ಚಿಕ್ಕಮಗಳೂರು:– ಮೊಬೈಲ್ ಗ್ರಾಹಕರಿಗೆ ಅಡೆತಡೆಗಳಿಲ್ಲದೇ ಸುಲಲಿತವಾಗಿ ಸಿಗ್ನಲ್ ಲಭಿಸುವ ಸದುದ್ದೇಶದಿಂದ ನೂತನವಾಗಿ ಬಿ.ಎಸ್.ಎನ್.ಎಲ್. ಟವರ್ ನಿರ್ಮಿಸಿ ಗ್ರಾಮಸ್ಥರಿಗೆ ಅನೂಕೂಲ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂ ಜಾರಿ ಹೇಳಿದರು.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸೋಮವಾರ 80 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಸ್ಎನ್ಎಲ್ ಸಂಸ್ಥೆಯ ಸೆಟಲೈಟ್ ಬೇಸಿಕ್ ಮೊ ಬೈಲ್ ಟವರ್ ಸಾರ್ವಜನಿಕರಿಗೆ ಸಮರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಹೊರಟ್ಟಿ ಗ್ರಾಮಕ್ಕೆ ಸೆಂಟಲೈಟ್ ಟವರ್ ನಿರ್ಮಾಣಗೊಂಡಿದೆ. ಇದರಿಂದ ಮೊಬೈಲ್ ಗ್ರಾಹಕರಿಗೆ ಸಿಗ್ನಲ್ಗಳು ಅಡೆತಡೆಗಳಿಲ್ಲದೇ ಮಾತುಕತೆ ಮಾಡಬಹುದು. ಈ ಹಿಂದಿನ ಸಂಸದರು ಈ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದೀಗ ಪೂರ್ಣಗೊಳಿಸಿ ಸಮರ್ಪಿಸಿದ್ದೇವೆ ಎಂದು ತಿಳಿಸಿದರು.
ಹೊರಟ್ಟಿ ಬೆಟ್ಟದ ತುದಿಯಲ್ಲಿರುವ ಗ್ರಾಮವಾದ ಹಿನ್ನೆಲೆ ಮಾಲಿನ್ಯ ರಹಿತ ಹಾಗೂ ಕಲಶವಿಲ್ಲದ ಪರಿ ಸರವನ್ನು ಹೊಂದಿದೆ. ಆಧುನಿಕತೆ ಕಡಿಮೆಯಿದ್ದರೂ ಹಚ್ಚಹಸಿರಿನಂದ ಸ್ವರ್ಗದಂತೆ ಕಂಗೊಳಿಸುತ್ತಿದ್ದು ಮುಂದಿನ ದಿನಗಳಲ್ಲಿ ಆದ್ಯತೆಗನುಸಾರ ಮೂಲಭೂತ ಸೌಕರ್ಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡ ದೀಪಕ್ದೊಡ್ಡಯ್ಯ ಮಾತನಾಡಿ, ಚುನಾವಣೆ ಮುನ್ನ ಒಂದು ಪಕ್ಷಕ್ಕೆ ಸೀಮಿತರಾಗಿ ರುತ್ತೇವೆ. ಗೆಲುವಿನ ಬಳಿಕ ಸರ್ವಜನರ ಅಭಿವೃದ್ದಿಗೆ ಶ್ರಮಿಸಬೇಕು. ಆ ಸಾಲಿನಲ್ಲಿ ಸಂಸದರು ಜಿಲ್ಲೆಯಾದ್ಯಂ ತ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಸವಲತ್ತನ್ನು ಭೇದಭಾವಿಲ್ಲದೇ ಪೂರೈಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಾಳೂರು ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಸದಸ್ಯ ಸಂದೀಪ್, ಮೂಡಿಗೆರೆ ಬಿಜೆ ಪಿ ಮಂಡಲ ಅಧ್ಯಕ್ಷ ಗಜೇಂದ್ರ, ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ, ಮುಖಂಡರುಗಳಾದ ಪರೀಕ್ಷಿತ್ಗೌಡ, ಭರತ್, ಮಂಜು ಹಾಗೂ ಗ್ರಾಮಸ್ಥರು ಹಾಜರಿದ್ದರು.