ಚಿಕ್ಕಮಗಳೂರು-ಬೊಗಸೆ ಗ್ರಾಮದ ಸುಗ್ಗಿಹಬ್ಬಕ್ಕೆ ಸಂಭ್ರಮದ ತೆರೆ-6 ದೇವಾನುದೇವತೆಗಳ ಅಡ್ಡೆ ಉತ್ಸವ ಕಣ್ತುಂಬಿಕೊಂಡ ಭಕ್ತಾದಿಗಳು

ಚಿಕ್ಕಮಗಳೂರು-ತಾಲ್ಲೂಕಿನ ಬೊಗಸೆ ಗ್ರಾಮದಲ್ಲಿ ಶ್ರೀ ಗುರುಪರದೇಶಪ್ಪನವರ ಮಠದ ಸಿದ್ದೇಶ್ವರ ಸ್ವಾಮಿ, ಶ್ರೀ ತಿರುಮಲ ಲಕ್ಷ್ಮಿ ದೇವಿ, ಕೆಂಚ ದೇವರು, ಸರಪಳಿ ಭೂತ, ಜಟ್ಟಿಗಾ ದೇವರು, ಚೌಡೇಶ್ವರಿ ಅಮ್ಮನವರ ಅಡ್ಡೆಗಳೊಂದಿಗೆ ಒಂದು ವಾರಗಳ ನಡೆದ ಸುಗ್ಗಿ ಉತ್ಸವ ಗುರುವಾರ ಸಂಜೆ ಸಂಪನ್ನಗೊoಡಿತು.

ಗ್ರಾಮದೇವತೆಗಳ ಅಡ್ಡೆಯನ್ನು ತಲೆಯ ಮೇಲೆ ಹೊತ್ತು ಆರಾಧಿಸಿ, ಮಂಗಳವಾರ ಹಗಲು ನಡೆಯುವ ಚೌಡೇಶ್ವರಿ ಕೆಂಡಕ್ಕೆ ಪೂರ್ವ ಸಿದ್ಧತೆ ನಡೆಸಲಾಯಿತು. ಕೆಂಡಾರ್ಚನೆ ಪೂರ್ಣಗೊಂಡಿತು ನಂತರ ಮಡಸನ ಮಕ್ಕಿ ಎಂಬ ಸ್ಥಳದಲ್ಲಿ ಪ್ರತಿ ದೇವರ ಹೆಸರಿನಲ್ಲೂ ಮತ್ತು ಕುಟುಂಬದ ಹೆಸರಿನಲ್ಲೂ ಎಲೆ ಅಡಿಕೆ ಬಾಳೆಹಣ್ಣು ಇಟ್ಟು ಪೂಜೆ ಮಾಡಲಾಯಿತು.

ಬಳಿಕ ಕೆಂಡಾರ್ಚನೆ, ಕೆಂಚದೇವರ ಮಣೆ ಸಂಪ್ರದಾಯದoತೆ ನಡೆಯಿತು. ಜಟ್ಟಿಗೆ ಚೌಡೇಶ್ವರಿ ದೇವಸ್ಥಾನದಲ್ಲಿ ದೇವರುಗಳನ್ನು ಕೂರಿಸಿ ಹರಕೆ, ಹಣ್ಣು ಕಾಯಿ ನಡೆಯಿತು. ಮತ್ತು ಶ್ರೀ ತಿರುಮಲ ಲಕ್ಷ್ಮೀದೇವರು, ಕೆಂಚದೇವರು, ಸರಪಳಿ ಭೂತಪ್ಪ ದೇವರುಗಳನ್ನು ಕರೆದುಕೊಂಡು ಬಂದು ಕಟ್ಟೆಹಾರದಲ್ಲಿ ಪೂಜೆ ಮತ್ತು ಕೆಂಚದೇವರ ಮಣೆ ಆಡಿಸಲಾಯಿತು.

ಪ್ರತಿಯೊಂದು ಪೂಜೆಯು ಹಿರಿಯರ ಸಂಪ್ರದಾಯದoತೆ ಅಚ್ಚುಕಟ್ಟಾಗಿ ಜರುಗಿತು.ಸುತ್ತಮುತ್ತಲಿನ ಗ್ರಾಮಸ್ಥರುಗಳು ,ಸಂಬoಧಿಕರು, ಕುಟುಂಬಸ್ಥರೆಲ್ಲರೂ ಸೇರಿ ಈ ಸುಗ್ಗಿ ಹಬ್ಬವನ್ನು ಸಂಭ್ರಮದಿoದ ಆಚರಿಸಿದರು.

ಈ ಸಂದರ್ಭದಲ್ಲಿ ಸುಗ್ಗಿಹಬ್ಬದ ಮುಖಂಡ ಶಿವಣ್ಣಗೌಡ, ಗ್ರಾಮ ಪಂಚಾಯತಿ ಸದಸ್ಯ ವಿನೋದ್ ಬೊಗಸೆ, ಅರ್ಚಕರಾದ ದಿನೇಶ್ ಹಡ್ಲುಗದ್ದೆ, ಲೋಕೇಶ್ ಸೂರಿನ ಬೇಳು, ಸ್ವಾಮಿ, ಚಂದ್ರಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

———-—–ವರದಿ-ಸುರೇಶ್

Leave a Reply

Your email address will not be published. Required fields are marked *

× How can I help you?