ಚಿಕ್ಕಮಗಳೂರು-ನಗರದ-ಸರ್ಕಾರಿ-ಬಸ್-ನಿಲ್ದಾಣದಲ್ಲಿ- ಮೂಲಸೌಕರ್ಯಕ್ಕೆ-ಒತ್ತಾಯ

ಚಿಕ್ಕಮಗಳೂರು:- ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸುತ್ತಲು ಸ್ವಚ್ಚತೆಯ ಬಗ್ಗೆ ಗಮಹರಿಸಬೇಕು ಎಂದು ಸಮಾಜ ಪರಿವರ್ತನಾ ಸಂಘದ ಮುಖಂಡರು ಗಳು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ಕುಮಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯವು ಸಾವಿರಾರು ಪ್ರವಾಸಿಗರು, ಸಾರ್ವಜನಿಕರು ಪ್ರಯಾಣಿಸುತ್ತಾರೆ. ಆದರೆ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಇಲ್ಲ ಮತ್ತು ಅವ್ಯವಸ್ಥೆಯಿಂದ ಕೂಡಿರುವ ಕಾರಣ ಹಿಡಿಶಾಪ ಹಾಕುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.

ಬಸ್ ನಿಲ್ದಾಣದ ಕೆಲವು ಭಾಗಗಳಲ್ಲಿ ಕೆಟ್ಟ ದುರ್ವಾಸನೆ, ಎಲ್ಲೆಂದರಲ್ಲಿ ಕಸಕಡ್ಡಿಗಳ ಹಾಕುವುದು, ಶೌ ಚಾಲಯ ಅಸ್ವಚ್ಚತೆಯಿಂದ ಮೂಗು ಮುಚ್ಚಿಕೊಂಡು ಪ್ರಯಾಣೀಕರು ಓಡಾಡಬೇಕಿದೆ. ನಿಲ್ದಾಣದ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಮುಂಜಾಗ್ರತೆ ವಹಿಸದೇ ಮಾರಾಟ ಮಾಡುತ್ತಿರುವ ಹಿನ್ನೆಲೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಆಹಾರಗಳಲ್ಲಿ ನೊಣಗಳು ಮುತ್ತಿಕೊಳ್ಳದಂತೆ ಗಾಜಿನ ಬಾಕ್ಸ್ ಬಳಸದಿರುವ ಕಾರಣ ಸೇವಿಸುವ ಪ್ರ ಯಾಣಿಕರು ಮಾರಾಣಾಂತಿಕ ಕಾಯಿಲೆಗಳು ಉತ್ತಾಗುತ್ತಿದ್ದಾರೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಇಲಾಖೆ ಪ್ರಯಾಣಿಕರ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಹಾಗೂ ಆಹಾರ ಪದಾರ್ಥಗಳನ್ನು ಸುರಕ್ಷತೆ ವ್ಯಾಪಾರ ನಡೆಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ಮತ್ತಿತರರು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?