ಚಾಮರಾಜನಗರ-ಇಂದಿನ-ಮಕ್ಕಳಿಗೆ-ಗುರುಕುಲ-ಶಿಕ್ಷಣ-ಪದ್ಧತಿ- ಅವಶ್ಯಕ-ರಾಜ-ಯೋಗಿನಿ-ಬ್ರಹ್ಮಾಕುಮಾರಿ-ದಾನೇಶ್ವರೀಜೀ

ಚಾಮರಾಜನಗರ -ಇಂದಿನ ಯುಗದ ಶಿಕ್ಷಣಗಳು ದಿನನಿತ್ಯದ ಸಂಶೋಧನೆಯಿಂದ ಉನ್ನತ ಶಿಖರಕ್ಕೆ ಏರುತ್ತಿದ್ದರೂ ಸಹ ಮಾನವೀಯ ಮೌಲ್ಯ ಭರಿತ ಶಿಕ್ಷಣವು ಮಾಯವಾಗುತ್ತಿದೆ. ಇಂದಿನ ಮಕ್ಕಳಿಗೆ ಗುರುಕುಲ ಶಿಕ್ಷಣ ಪದ್ಧತಿಯು ಬಹಳ ಅವಶ್ಯಕವಾಗಿದೆ ಎಂದು ಮನೋಬಲ ತರಬೇತುದಾರರು, ಸ್ವಾಮಿ ವಿವೇಕಾನಂದ ರಾಷ್ಟ್ರ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ  ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.

 ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ನಡೆಯುತ್ತಿರುವ ಮೂರು ದಿನಗಳ ಚಿಣ್ಣರ ಬೇಸಿಗೆ ಸಂಬ್ರಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು 

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿ ಮಾಘ ಸ್ನಾನ ಮಾಡುವಂತಿದೆ ಭೌತಿಕ ಮಟ್ಟದಲ್ಲಿ ಎಷ್ಟೇ ವಿದ್ಯೆಯನ್ನು ಕಲಿಸಿದರೂ ಮನಸ್ಸನ್ನು ಸಧೃಡ ಮಾಡುವಂತಹ ಶಿಕ್ಷಣವು ಮರೆಮಾಚುತ್ತಿದೆ. ಮನಸ್ಸು ಸದೃಢವಾಗಲು ಧ್ಯಾನದ ಅವಶ್ಯಕತೆ ಇದೆ ಧ್ಯಾನವನ್ನು ಮಾಡಲು ಆಧ್ಯಾತ್ಮಿಕ ಶಿಕ್ಷಣವೂ ಅಷ್ಟೇ ಅಗತ್ಯವಾಗಿದೆ  ಎಂದು ವಿವರಿಸಿದರು.

ಹಿಂದೆ ರಾಜ ಮಹಾರಾಜರು,ರಾಮಕೃಷ್ಣಾದಿಯಾಗಿ  ಕಾಡಿನಲ್ಲಿ ಹೋಗಿ ಗುರುಕುಲ ಶಿಕ್ಷಣ ಪದ್ಧತಿಯಲ್ಲೇ ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನದ ಮೌಲ್ಯಗಳನ್ನ ಬಿಟ್ಟು ನಮಗೆ ಹೋಗಿದ್ದಾರೆ ಅವರು ವಿದ್ಯೆಯನ್ನು ಕಲಿಯಬೇಕೆಂದರೆ  ಆಶ್ರಮದ ಕೆಲಸಗಳಾದ ನೀರನ್ನು ತಂದು ಕೊಡುತ್ತಿದ್ದರು. ಕಟ್ಟಿಗೆಯನ್ನು ತಂದು ಕೊಡುತ್ತಿದ್ದರು ನಂತರವೇ ಅವರ ವಿದ್ಯಾಭ್ಯಾಸವು ಮುಂದುವರೆಯುತ್ತಿತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಧ್ಯಾತ್ಮಿಕ ಶಿಕ್ಷಣವು ಅಷ್ಟೇ ಅಗತ್ಯ ಎಂದು ತಿಳಿಸಿದರು.

 ಶಿಕ್ಷಕ ಮಧುಸೂದನ ಮಾತನಾಡಿ ಶಿಬಿರದಲ್ಲಿ ಮಕ್ಕಳಿಗೆ ಕಲಿಸುತ್ತಿರುವ ಕಾರ್ಯ ಚಟುವಟಿಕೆಗಳು ಬಹಳ ಉಪಯುಕ್ತವಾಗಿದೆ ಅದನ್ನ ಎಲ್ಲಾ ಮಕ್ಕಳಿಗೂ ಕಲ್ಪಿಸುವ ಅವಕಾಶ ಮಾಡಿಕೊಡಬೇಕೆಂದು ಕರೆ ನೀಡಿದರು. ಅನೇಕ ಮಕ್ಕಳು ಶಿಬಿರದ ಅನುಭವವನ್ನು ತಿಳಿಸುತ್ತಾ ನಮಗೆ ಇದರಿಂದ ಬಹಳ ಉಪಯುಕ್ತವಾಗಿದೆ ನಮ್ಮ ಜೀವನ ಪದ್ಧತಿಯು ಪರಿವರ್ತನೆಯಾಗಿದೆ ಬೇಗ ಏಳುವುದು ಬೇಗ ಮಲಗುವುದು ಅಂದಿನ ಪಾಠಗಳನ್ನು ಅಂದೆ ಓದುವುದು ಸಣ್ಣಪುಟ್ಟ ತಪ್ಪುಗಳು ಕದಿಯುವುದು ಸುಳ್ಳು ಹೇಳುವುದು ಇದನ್ನು ನಾವು ಬಿಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು ಗುರು ಹಿರಿಯರಿಗೆ ಗೌರವಿಸುತ್ತೇವೆ.

ಮನೆಯಲ್ಲಿ ತಂದೆ ತಾಯಿಗಳಿಗೆ ಸಣ್ಣಪುಟ್ಟ ಕಾರ್ಯಗಳಲ್ಲಿ ಸಹಕಾರ ನೀಡುತ್ತೇವೆ ಎಂದು ಅನುಭವ ಹಂಚಿಕೊಂಡರು ಶಿಕ್ಷಕಿ ಕುಮಾರಿಯಕ್ಕ ಮಾತನಾಡಿ ಬೆಳೆಯುವ ಮರ ಸಿರಿ ಮೊಳಕೆಯಲ್ಲಿಯೇ ಎನ್ನುವ ಹಾಗೆ ಇಂದಿನ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೀಡುತ್ತಿರುವುದು ಶಾಘ್ಲನೀಯಾ ಎಂದು ತಿಳಿಸಿದರು ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ಸ್ಪರ್ಧೆ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಶಿಬಿರದಲ್ಲಿ ಪಟ್ಟಣದ ವಿದ್ಯಾರ್ಥಿಗಳಲ್ಲದೆ ನಲ್ಲೂರು ಮೂಳೆ ಗ್ರಾಮದ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಶಿಕ್ಷಕ ನಾಗರಾಜ್,ಶ್ರೀನಿವಾಸ್, ಶಶಿ, ವಿದ್ಯಾ, ಪುಷ್ಪ, ತ್ರಿವೇಣಿ, ಪುಟ್ಟಶೇಖರ ಮೂರ್ತಿ, ಶೋಭಾ, ಪ್ರಮೀಳಾ ಊದಗಡ್ಡಿ, ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ ಹಾಜರಿದ್ದರು

Leave a Reply

Your email address will not be published. Required fields are marked *

× How can I help you?