ಚಿಕ್ಕಮಗಳೂರು- ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ನ್ನು ಕಡ್ಡಾಯವಾಗಿ ಕನ್ನಡಶಾಲೆಗಳಿಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಮುಂದಾಗ ಬೇಕು ಎಂದು ಶಾಲೆಯ ನಿವೃತ್ತ ಶಿಕ್ಷಕಿ ಅಪೋಲಿನ್ ಸಾಲ್ಡಾನ ಹೇಳಿದರು.
ತಾಲ್ಲೂಕಿನ ತಳಿಹಳ್ಳಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ, ತಳಿಹಳ್ಳಿ ಗ್ರಾ.ಪಂ. ಹಾಗೂ ಹಳೇ ವಿದ್ಯಾರ್ಥೀಗಳ ಸಂಘದ ವತಿಯಿಂದ ಏರ್ಪಡಿಸಿದ್ಧ ಇಳೆಹೊಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ, ಶಾರದಪೂಜೆ ಮತ್ತು ಹಳೇ ವಿದ್ಯಾ ರ್ಥಿ ಸಂಘದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆ ದೇಶದ ಇತಿಹಾಸ ತೆರೆದು ನೋಡಬೇಕಿದೆ, ಹಲವಾರು ಸಾಧಕರು ಸರ್ಕಾ ರಿ ಶಾಲೆಗಳಲ್ಲಿ ಕಲಿತ ಮೌಲ್ಯಯುತ ಶಿಕ್ಷಣದಿಂದ ಇಂದು ಅನೇಕ ಹುದ್ದೆ, ಸ್ಥಾನಮಾನ ಗಳಿಸಲು ಕಾರಣ ವಾಗಿದೆ. ಹೀಗಾಗಿ ಈ ಪರಿಪಾಠವನ್ನು ಮೊದಲು ಪಾಲಕರು ಮೈಗೂಡಿಸಿಕೊಂಡು, ಮಕ್ಕಳಲ್ಲಿ ಭಿತ್ತುವ ಕಾ ರ್ಯ ಮಾಡಿದರೆ ಸರ್ಕಾರಿ ಶಾಲೆ ಪ್ರಗತಿ ಹೊಂದಲು ಸಾಧ್ಯ ಎಂದರು.
ನಗರಕ್ಕಿAತ ಹೆಚ್ಚು ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿಶಾಲವಾದ ಆಟದ ಮೈದಾನ, ಪ್ರಕೃತಿ ಸಂಪತ್ತು ಹೆಚ್ಚು ಕೂಡಿರುತ್ತದೆ. ವಿದ್ಯಾರ್ಥಿಗಳು ದೈಹಿಕ ಕ್ರೀಡಾಕೂಟಗಳಿಗೆ ಬಹಳಷ್ಟು ಅನುಕೂಲವಾಗಿದೆ. ಈ ಕಾರಣ ದಿಂದಲೇ ಸಾಧನೆಯ ಹಾದಿ, ಸಾಧಕರಿಗೆ ದಕ್ಕಿದೆ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕ ವೀರೇಶ್ ಕೌಲಗಿ ಮಾತನಾಡಿ ಸರ್ಕಾರಿ ಶಾಲೆಗಳಿಗೆ ಕೊಂಚವು ತೊಂದರೆಯಾ ಗಬಾರದೆಂಬ ದೃಷ್ಟಿಯಿಂದ ಸರ್ಕಾರ ಮೂಲಭೂತ ಸೌಲಭ್ಯ ಪೂರೈಸಿ ಪ್ರೋತ್ಸಾಹಿಸುತ್ತಿದೆ. ಅಲ್ಲದೇ ಇಲಾ ಖೆಯಿಂದ ಶಾಲೆಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ದೇವಕಿ ಮಾತನಾಡಿ ಪ್ರಸ್ತುತ ಶಾಲೆಯು ೬೪ನೇ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಳೆಹೊಳೆ ಶಾಲೆಯಲ್ಲಿ ವ್ಯಾಸಂಗ ಪೂರೈಸಿದ ಅನೇಕರು ಇಂದು ವಿವಿಧ ಉದ್ಯಮ, ವ್ಯಾಪಾರ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ಮಾದರಿಯಾಗಿದ್ದಾರೆ ಎಂದರು.

ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಮುಖ್ಯೋಪಾಧ್ಯಯಿನಿ ನವ್ಯ ಅವ ರಿಗೆ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಸನ್ಮಾನಿಸಿದರು. ಜೊತೆಗೆ ವಿವಿಧ ಕ್ರೀಡಾಕೂಟದಲ್ಲಿ ವಿಜೇತ ರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ದಾನಿ ಸತೀಶ್, ಹಳೇ ವಿದ್ಯಾರ್ಥೀಗಳಾದ ವಿನೋದ್, ಯೋಗೀಶ್, ಸುಧಾ, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
- ಸುರೇಶ್ ಎನ್.