ಚಿಕ್ಕಮಗಳೂರು– ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಶನ್ ಇದರ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಉಪ್ಪಳ್ಳಿ ಜಮಾಲಿಯ್ಯ ಮದ್ರಸಾ ಹಾಲ್ ನಲ್ಲಿ ನಡೆಯಿತು. ಅಧ್ಯಕ್ಷರಾದ ಫಾಝಿಲ್ ಸಅದಿ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶಾಧುಲಿ ಜುಮಾ ಮಸ್ಜಿದ್ ಮುದರ್ರಿಸರಾದ ಮಾಚಾರು ಇಸ್ಮಾಯಿಲ್ ಸಅದಿಯವರು ಉದ್ಘಾಟಿಸಿ ಶುಭ ಹಾರೈಸಿದರು.
ರಾಜ್ಯ ಮಾಜಿ ಸದಸ್ಯ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಯವರು ಸಂಘಟನಾ ಕಾರ್ಯಾಚರಣೆ ಬಗ್ಗೆ ಮಾತನಾಡಿದರು.
ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ – ವ್ಯಯ ಲೆಕ್ಕ ಮಂಡಿಸಿದ ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ನಾಸಿರ್ ಮುಈನಿ ಉಪ್ಪಳ್ಳಿ , ಪ್ರಧಾನ ಕಾರ್ಯದರ್ಶಿಯಾಗಿ ಅಶ್ಫಾಕ್ ಶಾಮಿಲ್ ಸಖಾಫಿ ಉಪ್ಪಳ್ಳಿ, ಕೋಶಾಧಿಕಾರಿ ಜುನೈದ್ ಅಲ್ ಬದ್ರಿಯಾ. ಉಪಾಧ್ಯಕ್ಷರಾಗಿ ಶಮೀಮ್ ಕರಾವಳಿ, ಕಾರ್ಯದರ್ಶಿಯಾಗಿ ನಿಸಾರ್ ವಿಜಯಪುರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಿಹಾಬ್ ಟೌನ್ ಯೂನಿಟ್ , ಕಾರ್ಯದರ್ಶಿಯಾಗಿ ಯಾಸಿರ್ ಶಾಂತಿನಗರ, ದಅವಾ ಕಾರ್ಯದರ್ಶಿಯಾಗಿ ರಶೀದ್ ಉಪ್ಪಳ್ಳಿ, ರೈಂಬೋ ಕಾರ್ಯದರ್ಶಿಯಾಗಿ ಇಮ್ರಾನ್ ಸಖರಾಯಪಟ್ಟಣ, ಮೀಡಿಯಾ ಕಾರ್ಯದರ್ಶಿಯಾಗಿ ಅಶ್ರಫ್ ಅಲ್ ಬದ್ರಿಯಾ, ಕಾರ್ಯಕಾರಿ ಸದಸ್ಯರಾಗಿ ಶಾಹುಲ್ ಅಲ್ ಬದ್ರಿಯಾ, ಮುಸ್ತಫ ಶಾಂತಿನಗರ, ಸಿನಾನ್ ಉಪ್ಪಳ್ಳಿ, ಶುಹೈಬ್ ಟೌನ್ ಯೂನಿಟ್, ಶಿಫಾನ್ ಶಾಂತಿನಗರ, ಮುನೀರ್ ಉಪ್ಪಳ್ಳಿ, ಆಶಿಖ್ ಶಾಂತಿನಗರ, ಶಾಕಿರ್ ಸಖರಾಯಪಟ್ಟಣ, ಸಮೀರ್ ಉಪ್ಪಳ್ಳಿ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಂಸುದ್ದೀನ್ ಬದ್ರಿಯಾ, ರಾಜ್ಯ ಸದಸ್ಯರಾದ ನಿಝಾಂ ಬದ್ರಿಯಾ, ಎಸ್‌ವೈಎಸ್ ಜಿಲ್ಲಾ ನಾಯಕರಾದ ಉಸ್ಮಾನ್ ಹಂಡುಗುಳಿ ಜಿಲ್ಲಾ ನಾಯಕರಾದ ನೌಶಾದ್ ಬದ್ರಿಯಾ, ಮುಂತಾದವರು ಉಪಸ್ಥಿತರಿದ್ದರು.