ಚಿಕ್ಕಮಗಳೂರು-ಸೋಲನ್ನು-ಕ್ರೀಡಾ ಸ್ಫೂರ್ತಿಯಾಗಿ-ಸ್ವೀಕರಿಸಿದರೆ ಗೆಲುವಿನ-ಮೆಟ್ಟಿಲು ಸುಲಭ-ಕೋಟೆ ರಂಗನಾಥ್


ಚಿಕ್ಕಮಗಳೂರು: ಯಾವುದೇ ಚುನಾವಣೆ ಅಥವಾ ಕ್ಷೇತ್ರದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಸೋಲನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿದರೆ ಗೆಲುವಿನ ಮೆಟ್ಟಿಲು ಸುಲಭವಾಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಕೋಟೆ ರಂಗನಾಥ್ ಹೇಳಿದರು.


ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ನಿರ್ದೇಶಕರುಗಳನ್ನು ಅಭಿನಂದಿಸಿ ಅವರು ಮಾತನಾಡಿ, ಚುನಾವಣೆಗೆ ನಮ್ಮ ನಾಯಕರಾದ ವಿಧಾನ ಪರಿಷತ್ ಶಾಸಕರಾದ ಡಾ.ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸತೀಶ್ ಸೇರಿದಂತೆ ಹಲವರು ಸಹಕಾರ ನೀಡಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಮುಖಂಡರುಗಳು ಉತ್ಸಾಹದಿಂದ ಮತಯಾಚನೆ ನಡೆಸುವುದರೊಂದಿಗೆ ಗೆಲುವಿಗಾಗಿ ಶ್ರಮಿಸಿದ್ದಾರೆ. ಅವರೆಲ್ಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್ ಮಾತನಾಡಿ, ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿರುವ ನಮ್ಮ ಪಕ್ಷ ಬೆಂಬಲಿತರು ಕುಗ್ಗಬಾರದು. ಮುಂದಿನ ದಿನಗಳಲ್ಲಿ ಸೋಲನ್ನು ಗೆಲುವಾಗಿಸುವ ನಿಟ್ಟಿನಲ್ಲಿ ಜನರ ಕೆಲಸಗಳನ್ನು ಮಾಡಬೇಕು ಎಂದು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಿ, ಸೋತವರಿಗೆ ಆತ್ಮಸ್ಥೈರ್ಯ ತುಂಬಿದರು.

ಚುನಾವಣೆಯಲ್ಲಿ ಜಯಗಳಿಸಿದ ಸಚಿನ್, ಮೋಹನ್ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡುವ ಮೂಲಕ ಅಭಿನಂದಿಸಲಾಯಿತು.

ಈ ವೇಳೆ ನಗರಸಭೆ ಮಾಜಿ ಸದಸ್ಯ ಜಾನಯ್ಯ, ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಎಚ್.ಕೆ.ಕೇಶವಮೂರ್ತಿ , ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನಕರಾಜ ಅರಸ್, ಎಸ್ಸಿ ಮೋರ್ಚಾ ಕಾರ್ಯದರ್ಶಿ ಹಂಪಯ್ಯ, ಮುಖಂಡರಾದ ನಾಗರಾಜ್, ಕುರುವಂಗಿ ಪುಟ್ಟಸ್ವಾಮಿ ಶೆಟ್ಟಿ, ಮೋಹನ್, ನೆಟ್ಟೇಕೆರೆಹಳ್ಳಿ ಪಾಂಡು, ಯತೀರ್ಶ, ಧನಂಜಯಕುಮಾರ್, ಕುಪ್ಪೇನಹಳ್ಳಿ ಸತೀಶ್, ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಜಗದೀಶ್ ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?