ಚಿಕ್ಕಮಗಳೂರು- ಕರ್ನಾಟಕ ವಕೀಲ ಪರಿಷತ್ ಸದಸ್ಯರ ಮೇಲೆ ಹಲ್ಲೆ ಎಸಗಿರುವ ತಪ್ಪಿ ತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ವಕೀಲರ ಸಂಘವು ಸೋಮವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಗೂ ಮುನ್ನ ನ್ಯಾಯಾಲಯದಲ್ಲಿ ಮುಂಭಾಗದಲ್ಲಿ ಕಲಾಪಗಳನ್ನು ರದ್ದುಗೊಳಿಸಿ ಕೈಗೆ ಕೆಂಪು ಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ ವಕೀಲರುಗಳು ಕೂಡಲೇ ಪರಿಷತ್ ಸದಸ್ಯ ಸದಾಶಿವ ರೆಡ್ಡಿ ಅವರಿಗೆ ನ್ಯಾಯ ಒದಗಿಸಲು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ವಕೀಲರ ಕಚೇರಿಗೆ ಏಕಾಏಕಿ ನುಗ್ಗಿ ಸದಾಶಿವ ರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕೃತ್ಯ ಖಂಡನೀಯ. ಕೃತ್ಯವೆಸಗಿದ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನೂ ಮುಂದೆ ಈ ರೀತಿ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಹಾಲಿ ವಕೀಲರ ಮೇಲಿನ ಹಲ್ಲೆ ತಡೆಗಾಗಿ ಜಾರಿಗೆ ತಂದಿರುವ ಕಾಯ್ದೆಯು, ವಕೀಲರ ಮೇಲಿನ ಹಲ್ಲೆ ಯನ್ನು ತಡೆಯುವುದಕ್ಕಾಗಲೀ ಅಥವಾ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಲೀ ಯಾವು ದೇ ರೀತಿಯ ಬಲವಿರುವುದಿಲ್ಲ. ಹೀಗಾಗಿ ವಕೀಲರ ಮೇಲಿನ ಹಲ್ಲೆ ತಡೆಗಾಗಿ ಬಲವಾದ ಕಾಯ್ದೆ ರಚಿಸಬೇ ಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಖಜಾಂಚಿ ದೀಪಕ್, ಸಹ ಕಾರ್ಯ ದರ್ಶಿ ಪ್ರಿಯದರ್ಶಿನಿ, ವಕೀಲರಾದ ಐ.ಎಸ್.ತೇಜಸ್ವಿ, ಟಿ.ಆರ್.ಹರೀಶ್, ಡಿ.ಎಸ್.ಮಮತ, ಗೀತಾ ಜಗದೀ ಶ್, ಸುರೇಶ್, ಮೋಹನ್, ಅರುಂಧತಿ, ದೊರೆ, ಸಿ.ಕೆ.ಜಗದೀಶ್, ಪಿ.ಮೋಹನ್, ಹೆಚ್.ಟಿ.ನಟರಾಜ್, ಸಿ. ಎಂ.ರಾಜೇಶ್, ಬಿ.ಆರ್.ಜಗದೀಶ್, ಜೆ.ಕೆ.ರುದ್ರೇಗೌಡ, ಮುರಳಿ ಮತ್ತಿತರರು ಹಾಜರಿದ್ದರು.
- ಸುರೇಶ್ ಆರ್.