ಚಿಕ್ಕಮಗಳೂರು– ಬದಲಾದ ವಿದ್ಯಮಾನಗಳಿಗೆ ತಕ್ಕಂತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಈಗಿನ ತಲೆಮಾರಿಗೆ ಅನುಕೂಲ ವಾಗುವಂತೆ ಗೃಹ ಉಪಯೋಗಿ ವಸ್ತುಗಳನ್ನು ತಯಾರಿಸಿ ಜಿಲ್ಲೆಯ ಜನರಿಗೆ ಆಕರ್ಷಕ ದರದಲ್ಲಿ ಮಾರಾಟ ಮಾಡಲು ಈ ಎಲ್ ಜಿ ಎಲೆಕ್ಟ್ರಾನಿಕ್ ಮಾರಾಟ ಮಳಿಗೆ ಸಹಕಾರಿಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ ತಿಳಿಸಿದರು.
ಅವರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಗರದ ಎಂಜಿ ರಸ್ತೆಯಲ್ಲಿ ಉದ್ಘಾಟನೆಗೊಂಡ ಉತ್ಕೃಷ್ಟ ಗುಣಮಟ್ಟದ ಎಲ್. ಜಿ ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದಿನ ತಲೆಮಾರಿಗೆ ತಕ್ಕಂತೆ ಜೀವನಶೈಲಿಯನ್ನು ಸುಗಮಗೊಳಿಸಲು ಎಲ್ ಜಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು ಅದರಂತೆ ಈ ಸಂಸ್ಥೆಯಲ್ಲಿ ಹಲವಾರು ಉಪಕರಣಗಳು ಜನಸ್ನೇಹಿಯಾಗಿ ಜೀವನವನ್ನು ಸರಳಗೊಳಿಸಲು ಆಕರ್ಷಕ ಬೆಲೆಯಲ್ಲಿ ಹಲವು ಉಪಕರಣಗಳನ್ನು ಮಾರಾಟ ಮಾಡಲು ನಗರದಲ್ಲಿ ತಮ್ಮ ಶಾಖೆಯನ್ನು ಆರಂಭಿಸಿರುವುದು ಸಂತೋಷದಾಯಕ ಎಂದು ಹೇಳಿದರು.
ಸಮಾಜ ಸೇವಕಿ ಪಲ್ಲವಿ ಸಿಟಿ ರವಿ ಅವರು ಮಾತನಾಡಿ ನಗರದಲ್ಲಿ ಇಂದು ಉದ್ಘಾಟನೆ ಆಗಿರುವ ಮಾರಾಟ ಮಳಿಗೆ ರಾಜ್ಯದಲ್ಲಿ ೫೫ನೇ ಶಾಖೆಯಾಗಿದ್ದು ಈ ಮಳಿಗೆಯಲ್ಲಿ ಎಲ್ಲಾ ರೀತಿಯ ಗೃಹ ಉಪಯೋಗಿ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಸ್ತುಗಳು ಒಂದೇ ಸೂರಿನ ಅಡಿ ದೊರೆಯುತ್ತಿರುವುದು ಜಿಲ್ಲೆ ಹೆಣ್ಣು ಮಕ್ಕಳಿಗೆ ಒಂದು ಉತ್ತಮ ವರದಾನವಾಗಲಿದೆ ಈ ಮಾರಾಟ ಮಳಿಗೆಯ ಸದುಪಯೋಗವನ್ನು ಪ್ರತಿಯೊಬ್ಬ ಸಾರ್ವಜನಿಕರು ಬಳಸಿಕೊಂಡು ತಮ್ಮ ಜೀವನ ಶೈಲಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಲ್.ಜಿ ಸಂಸ್ಥೆಯ ಮುಖ್ಯಸ್ಥರಾದ ಮನೋಜ್ ಮೋಹನ್ ದಾಸ್, ರಾಜ ಮೋಹನ್, ಮಹೇಶ್, ಟ್ರಾಪಸೋಲ್ ಸಂಸ್ಥೆಯ ಮುಖ್ಯಸ್ಥರಾದ ಲಲಿತ್, ಶರತ್, ಎಲ್.ಜಿ ಚಿಕ್ಕಮಗಳೂರು ಶಾಖೆಯ ವ್ಯವಸ್ಥಾಪಕರಾದ ಗಿರೀಶ್ ಸೇರಿದಂತೆ ಸಿಬ್ಬಂದಿಗಳು ಹಾಗೂ ಹಲವರು ಉಪಸ್ಥಿತರಿದ್ದರು.