ಚಾಮರಾಜನಗರ– ಬೇಸಿಗೆ ರಜೆಗಳು ಮಕ್ಕಳಿಗೆ ಒಂದು ಮನಸ್ಸಿಗೆ ಮುದ ನೀಡುವ ವೇದಿಕೆಯಾಗಬೇಕು ಮನೋಬಲ ವಿಚಾರಶಕ್ತಿ ಕಲಿಯುವ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೇಸಿಗೆ ರಜೆಗಳು ಪೂರಕ ಎಂದು ಮನೋಬಲ ತರಬೇತುದಾರರಾದ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಭಗವಂತನ ಸೃಷ್ಟಿಯಲ್ಲಿ ಅತ್ಯಂತ ಸುಂದರವಾದ ಹೂಗಳು ಎಂದರೆ ಮಕ್ಕಳು. ಮಕ್ಕಳ ಜೀವನ ಬಹಳ ಸುಂದರ. ಮಕ್ಕಳೆಂದರೆ ಭಗವಂತ ಸಮಾನ ಅವರ ಮನಸ್ಸು ಅಷ್ಟು ಶುದ್ದವಾಗಿರುತ್ತೆ ನಿರ್ಮಲವಾಗಿರುತ್ತದೆ ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಇರುತ್ತದೆ ಪ್ರತಿಭೆ ಎನ್ನುವುದು ಅನರ್ಘ್ಯರತ್ನ.ಆ ಪ್ರತಿಭೆಗೆ ಒಂದು ವೇದಿಕೆ ಬೇಕು ಆವಾಗ ಮಾತ್ರ ಅವರು ಮುಂದೆ ಬರಲು ಸಾಧ್ಯ ಎಂದರು.
ಪರಿಸರ ಪ್ರೇಮಿ ಸಿ. ಎಂ. ವೆಂಕಟೇಶ್ ಮಾತನಾಡಿ, ಮಕ್ಕಳು ಎಲ್ಲಿ ಸೇರುತ್ತಾರೋ ಅಲ್ಲಿ ಮರ-ಗಿಡಗಳ ಪರಿಚಯ ಕೊಡುವುದು ನನ್ನ ಹವ್ಯಾಸ ಮರ ಗಿಡಗಳನ್ನು ಬೆಳೆಸಿರಿ ಜೀವ ಸಂಕುಲವನ್ನು ಉಳಿಸಿರಿ ಇದು ಪ್ರತಿಯೊಬ್ಬರ ಧ್ಯೇಯ ವಾಕ್ಯವಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಯ ಜಿಲ್ಲಾ ತರಬೇತಿ ಸಂಯೋಜಕರಾದ ಟಿ ಜೇ ಸುರೇಶ್ ಮಾತನಾಡಿ, ಮಕ್ಕಳು ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಚೆಲ್ಲಲು ಶಿಬಿರವು ಸಹಕಾರಿಯಾಗಿರುವ ಕಾರಣ ಮಕ್ಕಳು ಮುಕ್ತವಾಗಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಈ ಶಿಬಿರದಲ್ಲಿ ಹೊರ ತರಲು ಪ್ರಯತ್ನಿಸಬೇಕು. ಮೊಗ್ಗಿನಂತಿರುವ ಮಕ್ಕಳ ಮನಸ್ಸು ಹೂವಿನಂತೆ ಅರಳುವಂತೆ ಮಾಡಲು ಬೇಸಿಗೆ ಶಿಬಿರವು ನೆರವಾಗಲಿದೆ.ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಶಿಲ್ಪಿಗಳಾದ್ದರಿಂದ ಮಕ್ಕಳು ಹೊಸ ವಿಚಾರಗಳನ್ನು ಕಲಿತು, ಸಾಧನೆ ಮಾಡಲು ಸಹಾಯವಾಗಲಿದೆ. ಮಕ್ಕಳಲ್ಲಿ ರಾಷ್ಟ್ರ ಭಕ್ತಿಯನ್ನು ತುಂಬುವ ವಿಚಾರಗಳು, ಪರೋಪಕಾರದ ಗುಣಗಳು, ತಂದೆ-ತಾಯಿಗಳಿಗೆ, ಗುರು-ಹಿರಿಯರೊಂದಿಗೆ ಯಾವ ರೀತಿ ಗೌರವ ಕೊಡಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ಏನು ಮಾಡಬೇಕು ಎಂಬ ವಿಚಾರಗಳನ್ನು ಶಿಬಿರಗಳು ತಿಳಿಸಿಕೊಡುತ್ತದೆ ಎಂದರು.
ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಪುಟ್ಟಶೇಖರ ಮೂರ್ತಿ ಮಾತನಾಡಿ, ಮಕ್ಕಳು ಕಾಡಿನ ಬಗ್ಗೆ ನಿಕಟ ಸಂಬಂದ ಹೊಂದಿ ಅದರ ಪೂರ್ಣ ಮಾಹಿತಿ ಅರ್ಥಮಾಡಿಕೊಳ್ಳುವುದು ಬಹಳ ಒಳಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ ನ್ಯಾಯಾಂಗ ಇಲಾಖೆ ಶ್ರೀನಿವಾಸ್ ಟೀಚರ್ ನಾಗರಾಜ್ ಶೋಭಾ ಶಿವ ಕಮಲ ಜಯಲಕ್ಷ್ಮಿ ಹಾಜರಿದ್ದರು ಕಮಲಮ್ಮ ಹಾಜರಿದ್ದರು.