ಚಿಕ್ಕಮಗಳೂರು-ತಾಲ್ಲೂಕಿನ ಬೀಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೂರನೇ ಬಾರಿಗೆ ಅಧ್ಯಕ್ಷರಾಗಿ ಬಿ.ಜಿ.ಸೋಮಶೇಖರಪ್ಪ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಎಸ್. ಪುಟ್ಟೇಗೌಡ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬೇರ್ಯಾವ ಉಮೇದುವಾರಿಕೆ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣಾಧಿಕಾರಿ ಸಂಧ್ಯಾರಾಣಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಬಿ.ಜಿ.ಸೋಮಶೇಖರಪ್ಪ,ಪ್ರತಿ ವರ್ಷವು ಸಹಕಾರ ಸಂಘ ಕೃಷಿಕರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೃಷಿಕರಿಗೆ 20 ಕೋಟಿ ರೂ.ಗಳನ್ನು ಸಾಲವಾಗಿ ವಿತರಿಸಿ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿ ಬದುಕು ರೂಪಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.
ಮುoದಿನ ಅವಧಿಯಲ್ಲಿ ಸಹಕಾರ ಸಂಘವು 50 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದೆ. ಪ್ರಸ್ತುತ ಸಂಘ 100 ಕೋಟಿ ವಹಿವಾಟು ನಡೆಸಿದ್ದು ಮುಂದೆ 150 ರಿಂದ 200 ಕೋಟಿ ವಹಿವಾಟು ನಡೆಸುವ ಆಶಯವಿದೆ. ಹೀಗಾಗಿ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಿರುವ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.
ಇದೀಗ ಸಹಕಾರ ಸಂಘದಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಿ, ಚಿನ್ನಾಭರಣದ ಮೇಲೆ ಸಾಲ ವಿತರಿಸುತ್ತಿದೆ.ಸಂಘದ ಚಟುವಟಿಕೆ ಪರಿಚಯಿಸುವ ನಿಟ್ಟಿನಲ್ಲಿ ವೆಬ್‌ಸೈಟ್ ರಚಿಸಲಾಗಿದ್ದು ಸಂಬoಧಪಟ್ಟ ವಿಷಯಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದು. ಅಲ್ಲದೇ ಖಾಸಗೀ ಬ್ಯಾಂಕ್‌ನoತೆ ಸಂಘಕ್ಕೂ ಅತ್ಯಾಧುನಿಕ ತಂತ್ರ ಜ್ಞಾನ ಸೇರಿದಂತೆ ಎಲ್ಲಾ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಉಪಾಧ್ಯಕ್ಷ ಹೆಚ್.ಎಸ್.ಪುಟ್ಟೇಗೌಡ ಮಾತನಾಡಿ ಸಂಘದ ಕಟ್ಟಡದ ಮೇಲಂತಸ್ತಿನಲ್ಲಿ ಹೋಂ ಸ್ಟೇ ಮಾಡುವ ಉದ್ದೇಶದಿಂದ ಐದು ರೂಮ್‌ಗಳ ನಿರ್ಮಿಸಲಾಗುತ್ತಿದ್ದು ಸದ್ಯದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸಂಘ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಬಿ.ಎನ್.ಜಗದೀಶ್, ಹೆಚ್.ಪಿ.ಪಟ್ಟೇಗೌಡ, ಬಿ.ಸಿ. ರೇಣುಕಾಪ್ರಸಾದ್, ಶಾಂತಮ್ಮ, ಬಿ.ಆರ್.ಹೇಮಲತಾ, ಹೆಚ್.ಇ.ಸುಶೀಲಮ್ಮ, ಕೆ.ಸಿ.ವಿರೂಪಾಕ್ಷ, ಬಿ.ಹೆಚ್. ವಿಜಯ್‌ಕುಮಾರ್, ಬಿ.ಪಿ.ರಾಜೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್, ಗ್ರಾಮಸ್ಥರಾದ ವಿಜಯ್‌ಕು ಮಾರ್, ನಿತಿನ್, ಪ್ರಸನ್ನ, ವಸಂತ್‌ಕುಮಾರ್, ಮಂಜುನಾಥ್, ಸೋಮಣ್ಣ, ಪರಿಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
—————-ಸುರೇಶ್