ಚಿಕ್ಕಮಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಎಎವೈ ಮತ್ತು ಪಿಹೆಚ್‌ಹೆಚ್ ಫಲಾನುಭವಿಗಳಿಗೆ ಪ್ರಸ್ತುತ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ ೨೦೨೫ರ ಮಾಹೆಯಿಂದ ಜಾರಿಗೆ ಬರುವಂತೆ 5 ಕೆ.ಜಿ. ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ದತಿಯಡಿ ಮಾರ್ಚ್ 2025 ರ ಮಾಹೆಯ ಪಡಿತರ ವಿತರಣೆಯೊಂದಿಗೆ ಸೇರಿಸಿ ವಿತರಿಸಲು ಸರ್ಕಾರದಿಂದ ಆದೇಶಿಸಲಾಗಿದೆ.
ಅಂತ್ಯೋದಯ (ಎಎವೈ) ಕಾರ್ಡಿಗೆ ಕೇಂದ್ರದಿಂದ ೩ ಸದಸ್ಯರ ವರೆಗಿನ ಪಡಿತರ ಚೀಟಿಗೆ 25 ಕೆ.ಜಿ ಅಕ್ಕಿ, ರಾಜ್ಯದಿಂದ ೪ ಸದಸ್ಯರ ಮೇಲ್ಪಟ್ಟ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಆದ್ಯತಾ (ಪಿಹೆಚ್‌ಹೆಚ್) ಕಾರ್ಡಿಗೆ ಕೇಂದ್ರದಿಂದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ, ರಾಜ್ಯದಿಂದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.