ಚಿಕ್ಕಮಗಳೂರು:– ಕನ್ನಡನಾಡು ಸಾಹಿತ್ಯ, ಸಂಗೀತ, ಕಲೆಗಳಿಗೆ ಜೀವತುಂಬಿದ ಬೀಡು. ಕವಿಸಂತರು, ಕೀರ್ತನೆಕಾರರ ಕೊಡುಗೆಯಿಂದ ಕನ್ನಡ ಭಾಷೆ ದೇಶಾದ್ಯಂತ ಮನ್ನಣೆ ಪಡೆದುಕೊಂಡಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ನಗರದ ಹಿರೇಮಗಳೂರು ಸಮೀಪ ಶ್ರೀ ಕೋದಂಡರಾಮ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಮಹಿಳಾ ಘಟಕದ ಸೇವಾದೀಕ್ಷೆ ಸಮಾರಂಭ ಮತ್ತು ದತ್ತಿ ಉಪನ್ಯಾಸ ಕಾರ್ಯ ಕ್ರಮವನ್ನು ಭಾನುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಚಿಕ್ಕಮಗಳೂರು ವಿಶೇಷ ಸ್ಥಾನಮಾನವಿದೆ. ರಾಷ್ಟçಕವಿ ಕುವೆಂಪು ಜನನವಾದ ಊರಿನಲ್ಲಿ ಸಾಹಿತ್ಯಕ್ರಾಂತಿ ಯಥೆಚ್ಚವಾಗಿದೆ. ಅಲ್ಲದೇ ಪೂರ್ಣಚಂದ್ರ ತೇಜಸ್ವಿ ಕಥೆ, ಕಾದಂಬರಿಗಳು ಓದುಗರರಿ ಗೆ ವಿಶೇಷ ಅನುಭವ ನೀಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇತ್ತೀಚಿನ ಆಂಗ್ಲಭಾಷೆ ವ್ಯಾಮೋಹಕ್ಕೆ ಯುವಪೀಳಿಗೆ ದಾಸರಾಗುತ್ತಿದ್ದಾರೆ. ಎಡವಿ ಬಿದ್ದಾಗ ಬರುವಂಥ ಕನ್ನಡಪದ, ದೈನಂದಿನ ಕಾರ್ಯಗಳಲ್ಲಿ ತೋರುತ್ತಿಲ್ಲ. ಹೀಗಾಗಿ ಪಾಲಕರು ಮನೆಯಿಂದಲೇ ಭಾಷಾ ಸಂ ಸ್ಕೃತಿ, ಪರಂಪರೆ ಹಾಗೂ ಇತಿಹಾಸ ತಿಳಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲೆಯ ಕಸಾಪದಲ್ಲಿ ಮಹಿಳಾ ಘಟಕವು ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಅಡುಗೆ ಅ ಥವಾ ಕೆಲಸಕ್ಕೆ ಸೀಮಿತರಾಗದೇ ನಾಡಿನ ಸೌಗಂಧವನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯ. ಹೀಗಾಗಿ ಕನ್ನಡ ಕೆಲಸದಲ್ಲಿ ಹೆಚ್ಚು ಮಹಿಳಾ ಮಣಿಯರು ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಕನ್ನಡವೆಂದರೆ ಕೇವಲ ಭಾಷೆಯಲ್ಲ, ಉಸಿರೆಂದು ಭಾವಿಸಬೇಕು. ಪ್ರತಿನಿತ್ಯದ ಕೆಲಸ-ಕಾರ್ಯಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು. ಈ ನಡೆಯಿಂ ದಲೇ ಕನ್ನಡ ಸೊಗಡನ್ನು ಎಲ್ಲೆಡೆ ಪಸರಿಸಲು ಸಾಧ್ಯ ಎಂದ ಅವರು ನೂತನ ಮಹಿಳಾ ಅಧ್ಯಕ್ಷರು ಹೆಚ್ಚಿನ ಒತ್ತನ್ನು ನಾಡಿನ ಸೇವೆಗೆ ಮುಡಿಪಿಡಬೇಕು ಎಂದು ಹೇಳಿದರು.
ತಾಲ್ಲೂಕು ಮಹಿಳಾ ಘಟಕದ ನೂತನ ಅಧ್ಯಕ್ಷೆ ನಿರ್ಮಲ ಮಂಚೇಗೌಡ ಮಾತನಾಡಿ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖರಾಗುತ್ತೇನೆ. ಜೊತೆಗೆ ಹಿರಿಯರ, ಪದಾಧಿಕಾರಿಗಳ ಮಾ ರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡಾಭಿಮಾನಗಳ ಋಣ ತೀರಿಸುವ ಕೆಲಸ ಮಾಡು ವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆ ಕಸಾಪ ಮಹಿಳಾ ಸ್ಥಾಪಿಸಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಇದೀಗ ಮೈಸೂರು, ಬೀದ ರ್ ಜಿಲ್ಲೆಗಳಲ್ಲಿ ಮಹಿಳಾ ಘಟಕ ಸ್ಥಾಪಿಸುತ್ತಿವೆ. ಹೀಗಾಗಿ ಮಹಿಳೆಯರು ಕನ್ನಡದ ತೇರನ್ನು ಎಳೆದು ಭಾ ಷಾ ಸಂಸ್ಕೃತಿ ಬೆಳವಣಿಗೆಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಘಟಕದ ಪದಾಧಿಕಾರಿಗಳು : ನಿರ್ಮಲ ಮಂಚೇಗೌಡ (ಅಧ್ಯಕ್ಷೆ), ಸುಜಾತ ಶಿವಕಮಾರ್ (ಗೌ.ಅಧ್ಯಕ್ಷ), ರೂಪ ನಾಯ್ಕ್ (ಗೌ.ಕಾರ್ಯದರ್ಶಿ), ಆರಾಧನಾ ಸೋಮಶೇಖರ್ (ಕೋಶಾಧ್ಯಕ್ಷ), ರೇಖಾ ಹುಲಿಯಪ್ಪಗೌಡ, ಜಸಂತಾ ಅನಿಲ್‌ಕುಮಾರ್ (ಕಾಯಾಧ್ಯಕ್ಷರು), ಕಲಾವತಿ ರಾಜಣ್ಣ, ಕವಿತಾ ಶೇಖರ್ (ಪ್ರಧಾನ ಸಂಚಾಲಕಿ), ವಿಶಾಲ ನಾಗರಾಜ್, ಪುಷ್ಪರಾಜೇಂದ್ರ (ಸಂಘಟನಾ ಕಾರ್ಯದರ್ಶಿ) ಮತ್ತಿತರರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಉಪಪನ್ಯಾಸ ನೀಡಿ ದರು. ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಸೇವಾಧೀಕ್ಷೆ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್, ತಾಲ್ಲೂಕು ಕಸಾಪ ಅಧ್ಯಕ್ಷ ದಯಾನಂದ್ ಮಾವಿನಕೆರೆ, ನಗರಾಧ್ಯಕ್ಷ ಸಚಿನ್‌ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.