ಚಿಕ್ಕಮಗಳೂರು- ಬಸವಣ್ಣ ಮತ್ತು ಅಂಬೇಡ್ಕರ್ ಹೋರಾಟದ ಫಲವಾಗಿ ದೇಶದ ಮಹಿಳೆಯರು ಸಬಲರಾಗಿದ್ದಾರೆ. ಸಮಾಜದಲ್ಲಿ ಹೆಣ್ಣು, ಪುರುಷರ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಗೈಯಲು ಈ ಮಹಾನೀಯರ ಪರಿಶ್ರಮವೇ ಕಾರಣ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಹೋದರತ್ವ ಸಮಿತಿ 1೦ನೇ ವರ್ಷದ ಸಂಭ್ರಮಾಚಾರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಹೆಣ್ಣೊಂದು ಕಲಿತರೆ, ಶಾಲೆಯೊಂದ ತೆರೆದಂತೆ ಎಂಬ ನಾಣ್ನುಡಿಯಂತೆ ದೇಶದ ಹೆಣ್ಣು ಮಕ್ಕಳು ವೈದ್ಯಕೀಯ, ರಾಜಕೀಯ, ಕ್ರೀಡೆ, ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಅಲ್ಲದೇ ದಕ್ಷ ಅಧಿಕಾರಿ ಕಿರಣ್‌ಬೇಡಿ ಹಾಗೂ ಇಂದಿಗೂ ಅಂತರೀಕ್ಷದಲ್ಲಿರುವ ಸುನೀತಾ ವಿಲಿಯಂ ಸಾಧನೆ ಅವಿಸ್ಮರಣೀಯ ಎಂದರು.
ಉಕ್ಕಿನ ಮಹಿಳೆ ಎಂಬ ಪ್ರಖ್ಯಾತಿ ಪಡೆದ ಇಂದಿರಾಗಾಂಧಿ ಸುಮಾರು 14 ವರ್ಷಗಳ ಕಾಲ ದೇಶದ ಆಳ್ವಿಕೆ ನಡೆಸಿ ಬಡವರ ಪಾಲಿಗೆ ಆಸರೆಯಾಗಿದ್ದರು. ಕೋವಿಡ್ ವೇಳೆಯಲ್ಲಿ ನೂರಾರು ನರ್ಸ್ಗಳು ಪ್ರಾಣ ದ ಹಂಗುತೊರೆದು ಜನತೆಯ ಉಳಿವಿಗಾಗಿ ದುಡಿದಿದ್ದಾರೆ. ಹೀಗೆ ಸಮಾಜದಲ್ಲಿನ ಪ್ರತಿ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಮಹಿಳೆಯರ ಸೇವೆ ಉತ್ತಮವಾಗಿದೆ ಎಂದು ತಿಳಿಸಿದರು.

ಸಹೋದರತ್ವ ಸಮಿತಿ ದಶಕ ಪೂರೈಸಿ ಇಂದಿಗೂ ಸಕ್ರಿಯವಾಗಿ ಶೋಷಿತರ ಪರವಾಗಿ ನಿಂತಿರುವುದು ಉತ್ತಮ ಸಂಗತಿ. ಜೊತೆಗೆ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸಾಮಾನ್ಯ, ಭಾಗವಹಿಸುವುದೇ ದೊಡ್ಡ ಅನುಭವ ಎಂದು ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಸಹೋರತ್ವ ಸಮಿತಿ ಸ್ಥಾಪಕ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ನೊಂದವರು, ಶೋಷಿತರಿಗೆ ಸಮಾಜದಲ್ಲಿ ಬದಲಾವಣೆ ತರಲು ಗುಣಾತ್ಮಕ ಮಾತುಗಳಿಂದ ಸಾಧ್ಯ ಎಂದ ಅವರು ಸುಖವಿದ್ದರೆ ಹತ್ತಿರ, ಕಷ್ಟ ಬಂದರೆ ದೂರ ಸರಿಯುವ ಮಾತಿಲ್ಲ. ಸದಾಕಾಲ ಸ್ಪಂದಿಸುವ ಗುಣ ಸಹೋರತ್ವ ಸಮಿತಿಯಲ್ಲಿದ್ದು ಸಾ ಮಾಜಿಕ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಎಲ್ಲಾ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಸಹೋರತ್ವ ಸಂಭ್ರಮದಲ್ಲಿ ಮಹಿಳಾಮಣಿಗಳು ಕುಟುಂಬದ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಕರ‍್ಯಕ್ರಮ ಆಯೋಜಿಸಿರುವ ಸಹೋರತ್ವ ಸಮಿತಿ ಮುಂದೆ ಇನ್ನಷ್ಟು ಉತ್ತೇಜನ ನೀಡುವಂಥ ಕಾರ್ಯ ಮಾಡಲಿ ಎಂದು ಆಶಿಸಿದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು, ಮಹಿಳೆಯರಿಗೆ ಬಹುಮಾನ ವಿತರಿಸಲಾ ಯಿತು. ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಎಂ.ಎA.ಹಾಲಮ್ಮ, ಮುಖಂ ಡರುಗಳಾದ ಕೆ.ಆರ್.ಗಂಗಾಧರ್ ಆರ್.ವಸಂತ್, ಕೆ.ಎಸ್.ಮಂಜುಳಾ, ಕಲಾವತಿ, ಟಿ.ಹೆಚ್.ರತ್ನ, ಹುಣ ಸೇಮಕ್ಕಿ ಲಕ್ಷö್ಮಣ್, ಕಬ್ಬಿನಕೆರೆ ಮೋಹನ್ ಮತ್ತಿತರರಿದ್ದರು.
- ಸುರೇಶ್ ಎನ್.