ಚಿಕ್ಕಮಗಳೂರು:– ಮುಸಲ್ಮಾರಿಗಾಗಿ ಸಂವಿಧಾನವನ್ನು ತಿದ್ದುಪಡಿಗೆ ಹೋರಾಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಯನ್ನು ವಿರೋಧಿಸಿ ಹಿಂದೂ ಭೀಮ್ ಆರ್ಮಿ ಮುಖಂಡರುಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಮುಖಂಡ ಅಲ್ಲಂಪುರ ಪ್ರದೀಪ್ ಮಾತನಾಡಿ ರಾಜ್ಯದಲ್ಲಿ ಮುಸ್ಲೀಂಮರಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನವನ್ನೇ ಬದಲಿಸುತ್ತೇವೆ ಎಂಬ ಹೇಳಿಕೆ ನೀಡಿದ ಡಿಕೆಶಿಗೆ ನಾಚಿಕೆಯಾಗಬೇಕು. ಸಂವಿಧಾನದಡಿ ಅಧಿಕಾರ ಪಡೆದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಡಿಕೆಶಿಯನ್ನು ಸಚಿವ ಸಂಪುಟದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಸಂವಿಧಾನ ವಿರೋಧಿ ಸತ್ಯವನ್ನು ಸಮಾಜದ ಬಂಧುಗಳು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಮಾತಿಗೆ ಬೆರೆಗಾಗಬಾರದು. ಆ ನಿಟ್ಟಿನಲ್ಲಿ ಡಿಸಿಎಂ ಸಾರ್ವಜನಿಕ ಕ್ಷಮೆಯಾಚಿಸಿ, ರಾಜೀನಾಮೆ ಸಲ್ಲಿಸದಿದ್ದಲ್ಲಿ ನಾಡಿನ ಪ್ರತಿಯೊಬ್ಬರು ಸಂವಿಧಾನದ ಉಳಿಸುವ ಬಂಡೆಗಳಾಗಿ ರಾಜ್ಯಾದ್ಯಂತ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ಡಾ|| ಬಿ.ಆರ್.ಅಂಬೇಡ್ಕರ್ ಸಮಾನತೆಯ ಆಧಾರದಲ್ಲಿ ಸಂವಿಧಾನ ರಚಿಸಿ ಸಮಾಜಕ್ಕೆ ಕೊಡುಗೆ ನೀಡಿ ದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ತಿದ್ದುಪಡಿಗೆ ಕೈಹಾಕಲು ಯಾರಿಂದಲೂ ಸಾದ್ಯವಿಲ್ಲ. ಒಂ ದು ವೇಳೆ ಮುಂದಾದರೆ ಪ್ರಜೆಗಳು ಆಡಳಿತ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾರೆ ಎಂದು ಎಚ್ಚರಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಸಂವಿಧಾನ ಪುಸ್ತಕ ಜೇಬಿನಲ್ಲಿರಿಸಿ ಓಡಾಡಿದರೆ ಸಾಲ ದು. ಸಾರಾಂಶವನ್ನು ಅರ್ಥ ಮಾಡಿಕೊಳ್ಳಬೇಕು. ಇದೀಗ ರಾಜ್ಯದ ಉಪಮುಖ್ಯಮಂತ್ರಿಗಳೇ ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದು ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸೂಚಿಸಬೇಕು ಎಂದರು.

ಹಿಂದೂ ಭೀಮ್‌ಆರ್ಮಿ ಅಧ್ಯಕ್ಷ ಯೋಗೀಶ್ ಮಾತನಾಡಿ ಸಮಬಾಳು, ಸಮಾನತೆ ಹಾಗೂ ಸರ್ವರಿ ಗೂ ಕಾನೂನು ಒಂದೇ ಎಂಬುದು ಸಂವಿಧಾನದಲ್ಲಿ ಅಡಕವಾಗಿದೆ. ಯಾವುದೇ ಒಂದು ಮತಕ್ಕೆ ಮೀಸಲಾ ತಿ ಕಲ್ಪಿಸಲು ರಚಿಸಿಲ್ಲ. ಹೀಗಾಗಿ ನಾಡಿನಾದ್ಯಂತ ಜನತೆ ಒಗ್ಗಟ್ಟಾಗಿ ಡಿಸಿಎಂ ನಡೆಯ ಖಂಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮ್‌ಆರ್ಮಿ ಉಪಾಧ್ಯಕ್ಷ ಲಕ್ಷ್ಮಣ್, ಕಾರ್ಯದರ್ಶಿ ಧರ್ಮರಾಜು, ಸದಸ್ಯರಾದ ನಾಗರಾಜ್, ಕೇಶವ, ಪ್ರಸಾದ್, ರವಿನಾಯ್ಕ್, ಯತೀಶ್, ತೇಜಮೂರ್ತಿ, ಹೊನ್ನಬೋವಿ ಹಾಜರಿದ್ದರು.
- ಸುರೇಶ್ ಎನ್.