ಚಿಕ್ಕಮಗಳೂರು: ಫೆಬ್ರವರಿ 26 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಕ್ಕಮಗಳೂರು ನಗರ ಸಭೆ ವ್ಯಾಪ್ತಿಯಲ್ಲಿ ಇರುವ ಕೋಳಿ, ಕುರಿ, ಮೀನು, ಮಾಂಸ ಮಾರಾಟಗಾರರು ಹಾಗೂ ಮಾಂಸಹಾರಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿದೆ. ಹಾಗೂ ಕೋಳಿ, ಕುರಿ, ಮೀನು, ಮಾಂಸ ಮಾರಾಟಗಾರರು ಮತ್ತು ಮಾಂಸಹಾರಿ ಹೋಟೆಲ್‌ಗಳನ್ನು ತೆರೆಯಬಾರದೆಂದು, ತಪ್ಪಿದಲ್ಲಿ ಅಂತಹ ಮಾಂಸ ಮಾರಾಟ ಮಾಡುವವರ ಮತ್ತು ಮಾಂಸಹಾರಿ ಹೋಟೆಲ್‌ಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.