ಚಿಕ್ಕಮಗಳೂರು-ಡಾ|| ರಾಜ್ ನಟನೆಯ ಚಿತ್ರಗಳು ಯುವಕರಿಗೆ ಪ್ರೇರಣೆ-ರಾಜೇಗೌಡ


ಚಿಕ್ಕಮಗಳೂರು:– ನಾಡಿನ ಪ್ರಬುದ್ಧ ನಟ ಡಾ|| ರಾಜ್‌ಕುಮಾರ್ ಜೀವನಯುದ್ದಕ್ಕೂ ಕನ್ನಡ ಚಿತ್ರಗಳಲ್ಲಿ ನಟನೆ, ನಾಡಿನ ಪರವಾದ ಹೋರಾಟಗಳಲ್ಲಿ ಭಾಗಿಯಾಗಿ ಸದಾಕಾಲ ಭುವನೇಶ್ವರಿ ತಾ ಯಿಯ ಸೇವೆಗೆ ಮುಡಿಪಿಟ್ಟವರು ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಕನ್ನಡಸೇನೆ ವತಿಯಿಂದ ಆಯೋಜಿಸಿದ್ಧ ವರನಟ ಡಾ|| ರಾಜ್‌ಕುಮಾರ್ 97ನೇ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜನತೆ ಮನಸ್ಸಿನಲ್ಲಿ ನೆಲೆಯುರುವಂಥ ಚಲನಚಿತ್ರಗಳಲ್ಲಿ ನಟಿಸಿ ಮನ್ನಣೆ ಗಳಿಸಿದವರು ಡಾ|| ರಾಜ್‌ಕು ಮಾರ್ ಎಂದ ಅವರು ಪ್ರತಿ ಚಿತ್ರಗಳಲ್ಲಿ ಒಂದಿಲ್ಲೊಂದು ಸಂದೇಶಗಳು ಅಡಕವಾಗಿತ್ತು. ಸಕುಟುಂಬ ಸಮೇ ತ ವೀಕ್ಷಿಸಬಹುದು ಚಿತ್ರಗಳಲ್ಲಿ ನಟಿಸಿದ ಡಾ||ರಾಜ್ ಪ್ರೀತಿಧಾಯಕ ನಟರಾಗಿ ಹೊರಹೊಮ್ಮಿದ್ದರು ಎಂದರು.

ರಾಜಕೀಯ, ಪರಭಾಷೆಗಳಲ್ಲಿ ಹಲವಾರು ಅವಕಾಶ ಲಭಿಸಿದರೂ, ಯಾವುದಕ್ಕೂ ಹೆಚ್ಚು ಆಸಕ್ತಿ ತೋ ರುತ್ತಿರಲಿಲ್ಲ. ಕನ್ನಡ ಚಿತ್ರಗಳಲ್ಲಿ ನಟಿಸಿ ಅಪ್ಪಟ ಕನ್ನಡಾಭಿಮಾನ ತೋರಿದ ಹೆಮ್ಮೆಯ ನಟ ಎಂದರೆ ತಪ್ಪಾಗಲಾರದು. ಇಂದಿಗೂ ರಾಜ್‌ರವರ ಕುಟುಂಬವು ಕಲಾದೇವಿಯ ಸೇವೆಯಲ್ಲಿ ಮುಂದಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್ ಮಾತನಾಡಿ ಡಾ|| ರಾಜ್‌ಕುಮಾರ್ ಜೀವನಚೈತ್ರದಿಂದ ಅ ನೇಕರು ಮದ್ಯವನ್ನು ತ್ಯಜಿಸಿ ಸಾತ್ವಿಕ ಜೀವನ ನಡೆಸಿದರು. ಒಡಹುಟ್ಟಿದವರು ಸಿನಿಮಾದಿಂದ ಅಣ್ಣ, ತಮ್ಮಂ ದಿರ ಬಾಂಧವ್ಯ ಹೆಚ್ಚಾಗಿ ಒಂದಾಗಿ ಬಾಳುವಂಥ ಸನ್ನಿವೇಶಗಳು ರಾಜ್ಯಾದ್ಯಂತ ನಡೆದಿವೆ ಎಂದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಕಾಲೇಜಿನ ಸಮಯದ ಲ್ಲಿ ಡಾ|| ರಾಜ್‌ಕುಮಾರ್ ಚಿತ್ರಗಳು ಬಂತೆಂದರೆ ಎಲ್ಲಿಲ್ಲದ ಖುಷಿ. ಬಂಗಾರದ ಮನುಷ್ಯ, ಸಾಕ್ಷಾತ್ಕಾರ, ಸಂಪತ್ತಿಗೆ ಸವಾಲ್, ಎರಡು ಕನಸು, ದಾರಿತಪ್ಪಿದ ಮಗ ಚಿತ್ರಗಳು ಮನಸ್ಸಿಗೆ ಅತ್ಯಂತ ಪ್ರಿಯವಾದುದು ಎಂದು ಹೇಳಿದರು.

ತಹಶೀಲ್ದಾರ್ ರೇಷ್ಮಾ ಮಾತನಾಡಿ, ಕನ್ನಡಕ್ಕಾಗಿ ಜನಿಸಿ, ಕನ್ನಡಕ್ಕೆ ಮುಡಿಪಿಟ್ಟ ನಟ ಡಾ|| ರಾಜ್‌ಕುಮಾ ರ್ ಅವಿಸ್ಮರಣೀಯ. ವಿಶಿಷ್ಟ ನಟನೆ, ಗಾಯನದ ಜೊತೆಗೆ ವೈಯಕ್ತಿಕವಾಗಿ ವಿಶಾಲತೆ, ವಿನಯ ಹಾಗೂ ಸಹೃ ದಯಿಯಾಗಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜ ಶೇಖರ್, ಡಿವೈಎಸ್ಪಿ ಶೈಲೇಂದ್ರ, ಕನ್ನಡಸೇನೆ ಆಟೋ ಕನ್ನಡ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಲಕ್ಷ್ಮ, ಕಳವಾಸೆ ರವಿ, ಶಂಕರೇಗೌಡ, ಸತೀಶ್, ವಿನಯ್, ದೇವರಾಜ್, ಅನ್ವರ್, ಇಸ್ಮಾಯಿಲ್ ಇದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?