

The post ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್ ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ appeared first on Vibrant Mysore News.

]]>
https://vibrantmysorenews.com/hasana-kabbaddi-game-news/feed/ 0 5194
ಕೆ.ಆರ್.ಪೇಟೆ-ಬೋಚಿಬಾಲ್ ಅಂತಾರಾಷ್ಟ್ರೀಯ ಕ್ರೀಡಾ ಕೂಟ-ವಿಶೇಷಚೇತನ ಯುವತಿ ಮುರುಕನಹಳ್ಳಿ ಮಂಜುಳಾ ಸ್ಪರ್ದಿ-ಆರ್ ಟಿ ಓ ಮಲ್ಲಿಕಾರ್ಜುನ್ ರಿಂದ ಬೀಳ್ಕೊಡುಗೆ https://vibrantmysorenews.com/k-r-pete-bochiball-sparde-news/ https://vibrantmysorenews.com/k-r-pete-bochiball-sparde-news/#respond Sat, 09 Nov 2024 14:32:23 +0000 https://vibrantmysorenews.com/?p=5156 ಕೆ.ಆರ್.ಪೇಟೆ-ತಾಲೂಕಿನ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮಿ ಭೂವರಾಹನಾಥ ಬುದ್ಧಿಮಾಂದ್ಯ ಶಾಲೆಯ ಯುವತಿ ಮಂಜುಳಾ ರಾಷ್ಟ್ರೀಯ ಬೋಚಿಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ, ನವದೆಹಲಿಯಲ್ಲಿ ಇದೇ ನವೆಂಬರ್ 18 ರಿಂದ 24ರವರೆಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ…

The post ಕೆ.ಆರ್.ಪೇಟೆ-ಬೋಚಿಬಾಲ್ ಅಂತಾರಾಷ್ಟ್ರೀಯ ಕ್ರೀಡಾ ಕೂಟ-ವಿಶೇಷಚೇತನ ಯುವತಿ ಮುರುಕನಹಳ್ಳಿ ಮಂಜುಳಾ ಸ್ಪರ್ದಿ-ಆರ್ ಟಿ ಓ ಮಲ್ಲಿಕಾರ್ಜುನ್ ರಿಂದ ಬೀಳ್ಕೊಡುಗೆ appeared first on Vibrant Mysore News.

]]>

ಕೆ.ಆರ್.ಪೇಟೆ-ತಾಲೂಕಿನ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮಿ ಭೂವರಾಹನಾಥ ಬುದ್ಧಿಮಾಂದ್ಯ ಶಾಲೆಯ ಯುವತಿ ಮಂಜುಳಾ ರಾಷ್ಟ್ರೀಯ ಬೋಚಿಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ, ನವದೆಹಲಿಯಲ್ಲಿ ಇದೇ ನವೆಂಬರ್ 18 ರಿಂದ 24ರವರೆಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರು ಕ್ರೀಡಾಪಟು ಮಂಜುಳಾ ಮತ್ತು ತರಬೇತಿ ಶಿಕ್ಷಕಿ ಪ್ರೀತಿ ಅವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.

ಅಂತಾರಾಷ್ಟ್ರೀಯ ಬೋಚಿ ಬಾಲ್ ಕ್ರೀಡಾ ಕೂಟದಲ್ಲಿ 15 ರಾಷ್ಟ್ರಗಳ ತಂಡಗಳಲ್ಲಿ ಭಾರತ ದೇಶದ ತಂಡವನ್ನು ಪ್ರತಿನಿಧಿಸಲು ನವದೆಹಲಿಗೆ ತೆರಳುತ್ತಿರುವ ವಿಶೇಷಚೇತನ ಪ್ರತಿಭೆ ಮಂಜುಳ ಮತ್ತು ಕೋಚ್ ಪ್ರೀತಿ ಅವರನ್ನು ಸನ್ಮಾನಿಸಿ ಗೌರವಿಸಿದ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಅವರು ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಗೆದ್ದು ಭಾರತ ದೇಶದ ಹಿರಿಮೆಯನ್ನು ಎತ್ತಿಹಿಡಿದು ನಾಡಿನ ಕೀರ್ತಿಯನ್ನು ಬೆಳಗುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀ ಭೂವರಾಹ ಬುದ್ಧಿ ಮಾಂಧ್ಯ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರಂಜನ್, ಆಡಳಿತಾಧಿಕಾರಿ ಸುಷ್ಮಾ, ವಿನಯ್‌ಕುಮಾರ್, ಮಣಿ, ಸಂತೋಷ್, ವಿಜಯ್ ಮತ್ತಿತರರು ಉಪಸ್ಥಿತರಿದ್ದರು.

——————--ಶ್ರೀನಿವಾಸ್ ಕೆ ಆರ್ ಪೇಟೆ

The post ಕೆ.ಆರ್.ಪೇಟೆ-ಬೋಚಿಬಾಲ್ ಅಂತಾರಾಷ್ಟ್ರೀಯ ಕ್ರೀಡಾ ಕೂಟ-ವಿಶೇಷಚೇತನ ಯುವತಿ ಮುರುಕನಹಳ್ಳಿ ಮಂಜುಳಾ ಸ್ಪರ್ದಿ-ಆರ್ ಟಿ ಓ ಮಲ್ಲಿಕಾರ್ಜುನ್ ರಿಂದ ಬೀಳ್ಕೊಡುಗೆ appeared first on Vibrant Mysore News.

]]>
https://vibrantmysorenews.com/k-r-pete-bochiball-sparde-news/feed/ 0 5156