ಚಿಕ್ಕಮಗಳೂರು : ಹಿರಿಯ ಕಾಫಿಬೆಳೆಗಾರ ಎ.ಎಸ್.ಶಂಕರೇಗೌಡ ಇಂದು ಬೆಳಗಿನಜಾವ ವಿಧಿವಶರಾದರು.
ಚಿಕ್ಕಮಗಳೂರು ಗಾಲ್ಫ್ಕ್ಲಬ್ ಗೌರವಕರ‍್ಯದರ್ಶಿಯಾಗಿದ್ದ ಅವರು ಕೆಲಕಾಲದ ಅನಾರೋಗ್ಯದ ಹಿನ್ನಲೆಯಲ್ಲಿ ಹಿರೇಕೊಳಲೆಯ ಚಂದ್ರಗಿರಿ ತೋಟದ ಸ್ವಗೃಹದಲ್ಲಿ ನಿಧನಹೊಂದಿದ್ದಾರೆ. ಶುಕ್ರವಾರ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನ ೨.೩೦ಕ್ಕೆ ತೋಟದಲ್ಲಿ ಅಂತ್ಯಸAಸ್ಕಾರ ನೆರವೇರಲಿದೆ ಎಂದು ಸಿಜಿಎ ಅಧ್ಯಕ್ಷ ಎ.ಬಿ.ಸುದರ್ಶನ್ ತಿಳಿಸಿದ್ದಾರೆ.
ಪತ್ನಿ ಮಧು, ಪುತ್ರರಾದ ವರುಣ್ ಮತ್ತು ವನೀಶ್ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕಾಫಿ ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಶಂಕರೇಗೌಡರು, ಕರ್ನಾಟಕ ಪ್ಲಾಂರ‍್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷರಾಗಿ ಸಂಸ್ಥೆಗಳ ಜೊತೆಗೆ ದಶಕಗಳ ನಂಟನ್ನು ಹೊಂದಿದವರು. ಯೂನಿವರ್ಸಲ್ ಕಾಫಿ ಫೌಂಡೇಶನ್ ಸ್ಥಾಪಕ ಸದಸ್ಯರು. ಜೀವನಸಂಧ್ಯಾ ವೃದ್ಧಾಶ್ರಮ ಸ್ಥಾಪನೆಗೆ ಶ್ರಮಿಸಿದ್ದು ವಿವಿಧ ಸಂಘಸಂಸ್ಥೆಗಳ ಒಡನಾಟ ಹೊಂದಿದ್ದರು.

ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಚಿಕ್ಕಮಗಳೂರು ಗಾಲ್ಫ್ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತಿç, ಶ್ರೀಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಕರ‍್ಯದರ್ಶಿ ಮಲ್ಲಿಕಾರ್ಜುನ್ ಮತ್ತು ಖಜಾಂಚಿ ಯು.ಎಂ.ಬಸವರಾಜು ಮತ್ತಿತರರು ಶಂಕರೇಗೌಡರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.