ಕೊರಟಗೆರೆ-ಹುಟ್ಟು-ಹಬ್ಬಗಳನ್ನು-ಸಾರ್ವಜನಿಕ-ಸೇವೆಯನ್ನಾಗಿ- ಆಚರಿಸಿ-ಕಾಂಗ್ರೆಸ್-ಮುಖಂಡ-ಮಹಾಲಿಂಗಪ್ಪ-ಕರೆ

ಕೊರಟಗೆರೆ :- ಹುಟ್ಟು ಹಬ್ಬಗಳನ್ನು ಸಾರ್ವಜನಿಕ ಸೇವೆಯನ್ನಾಗಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ತಿಳಿಸಿದರು.

ಅವರು ತಮ್ಮ 56ನೇ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಗೂ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪಠ್ಯದ ಸಲಕರಣೆಗಳನ್ನು ವಿತರಿಸಿ ಮಾತನಾಡಿ ನನ್ನ ಹುಟ್ಟು ಹಬ್ಬವನ್ನು ನಮ್ಮ ಸ್ನೇಹಿತರ ಜೊತೆಗೂಡಿ ಸಾರ್ವಜನಿಕ ಸೇವೆಯನ್ನಾಗಿ ಮಾಡಿಕೊಂಡಿರುವುದು ಸಂತೋಷ ತಂದಿದೆ.

ನಮ್ಮ ಕೊರಟಗೆರೆ ಪಟ್ಟಣದ ಬಸ್ಟಾಂಡ್ ಗೆಳೆಯರ ಬಳಗದ ಬೇಡಿಕೆಯಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕವನ್ನು ನಮ್ಮ ನಾಯಕರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಂದ ಹಾಕಿಸಿಕೊಡಲಾಗುವುದು ಮುಂದಿನ ದಿನಗಳಲ್ಲೂ ಸಹ ಸಾರ್ವಜನಿಕ ಸೇವೆಗೆ ಬದ್ದನಾಗಿರುತ್ತೇನೆ.

ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಪ್ರೇಮಮಹಾಲಿಂಗಪ್ಪ ಮಾತನಾಡಿ, ಹಲವು ವರ್ಷಗಳಿಂದ ನಮ್ಮ ಕುಟುಂಬದವರು ಸಾರ್ವಜನಿಕ ಸೇವೆಯಲ್ಲಿ ತೋಡಗಿಸಿಕೊಂಡಿದ್ದೇವೆ ಸರ್ಕಾರಿ ಶಾಲಾ ಮಕ್ಕಳಿಗೆ ಜನಪ್ರತಿನಿಧಿಗಳಾದ ನಾವುಗಳು ಈ ರೀತಿಯ ಕಾರಣಗಳನ್ನು ಇಟ್ಟುಕೊಂಡು ಸೇವೆ ಮಾಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ನೆರವಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಕಾರ್‌ಮಹೇಶ್ ಮಾತನಾಡಿ, ಇಂದು ಮಹಾಲಿಂಗಪ್ಪ ಅಭಿಮಾನಿ ಬಳಗದಿಂದ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಬಸ್ಟಾಂಡ್‌ನಲ್ಲಿ ಬಡವರಿಗೆ ಸಹಿ ಹಂಚಿಸಲಾಗಿದ್ದು, ಬಿಸಿಲು ಹೆಚ್ಚಾದರಿಂದ ಮಜ್ಜಿಗೆಯನ್ನು ವಿತರಿಸಲಾಗಿದೆ, ಮಹಾಲಿಂಗಪ್ಪ ನವರು ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಅವರು ಮುಂದೆ ಡಾ.ಜಿ.ಪರಮೇಶ್ವರ ರವರ ಆಶೀರ್ವಾದದಿಂದ ಯಾವುದಾದರು ಕ್ಷೇತ್ರದಿಂದ ಶಾಸಕರಾಗಲಿ ಎನ್ನವುದು ನಮ್ಮಗಳ ಆಸೆ ಎಂದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಪುರುಷೋತ್ತಮ್‌ನಾಯಕ್ ಕಸಬಾ ವಿ.ಎಸ್.ಎಸ್.ಎನ್. ಆದ್ಯಕ್ಷ ಕೆ.ಎಸ್.ವಿನಯಕುಮಾರ್, ಟಿ.ಎ.ಪಿ.ಸಿ.ಎಂ.ಎಸ್ ಅದ್ಯಕ್ಷ ಜಿ.ಎಂ.ಶಿವಾನಂದ್, ಮುಖಂಡರಾದ ಯೋಗೀಶ್, ಕುದುರೆಸತ್ಯನಾರಾಯಣ್. ಸೈಯದ್‌ಸೈಪುಲ್ಲಾ, ಸಿದ್ದಲಿಂಗಯ್ಯ, ನೇಗಲಾಲರಮೇಶ್, ಚಿಕ್ಕನಾರಾಯಣ್, ನಾಗೇಶ್, ಶಿವರಾಜ, ಅನಿಲ್, ಬಿದರೇಶ್ ಸೇರಿದಂತೆ ಇತರರು ಹಾಜರಿದ್ದರು.

– ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?