ಚಿಕ್ಕಮಗಳೂರು-ಅನ್ನಭಾಗ್ಯ-ಯೋಜನೆ-ಸದ್ವಿ-ನಿಯೋಗಿಸಲು- ಶಿವಾನಂದಸ್ವಾಮಿ-ಕರೆ

ಚಿಕ್ಕಮಗಳೂರು:– ರಾಜ್ಯಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಸಾರ್ವಜನಿಕರು ಕಾಳಸಂತೆಯಲ್ಲಿ ಮಾರದೇ ಸಂಸಾರದ ಸದ್ವಿನಿಯೋಗಕ್ಕೆ ಬಳಸಿಕೊಳ್ಳ ಬೇಕು ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

ನಗರದ ಗೃಹಮಂಡಳಿ ಬಡಾವಣೆಯ ಮಹಿಳಾ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಶನಿವಾರ ಅಕ್ಕಿ ವಿತರಿಸಿ ಅವರು ಮಾತನಾಡಿದರು.

ನುಡಿದಂತೆ ನಡೆದಿರುವ ರಾಜ್ಯಸರ್ಕಾರ ಪ್ರತಿಯೊಬ್ಬರಿಗೂ ನಗದಿನ ಬದಲಾಗಿ ೫ ಕೆಜಿ ಅಕ್ಕಿಯನ್ನು ಉ ಚಿತವಾಗಿ ವಿತರಿಸುತ್ತಿದೆ. ಈ ಪಡಿತರ ಜನರ ಹಸಿವನ್ನು ನೀಗಿಸಲು ಆಗಿದ್ದು ಫಲಾನುಭವಿಗಳು ಕಾಳಸಂತೆ ಯಲ್ಲಿ ಅಕ್ಕಿ ಮಾರದೇ ಕುಟುಂಬದ ನಿರ್ವಹಣೆಗೆ ಉಪಯೋಗಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ರಾಜ್ಯದ ಮುಖ್ಯಮಂತ್ರಿಗಳು ಹಸಿವುಮುಕ್ತ ಮಾಡುವ ದೃಷ್ಟಿಯಿಂದ ರೈತರು, ಶ್ರಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಉಚಿತ ಬಸ್, ವಿದ್ಯುತಚ್ಚಕ್ತಿ ಹಾಗೂ ಯುವನಿಧಿ ಅನುದಾನ ಪೂರೈಸಿ ಸಮಾಜದ ಏಳಿಗೆಗೆ ಯಥೆಚ್ಚವಾಗಿ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

ಮಹಿಳಾ ಸಬಲೀಕರಣಕ್ಕೆ ರಾಜ್ಯಸರ್ಕಾರ ಹಲವು ಯೋಜನೆ ರೂಪಿಸಿ ಒತ್ತು ನೀಡುತ್ತಿದೆ. ಅಲ್ಲದೇ ಗ್ಯಾರಂಟಿಯಿಂದ ಪ್ರತಿ ಮಾಹೆಯಾನ ಕೋಟ್ಯಾಂತರ ರೂ. ಮದ್ಯವರ್ತಿಗಳಿಲ್ಲದೇ ಜಿಲ್ಲೆಯ ಜನಸಾಮಾನ್ಯರ ಖಾತೆಗೆ ನೇರವಾಗಿ ಜಮಾಯಿಸಿ ಆರ್ಥಿಕ ಹೊರೆ ಕಡಿಮೆಗೊಳಿಸುತ್ತಿದೆ ಎಂದು ಹೇಳಿದರು.

ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ಪಂಚ ಗ್ಯಾರಂಟಿಗಳು ನಮ್ಮ ರಾಜ್ಯದ ಜನರಿಗೆ ವರದಾನವಾಗಿವೆ. ವಿಶೇಷವಾಗಿ ಮಹಿಳೆಯರಿಗೆ ಶಕ್ತಿ, ಗೃಹಲಕ್ಷ್ಮಿ ಸೇರಿದಂತೆ ಅನ್ನಭಾಗ್ಯ ಯೋಜನೆ ಕೂಡ ಫಲಪ್ರದವಾಗಿದೆ ಎಂದರು.

ನಗರಸಭೆ ಸದಸ್ಯ ಕವಿತಾ ಶೇಖರ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾಲಕಾಲಕ್ಕೆ ಅಕ್ಕಿಯನ್ನು ನೀಡುತ್ತಿವೆ. ನಾವೆಲ್ಲರೂ ಅದನ್ನು ಸಬ್ಬಳಕೆ ಮಾಡಿಕೊಳ್ಳಬೇಕು. ನಮ್ಮ ನ್ಯಾಯಬೆಲೆ ಅಂಗಡಿಯಿಂದ ಸುಸೂತ್ರವಾಗಿ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡುತ್ತಿದ್ದು ಏನಾದರೂ ನ್ಯೂನ್ಯತೆಗಳಿದ್ದಲ್ಲಿ ತಿಳಿ ಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಸಭೆ ನಾಮನಿರ್ದೇಶಕ ಸದಸ್ಯ ಕೀರ್ತಿಶೇಟ್, ಮುಖಂಡರುಗಳಾದ ಚಂ ದ್ರಪ್ಪ, ಚೇತನ್, ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ರಮೇಶ್ ಮುಂತಾದವರು ಭಾಗವಹಿಸಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?