ಚಿಕ್ಕಮಗಳೂರು– ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮುಂದಾ ಲೋಚನೆಯಿಂದ ರಾಜ್ಯದ ಸಾಕಷ್ಟು ಕೆರೆಗಳ ಅಭಿವೃದ್ದಿ ಹಾಗೂ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಿ ಜನಪರ ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ತಾಲ್ಲೂಕಿನ ನೆಟ್ಟೆಕೆರೆಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪ ಡಿಸಿದ್ದ ಕೆರೆಹೂಳು ಎತ್ತುವ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪೂಜ್ಯ ಹೆಗ್ಗಡೆಯವರ ಪರಿಕಲ್ಪನೆಯಿಂದ ಸಾಕಷ್ಟು ಹಳ್ಳಿಗಳು ಉದ್ದಾರವಾಗಿವೆ. ಅಲ್ಲದೇ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡು ಜೀವನ ಸಾಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಯೋಜನೆಯಿಂದ ವಾತ್ಸಲ್ಯ ಮನೆ, ನಿರ್ಗತಿಕರಿಗೆ ಮಾಶಾಸನ, ಅನೇಕ ದೇವಾಲಯ ಜೀ ರ್ಣೋದ್ದಾರಕ್ಕೆ ಅನುದಾನ, ಸಮುದಾಯದ ಏಳಿಗೆಗೆ ಸಾಮಾಜಿಕವಾಗಿ ಪ್ರೋತ್ಸಾಹ ಕಲ್ಪಿಸುತ್ತಿದ್ದು ಜನಸಾ ಮಾನ್ಯರು ಯೋಜನೆಗಳ ಸೌಲಭ್ಯ ಸದುಪಯೋಗಪಡಿಸಿಕೊಂಡು ಮುನ್ನೆಡೆಯಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿರುವ ಕೆರೆಗಳ ಹೂಳೆತ್ತಿರುವ ಮಣ್ಣನ್ನು ಸ್ಥಳೀಯ ರೈತರು ಜಮೀನಿಗೆ ಬಳಸಿಕೊಂಡು ಉತ್ತಮ ಫಸಲು ಪಡೆಯಲು ಸಾಧ್ಯ. ಅಲ್ಲದೇ ಕೆರೆಯು ಸ್ವಚ್ಚಂಧವಾಗುವ ಮೂಲಕ ದನಕರು, ಪಕ್ಷಿಗಳಿಗೆ ಯೋಗ್ಯವಾದ ಕುಡಿಯುವ ನೀರು ದೊರೆಯಲಿದೆ ಎಂದು ತಿಳಿಸಿದರು.
ಧ.ಗ್ರಾ. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ೧೮ ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ಗ್ರಾಮಾಭಿವೃದ್ದಿ ಯೋಜನೆ ಪೂರ್ಣಗೊಳಿಸಿದೆ. ಅಲ್ಲದೇ ರಾಜ್ಯಾದ್ಯಂತ 578 ಕೆರೆ ಗಳ ಹೂಳು ತೆಗೆದು ಸ್ಥಳೀಯ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಭಾಗ್ಯ ಶ್ರೀನಿವಾಸ್, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ, ಕೆರೆ ಸಮಿತಿ ಅಧ್ಯಕ್ಷ ಲೋಕೇಶ್, ಉಪಾದ್ಯಕ್ಷ ನಾಗೇಶ್, ಮೂರ್ತಿ, ಒಕ್ಕೂಟದ ಅ ಧ್ಯಕ್ಷ ಚಂದ್ರಶೇಖರ್, ಪಿಡಿಓ ಪ್ರೇಮ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕುಮಾರ್, ತಾಲ್ಲೂಕು ಯೋಜ ನಾಧಿಕಾರಿ ರಮೇಶ್ ನಾಯ್ಕ, ಕೆರೆ ಅಭಿಯಂತರ ಹರೀಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
–ಸುರೇಶ್ ಎನ್ ಚಿಕ್ಕಮಗಳೂರು