ಚಿಕ್ಕಮಗಳೂರು:– ನಿಗಧಿತ ಸಮಯಕ್ಕೆ ಸಾಲಮರುಪಾವತಿಸಿ ಉತ್ತಮ ವಹಿವಾಟು ಹಾಗೂ ಅಭಿವೃದ್ಧಿಯತ್ತ್ತ ಹೆಜ್ಜೆ ಹಾಕುತ್ತಿರುವ ಬೀಕನಹಳ್ಳಿ ಸಹಕಾರ ಸಂಘವು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನಕ್ಕೆ ಮಾನ್ಯವಾಗಿದೆ ಎಂದು ಬೀಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ಹೇಳಿದರು.
ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರಂತರವಾಗಿ ಪ್ರತಿವರ್ಷವು ಲಾಭಾಂಶದಲ್ಲಿ ದುಡಿಯುತ್ತಿರುವ ಬೀಕನಹಳ್ಳಿ ಸಹಕಾರ ಸಂಘದ ಸದ ಸ್ಯರುಗಳಿಗೆ ನಿಗಧಿತ ಸಾಲಸೌಲಭ್ಯ ಒದಗಿಸಿ ಆರ್ಥಿಕವಾಗಿ ಸದೃಢಗೊಳಿಸುತ್ತಿದೆ. ಜೊತೆಗೆ ಸಾಲ ಪಡೆದು ಕೊಂಡವರು ಸಮಯಕ್ಕೆ ಸರಿಯಾಗಿ ಮರುಪಾವತಿಸುತ್ತಿರುವ ಕಾರಣ ಎನ್ಸಿಡಿಸಿಯಿಂದ ಹಾಗೂ ಅಪೆಕ್ಸ್ ಬ್ಯಾಂಕ್ನಿಂದ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

ಆರಂಭದಲ್ಲಿ ಕೇವಲ 300ಕ್ಕೂ ಹೆಚ್ಚು ಸದಸ್ಯರಿಂದ ಪ್ರಾರಂಭಿಸಿದ ಸಂಘವು ಪ್ರಸ್ತುತ 1300 ಹೆಚ್ಚು ಸದಸ್ಯರ ಸಂಖ್ಯಾಬಲವನ್ನು ಹೊಂದಿ ಹನ್ನೊಂದು ವರ್ಷ ಪೂರೈಸುತ್ತಿದೆ. ಸಹಕಾರಿ ಬಂಧುಗಳ ಸಹಕಾರ, ಪರಿಣಿತ ಸಿಬ್ಬಂದಿ ವರ್ಗ ಹಾಗೂ ಉತ್ತಮ ನಿರ್ದೇಶಕರುಗಳ ಶಕ್ತಿಯಿಂದ 1.25 ಕೋಟಿ ವ್ಯಯಿಸಿ ಕಟ್ಟಡ ನಿರ್ಮಾಣದೊಂದಿಗೆ ಪ್ರಸಕ್ತ ಸಾಲಿನಲ್ಲಿ 9.60 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಸಂಘದಲ್ಲಿ 1.56 ಷೇರು ಬಂಡವಾಳ, 17.02 ಕೋಟಿ ಠೇವಣಿ, 22.17 ಕೋಟಿ ಸಾಲ ವಿತರಣೆ, 3.48 ಕೋಟಿ ಹೂಡಿಕೆಗಳಿಗೆ ವಿನಿಯೋಗಿಸುವ ಮೂಲಕ 2024-25ನೇ ಸಾಲಿನಲ್ಲಿ 25 ಕೋಟಿ ಹೆಚ್ಚು ದುಡಿ ಯುವ ಬಂಡವಾಳವಾಗಿ ಹೆಚ್ಚಳಗೊಂಡಿದೆ. ಅಲ್ಲದೇ ಸಿಡಿಸಿಸಿ ಬ್ಯಾಂಕ್ ಮುಖೇನ 3.78 ಕೋಟಿ ರೂ. ಬೆಳೆ ಸಾಲಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸಂಘವು ಗಣಕೀಕೃತಗೊಂಡು ಉತ್ತಮ ಮತ್ತು ತ್ವರಿತ ಸೇವೆಯನ್ನು ಸದಸ್ಯರಿಗೆ ನೀಡುತ್ತಿದೆ. ಅಂತರ್ಜಾಲದಲ್ಲಿ ಸಂಘದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಪಾರದರ್ಶಕತೆಯನ್ನು ಕಾಪಾಡಿ ಕೊಂಡಿದ್ದು ಇದರಿಂದ ಸದಸ್ಯರ ನಂಬಿಕೆಯನ್ನು ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಹೆಚ್.ಎಸ್.ಪುಟ್ಟೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರ ಸಂಘವು ಪ್ರಾ ರಂಭದಲ್ಲಿ ಹಲವಾರು ಏರುಪೇರಿನಿಂದ ಬೆಳೆದು, ಇದೀಗ ಕೋಟ್ಯಾಂತರ ವ್ಯವಹಾರ ನಡೆಸುವ ಮೂ ಲಕ ಅತ್ಯುತ್ತಮವಾಗಿ ಸಂಘವಾಗಿ ಮಾರ್ಪಾಡಾಗಿದ್ದು ಪ್ರವಾಸಿಗರ ಅನುಕೂಲತೆಗೆ ನೂತನ ಕೊಠಡಿಗಳನ್ನು ನಿರ್ಮಿಸಿ ಸಂಘದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಮುಖ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಜೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಾಳದ ಕೆ.ಸಿ.ವಿರೂಪಾಕ್ಷ, ಬಿ.ಎನ್.ಜಗದೀಶ್, ರೇಣುಕಾ ಪ್ರಸಾ ದ್, ಹೆಚ್.ಪಿ.ಪುಟ್ಟೇಗೌಡ, ರಾಜೇಶ್, ಬಿ.ಹೆಚ್.ವಿಜಯ್ಕುಮಾರ್, ಹೇಮಲತ, ಶಾಂತಮ್ಮ, ಸುಶೀಲಮ್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್ಕುಮಾರ್, ಗ್ರಾ.ಪಂ. ಸದಸ್ಯ ವಿಜಯ್ಕುಮಾರ್, ಸಂಘದ ಲೆಕ್ಕಿಗ ಸುನೀಲ್, ಪಿಗ್ನಿ ಸಂಗ್ರಹಕ ಸಚ್ಚಿನ್ ಮತ್ತಿತರರಿದ್ದರು.
- ಸುರೇಶ್ ಎನ್