ಚಿಕ್ಕಮಗಳೂರು-ದೇವಾಂಗ ಜನಾಂಗದ ಬಗ್ಗೆ ಅಪಾರ ಕಾಳಜಿ ಹೊಂದಿರುವ ರಾಜ್ಯ ಸರ್ಕಾರ ಆರ್ಥಿಕ ಏಳಿಗೆಗೆ ಶ್ರಮಿಸುವ ಜೊತೆಗೆ ಸಮಾಜದ ಮುಖಂಡರನ್ನು ಅಭಿವೃದ್ಧಿ ನಿಗಮಗಳಿಗೆ ನೇಮಕಗೊಳಿಸಿ ಸದಾಬದ್ಧವಾಗಿದೆ ಎಂದು ಶಾಸಕ ಜಿ.ಹೆಚ್.ಶ್ರೀನಿವಾಸ್ ಹೇಳಿದರು.
ಅಜ್ಜಂಪುರ ತಾಲ್ಲೂಕಿನ ಶಿವನಿ ಗ್ರಾಮದಲ್ಲಿ ಏರ್ಪಡಿಸಿದ್ಧ ಜಿಲ್ಲಾ ಮಟ್ಟದ ಆದ್ಯ ವಚನಕಾರ ಶ್ರೀ ದೇವ ರ ದಾಸಿಮಯ್ಯನವರ 1045ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕವೇ ಬದುಕು ಎಂಬ ಸಂದೇಶ ಸಾರಿದ ಶ್ರೀ ದೇವರ ದಾಸಿಮಯ್ಯನವರು ನೇಯ್ಗೆ ವೃತ್ತಿಯಲ್ಲಿ ಪರಿಣಿತರಾಗಿದ್ದರು. ವಚನ ಸಾಹಿತ್ಯದ ಮೂಲಕ ಮಾನವ ಜನಾಂಗಕ್ಕೆ ಪ್ರೇರಣೆಯಾಗಿ ಬದುಕಿದ್ದು ಇಂದಿನ ಯುವಪೀಳಿಗೆ ದಾಸಿಮಯ್ಯ ತತ್ವ, ಆದರ್ಶ ಹಾಗೂ ನಡೆನುಡಿ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ದೇವಾಂಗರ ಅಭಿವೃದ್ದಿಗಾಗಿ ಸಿದ್ದರಾಮಯ್ಯರು ಈ ಹಿಂದೆ ದಾಸಿಮಯ್ಯ ಜಯಂತಿಯನ್ನು ಅಧಿಕೃತ ವಾಗಿ ಘೋಷಿಸಿದರು. ಅಲ್ಲಿಂದ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ದಾಸಿಮಯ್ಯರ ಜಯಂತಿಗೆ ಹಣವನ್ನು ಮೀಸ ಲಿಟ್ಟು ಆಚರಣೆಗೆ ಮುಂದಾಗಿದ್ದು ದಾಸಿಮಯ್ಯರ ಚರಿತ್ರೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ದೇವಾಂಗರು ಮುನ್ನೆಲೆಗೆ ಬರಲು ರಾಜ್ಯಸರ್ಕಾರ ಅನೇ ಕ ಸವಲತ್ತನ್ನು ಕಲ್ಪಿಸಿದೆ. ಜೊತೆಗೆ ರಾಜ್ಯದ ಬಡವರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಸಮುದಾ ಯದ ಪರವಿದ್ದು ದಾಸಿಮಯ್ಯರ ಸಂದೇಶದ ಸಮ ಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದು ತಿಳಿಸಿದರು.
ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ರಾಜ್ಯದಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇವಾಂಗರ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿ ಸರ್ಕಾರ ಅನುವು ಮಾಡಿಕೊಟ್ಟಿದ್ದು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ದಾಸಿಮಯ್ಯರ ವಿಚಾರಧಾರೆ ಎಲ್ಲೆಡೆ ಪಸರಿಸಲು ಮುಂದಾ ಗಬೇಕು ಎಂದು ಸಲಹೆ ಮಾಡಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮಿ ನಾರಾಯಣ್ ಮಾತನಾಡಿ ಕ್ರಿ.ಶ.11ರ ಶತಮಾನದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಜನಿಸಿದ ಶ್ರೀ ದೇವರದಾಸಿಮಯ್ಯರು ನೇಯ್ಗೆ ಕಾಯಕವನ್ನೇ ಆರಂಭಿಸಿ ನಾಡಿನಾದ್ಯಂತ ಪ್ರಶಂಸೆ ಪಡೆದುಕೊಂಡರು. ವಚನಕಾರರಾಗಿ ಸಮಾಜದ ಒಳಿತಿಗಾಗಿ ಜೀವನವನ್ನೇ ಮುಡಿಪಿಟ್ಟು ಸರ್ವ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ದೇವಾಂಗ ಸಂಘದ ಚಿಕ್ಕಮಗಳೂರು ನಗರಾಧ್ಯಕ್ಷ ಭಗವತಿ ಹರೀಶ್ ಮಾತನಾಡಿ ಭವ್ಯ ಪರಂಪರೆ ಹಾಗೂ ಇತಿಹಾಸಕಾರ ದಾಸಿಮಯ್ಯರು ಬದುಕಿನ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾಜ್ಞಾನಿ. ಈ ಮಾರ್ಗದಲ್ಲಿ ಜನಸಾಮಾನ್ಯರು ಸಾಗಿದರೆ ಬದುಕಿನಲ್ಲಿ ಒತ್ತಡಗಳು ಕ್ಷೀಣಿಸಿ ನೆಮ್ಮದಿ ಕಾಣಬಹುದು ಎಂದು ಹೇಳಿದರು.

ಧಾರವಾಡ ಜಿಲ್ಲೆಯ ಶ್ರೀ ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಮನುಷ್ಯ ಬದುಕು ಪರಿಪೂರ್ಣವಾಗಲು ದಾಸಿಮಯ್ಯರ ಚರಿತ್ರೆಯನ್ನು ಅಭ್ಯಾಸಿಸಬೇಕು. ಜೊತೆಗೆ ಇಂದಿನ ಯುವಪೀಳಿಗೆ ಬದುಕಿನಲ್ಲಿ ಯಶಸ್ಸಿನತ್ತ ಸಾಗಲು ದಾಸಿಮಯ್ಯರ ಜೀವನಶೈಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕಿ ಹೆಚ್.ಹೇಮಾವತಿ ಚಂದ್ರಶೇಖರಯ್ಯ ಅವರಿಗೆ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವನಿ ದೇವಾಂಗ ಸಂಘದ ಅಧ್ಯಕ್ಷ ಎಸ್.ಜಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್, ಶಿವನಿ ಗ್ರಾ.ಪಂ. ಅಧ್ಯಕ್ಷೆ ಸವಿತಾ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಟಿ.ತ್ಯಾಗರಾಜ್, ತಾಲ್ಲೂಕು ಅದ್ಯಕ್ಷ ಜಿ.ಚಂದ್ರಶೇಖರಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಗಿರಿಯಪ್ಪ, ವೀರಾಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಶ್ರೀಕಂಠಪ್ಪ, ಗ್ರಾ.ಪಂ. ಸದಸ್ಯ ಚಂದ್ರಶೇಖರ್, ಮುಖಂಡ ರುಗಳಾದ ಓಂಕಾರಪ್ಪ, ಸುರೇಶ್, ಶ್ರೀಧರ್, ಯತೀಶ್, ರವಿ, ಕಾಂತರಾಜ್, ಕಲ್ಲೇಶ್, ನಿರಂಜಮೂರ್ತಿ ಮತ್ತಿತರರು ಭಾಗವಹಿಸಿದ್ದರು.
- ಸುರೇಶ್ ಎನ್.