ಚಿಕ್ಕಮಗಳೂರು-ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ- ಜೇಸಿಐ ಅಧ್ಯಕ್ಷ ಪ್ರದೀಪ್ ಕೋಟೆ

ಚಿಕ್ಕಮಗಳೂರು, ಜೂನ್ 12:- ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸು ತ್ತದೆ. ಪರಿಸರದ ಸಮೃದ್ಧಿ, ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು ಜೇಸಿಐ ಅಧ್ಯಕ್ಷ ಪ್ರದೀಪ್ ಕೋಟೆ ಹೇಳಿದರು.

ನಗರ ಸಮೀಪದ ಇನೋವೇಷನ್ ಪಬ್ಲಿಕ್ ಶಾಲೆಯಲ್ಲಿ ಜೇಸಿಐ ಚಿಕ್ಕಮಗಳೂರು ಮಲ್ನಾಡ್ ಸಹ ಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿನೆಟ್ಟು ಮಾತನಾಡಿದರು. ಮಾನವ ಸೇರಿದಂತೆ ಸಕಲ ಜೀವರಾಶಿಗಳಿಗೂ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸ ರವನ್ನ ಅವಲಂಭಿಸಿವೆ. ಆದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸ ರವನ್ನು ನಾಶಗೊಳಿಸುವ ಜೊತೆಗೆ ಅತಿಹೆಚ್ಚು ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ವಾತಾವರಣಕ್ಕೆ ಧಕ್ಕೆಯುಂ ಟಾಗುತ್ತಿದೆ ಎಂದರು.

ಮನುಷ್ಯನ ವಿಪರೀತ ದುರಾಸೆಯಿಂದ ಇಂದು ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿ ಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವ ನ್ನು ಹಾಳು ಮಾಡಿ ಭೂತಾಯಿಗೆ ವಿಷವನ್ನು ಉಣಿಸುವ ಕಾರ್ಯದಲ್ಲಿ ನಿರತರಾಗಿದ್ದಾನೆ ಎಂದು ಹೇಳಿದರು.

ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾ ಡುವುದನ್ನು ತಡೆಯುವುದೇ ಈ ಕಾರ್ಯಕ್ರಮದ ಉದ್ದೇಶದಿಂದ ಶಾಲೆಗಳಲ್ಲಿ ಆಚರಿಸುವ ಮೂಲಕ ಮಕ್ಕಳ ಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಈ ಕಾರ್ಯದಲ್ಲಿ ವಿಶ್ವದ ಬಹುತೇಕ ದೇಶಗಳು ಭಾಗಿಯಾಗಿವೆ. ಹೀಗಾಗಿ ಮಕ್ಕಳು ತಾಯಿ ಹೆಸರಿನಲ್ಲಿ ಸಸಿನೆಟ್ಟು ಪರಿಸರವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಶಾಲೆಯ ಮುಖ್ಯಸ್ಥ ಸಾಗರ್ ಮಾತನಾಡಿ ಪರಿಸರದ ಪಂಚಭೂತಗಳು ಸಕಲ ಜೀವರಾಶಿಗಳಿಗೆ ಅವಿ ಭಾಜ್ಯ ಅಂಗವಿದ್ದಂತೆ. ಒಂದನ್ನೊಂದು ಬಿಟ್ಟಿರಲು ಎಂದಿಗೂ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಎಳೆವಯಸ್ಸಿ ನಿಂದಲೇ ಪರಿಸರಪ್ರೇಮ ಅಚ್ಚಳಿಯದೇ ಉಳಿಸಲು ಜೇಸಿಐ ಸಂಸ್ಥೆ ಶಾಲಾವರಣದಲ್ಲಿ ಸಸಿನೆಟ್ಟು ಪ್ರೇರೇಪಿ ಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಪರಿಸರ ಜಾಗೃತಿ ಮೂಡಿಸಬೇಕು. ಮನೆ ಅಕ್ಕಪಕ್ಕಗಳಲ್ಲಿ ಪರಿಸರಕ್ಕೆ ಪೂ ರಕವಾಗಿರುವ ಹೊಂಗೆ, ಆಲದ ಸಸಿಗಳನ್ನು ನೆಡುವುದರಿಂದ ಉತ್ತಮ ಆಮ್ಲಜನಕ ಉತ್ಪತ್ತಿಗೊಂಡು ಸರ್ವರಿಗೂ ಆರೋಗ್ಯಯುತ ಬದುಕು ರೂಪುಗೊಳ್ಳುತ್ತದೆ. ಹೀಗಾಗಿ ಪಾಲಕರು ಈ ಬಗ್ಗೆ ಅರಿವು ಹೊಂದುವುದು ಅತ್ಯವಶ್ಯಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೇಸಿಐ ಸ್ಥಾಪಕ ಅಧ್ಯಕ್ಷ ಅನಿಲ್‌ಆನಂದ್, ವಲಯಾಧ್ಯಕ್ಷ ವಿಜಯ್‌ಕುಮಾರ್, ಸದಸ್ಯರಾದ ಚೇತನ್, ಗುರುಮೂರ್ತಿ, ರಾಮಚಂದ್ರ, ರಘುನಂದನ್, ಗಿರೀಶ್ ಶಾಲೆಯ ಮುಖ್ಯಶಿಕ್ಷಕಿ ನವ್ಯ ಹಾಗೂ ಶಾಲಾಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *