ಚಿಕ್ಕಮಗಳೂರು:– ಸಾರ್ವಜನಿಕರು ಹಾಗೂ ಬಡಾವಣೆ ನಿವಾಸಿಗಳ ಹಿತದೃಷ್ಟಿಯಿಂದ ಉದ್ಯಾನವನಕ್ಕೆ ಬೋರ್‌ವೇಲ್ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ನಗರದ ಗೌರಿಕಾಲುವೆ ಸಮೀಪ ಜಯಪ್ರಕಾಶ್ ನಾರಾಯಣ ಉದ್ಯಾನವನಕ್ಕೆ ಬುಧವಾರ ಮುಂಜಾನೆ ಭೇಟಿ ನೀಡಿ ಮಾತನಾಡಿದ ಅವರು ಸ್ವಚ್ಚತೆ ಕಾಪಾಡುವಲ್ಲಿ ನಗರಸಭೆ ಜೊತೆಗೆ ಸ್ಥಳೀಯ ನಿವಾಸಿಗಳು ಕೈ ಜೋಡಿಸಿದರೆ ಕಸರಾಶಿ ಬೀಳದಂತೆ ಕ್ರಮ ವಹಿಸಬಹುದು ಎಂದು ಹೇಳಿದರು.
ಪ್ರಸ್ತುತ ಉದ್ಯಾನವನ ಅಭಿವೃದ್ದಿ ಸಮಿತಿಯವರು ಬೋರ್‌ವೇಲ್ ಮತ್ತು ಕುಳಿತುಕೊಳ್ಳಲು ಆಸನದ ಕೊರತೆಯಿದೆ ಎಂಬುದು ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಪಾರ್ಕ್ ಅಭಿವೃದ್ದಿಗೆ ಅನುದಾನ ಬಿಡುಗಡೆಗೊ ಳಿಸಿ ಅಚ್ಚುಕಟ್ಟಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪಾರ್ಕ್ಗಳಲ್ಲಿ ಕಸಕಡ್ಡಿಗಳನ್ನು ಹಾಕಿ ನೈರ್ಮಲ್ಯಗೊಳಿಸಬಾರದು. ಸ್ವಚ್ಚಂಧ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಸಸಿಗಳನ್ನು ನೆಟ್ಟು ಪೋಷಿಸಿದರೆ ಭವಿಷ್ಯದಲ್ಲಿ ಮಕ್ಕಳಿಗೆ ನೆರಳಾಗಿ ಕಾಪಾ ಡಲಿದೆ ಎಂಬುವ ಸಾಮಾನ್ಯ ಜ್ಞಾನ ಹೊಂದಬೇಕು ಎಂದು ತಿಳಿಸಿದರು.

ಉದ್ಯಾನವನ ಅಭಿವೃಧ್ದಿ ಸಮಿತಿ ಅಧ್ಯಕ್ಷ ರವಿ ಕಳವಾಸೆ ರಾತ್ರಿವೇಳೆ ಕೆಲವು ಯುವಕರು ಪಾರ್ಕ್ ಒಳ ಗೆ ಅನೈತಿಕ ಚಟುವಟಿಕೆಗಳ ತಾಣವಾಗಿಸಿಕೊಂಡಿದ್ದಾರೆ. ಹೀಗಾಗಿ ನಗರಸಭಾ ಆಡಳಿತವು ರಾತ್ರಿಪಾಳಯ ದಲ್ಲಿ ಎಚ್ಚರಿಸಲು ಅಧಿಕಾರಿಗಳನ್ನು ನೇಮಿಸಿದರೆ ಅನುಕೂಲವಾಗಲಿದೆ ಎಂದರು.
ಪಾರ್ಕ್ ಅಭಿವೃಧ್ದಿ ಸಹಿಸದ ಕೆಲವರು ಮನೆಗಳ ಕಸಗಳನ್ನು ಪಾರ್ಕ್ಗಳಲ್ಲಿ ಹಾಕುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸಿಸಿಟಿವಿ ಅಳವಡಿಸಿದರೆ ಅನುಕೂಲ. ಜೊತೆಗೆ ಪಾರ್ಕ್ ಆವರಣದಲ್ಲಿ ಅಂಗನವಾಡಿ ಕೇಂದ್ರವಿದ್ದು, ಮಕ್ಕಳಿಗೆ ಆಟೋಪಕರಣಗಳ ಸಾಮಾಗ್ರಿ ಅಳವಡಿಸಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉದ್ಯಾನವನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಸೂದ್, ಸಮಿತಿಯವರಾದ ಮೆಹ ರಾಜ್, ದಯಾನಂದ್, ಸುಜಾತ, ಜಮೀಲ್, ಭವ್ಯ, ಸುಜಾತ ಶಂಕರ್, ಸರಸ್ವತಿ ಸೇರಿದಂತೆ ಸ್ಥಳೀಯರು ಹಾಜರಿದ್ದರು.
- ಸುರೇಶ್ ಎನ್.