ಚಿಕ್ಕಮಗಳೂರು-ಬಿ.ಕಿರಣ್‌ಕುಮಾರ್-ಜಿಲ್ಲಾ-ಪ್ರಾಥಮಿಕ-ಶಾಲಾ-ಶಿಕ್ಷಕರ-ಸಂಘದ-ನೂತನ-ಅಧ್ಯಕ್ಷರಾಗಿ-ಅವಿರೋಧ-ಆಯ್ಕೆ

ಚಿಕ್ಕಮಗಳೂರು– ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಕಿರಣ್‌ಕುಮಾರ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ನಗರದ ಶಿಕ್ಷಕರ ಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸಂಘದ ರಾಜ್ಯ ಸಹ ಕಾರ್ಯದರ್ಶಿ ಚೇತನ್ ನಡೆಸಿಕೊಟ್ಟರು.

ನೂತನ ಅಧ್ಯಕ್ಷ ಬಿ.ಕಿರಣ್‌ಕುಮಾರ್ ಮಾತನಾಡಿ ಶಿಕ್ಷಕರ ಶ್ರೇಯೋಭಿವೃದ್ದಿ ನಿಟ್ಟಿನಲ್ಲಿ ಕರ್ತವ್ಯ ನಿರ್ವ ಹಿಸುತ್ತೇನೆ. ಶಿಕ್ಷಕರ ಸಣ್ಣಪುಟ್ಟ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ನ್ಯಾಯ ಒದಗಿಸಲಾಗುವುದು. ಜೊ ತೆಗೆ ಶಿಕ್ಷಕರಿಗೆ ಜಿಪಿಡಿ ಅಳವಡಿಸುವ ಸಂಬಂಧ ರಾಜ್ಯ ಸಂಘದೊಂದಿಗೆ ಚರ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.



ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಸಿ. ಮಂಜುನಾಥ, ಸಂಘದ ನಿಕಟಪೂರ್ವ ಅಧ್ಯಕ್ಷ ಭೈರೇಗೌಡ, ಕಾರ್ಯದರ್ಶಿ ಪರಮೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ವನಜಾಕ್ಷಿ, ಸಹ ಕಾರ್ಯದರ್ಶಿಗಳಾದ ಗಣೇಶ್‌ಮೂರ್ತಿ, ಗೀತಾ, ಸಂಘದ ಸದಸ್ಯರುಗಳಾದ ಚಿತ್ರ, ಶ್ರೀನಿವಾಸ್, , ಅಜ್ಜಯ್ಯ, ಪುಟ್ಟರಾಜು, ನವೀನ್, ಹರೀಶ್, ನಂಜುಂಡಪ್ಪ, ಆದರ್ಶ, ದಿನೇಶ್ , ಕುಮಾರಪ್ಪ ಪ್ರಸನ್ನ ಕುಮಾರ್ ಹಾಗೂ ವಿವಿಧ ತಾಲ್ಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?