ಚಡಚಣ-ನಾಗಠಾಣ ಕ್ಷೇತ್ರದ ಜನತೆಗೆ ಚುಣಾವಣೆ ಸಂದರ್ಭದಲ್ಲಿ ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತೇನೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಅವರು ಧೂಳಖೇಡ ಗ್ರಾಮದಲ್ಲಿ ನಡೆದ ಶ್ರೀ ಲಕ್ಷ್ಮೀ ದೇವಸ್ಥಾನ ಕಟ್ಟಡ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರದ ಜನಪ್ರಿಯ ಐದು ಗ್ಯಾರಂಟಿ ಯೋಜನೆಗಳಿಂದ ಅನುದಾನದಲ್ಲಿ ಕೊರತೆ ಉಂಟಾಗಿದೆ.ಆದರೂ ದೃತಿಗೆಡದೆ ಅನುದಾನ ತಂದು ನನ್ನ ಕ್ಷೇತ್ರದ ಮತದಾರರಿಗೆ ಕೊಟ್ಟಿರುವ ಭರವಸೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ ಎಂದು ಅವರು ಭರವಸೆ ಕೊಟ್ಟರು.
ಡಾ. ಬಿ ಆರ್ ಅಂಬೇಡ್ಕರರವರ ಆಶಯದಂತೆ ಜಾತ್ಯಾತೀತತೆಯ ಅಡಿಯಲ್ಲಿ ಬಡ ಸಮುದಾಯದ ಜನರಿಗೆ ಜಾತಿ ಭೇದವಿಲ್ಲದೇ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ತಲುಪಿಸುವ ಕಾರ್ಯ ಮಾಡುತ್ತಿದೆ.ನಾನು ಸಹ ಪ್ರತಿಯೊಂದು ಗ್ರಾಮಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ಕೊಡುತ್ತೇನೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ದೇವಸ್ಥಾನಕ್ಕೆ ಸದ್ಯ ಕೊಟ್ಟಿರುವ ಅನುದಾನದಲ್ಲಿ ಕಟ್ಟಡ ಪೂರ್ತಿಯಾಗಲ್ಲ ಹೆಚ್ಚಿನ ಅನುದಾನ ಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಹಾತೇಶ ಹಿರೇಮಠ ವಹಿಸಿ ಆಶಿರ್ವಚನ ನೀಡಿದರು.
ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ, ಬಾಬಸಾಹೇಬ ವಿಜಯದಾರ, ಸೋಮುಗೌಡ ಪಾಟೀಲ, ದಯಾನಂದ ಪಾಟೀಲ, ರಾಜಕುಮಾರ ಬಿರಾದಾರ, ಮಹಾದೇವ ನಗರೆ, ಹಣಮಂತ ಧೂಖೇಡ, ಸುರೇಶ ಪೂಜಾರಿ, ರಮೇಶ ಪೂಜಾರಿ, ಶ್ರೀಶೈಲ ನಿಲೂರೆ, ಶಂಕರ ಭೈರಗೊಂಡ, ರಾಜಕುಮಾರ ಕಾಳೆ, ಬಂದೇನವಾಜ ಮುಲ್ಲಾ, ಭೀಮಾಶಂಕರ ಭೈರಗೊಂಡ, ಸುಧಾಕಾರ ನೀಲೂರೆ, ಸುರೇಶ ಕಂಬಾರ, ರಾಯಗೊಂಡ ರಗಟೆ, ಮಲ್ಲಿಕಾರ್ಜುನ ನಗರೆ, ಸಚೀನ ತಾವಸ್ಕರ ಗಡ್ಡೆಪ್ಪ ನಾಟೀಕಾರ ಭೀರೇಶ ಕೊಡತೆ ಮತ್ತು ಗ್ರಾಮಸ್ಥರು ಇದ್ದರು.
ಕಾರ್ಯಕ್ರಮವನ್ನು ಸಿದ್ದಾರಾಮ ದಾಬೆ ನಿರೂಪಿಸಿ ವಂದಿಸಿದರು.