ಚಿಕ್ಕಮಗಳೂರು-ಜಾನಪದ-ಉಳಿವಿಗೆ-ಜಾನಪದಾಸಕ್ತರು-ಸ್ವಯಂ- ಶ್ರಮಿಸಿ-ರತ್ನಾಕರ

ಚಿಕ್ಕಮಗಳೂರು:– ಪೂರ್ವಜರ ಕಾಲದಿಂದ ಜನಿಸಿದ ಜಾನಪದ ಸಂಸ್ಕೃತಿ, ಆಧುನಿಕತೆ ಕಾಲ ಘಟ್ಟದಲ್ಲಿ ನಶಿಸುತ್ತಿರುವ ಹಿನ್ನೆಲೆಯಲ್ಲಿ, ಜಾನಪದಾಸಕ್ತರು ಸ್ವಯಂ ಪ್ರೇರಿತರಾಗಿ ಮುಂದಾಗಿ ಸಂಸ್ಕೃತಿ ಉಳಿ ವಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಓಣಿತೋಟ ರತ್ನಾಕರ ಹೇಳಿದರು.


ತಾಲ್ಲೂಕಿನ ಮುಗುಳವಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ವತಿಯಿ ಂದ ಏರ್ಪಡಿಸಿದ್ಧ ಶಾಲಾಮಕ್ಕಳಿಗೆ ಜಾನಪದ ಕಲೆಗಳ ಉಚಿತ ಶಿಬಿರ ಸಮಾರೋಪ ಸಮಾರಂಭ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಬೀಳ್ಕೊಡಿಗೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.


ಜಾನಪದಗಳಲ್ಲಿ ರಂಗಗೀತೆ, ಲಾವಣಿ, ಗೀಗೀಪದ, ಸಣ್ಣಾಟ, ಡೊಳ್ಳುಕುಣಿತ ಹಲವಾರು ಪ್ರಕಾರಗಳ ನ್ನು ಹಿಂದಿನ ಕಾಲದಲ್ಲೇ ಹಿರಿಯರು ಅಕ್ಷರಾಭ್ಯಾಸವಿಲ್ಲದೇ ಸೃಷ್ಟಿಸಿ, ಸಮಾಜದ ಆಗು-ಹೋಗುಗಳನ್ನು ಜಾ ನಪದ ಸೊಗಡಿನ ಮೂಲಕವೇ ಜನಸಾಮಾನ್ಯರಿಗೆ ತಿಳಿಸುವ ಕಾಯಕ ಮಾಡುತ್ತಿದ್ದರು ಎಂದರು.


ಇAದಿನ ತಾಂತ್ರಿಕತೆ ಯುಗದಲ್ಲಿ ಪಾಲಕರು, ಮಕ್ಕಳಿಗೆ ಹೊಸ ಚಟುವಟಿಕೆಗಳು ಕಲಿಸುವ ಪರಿಣಾಮ ಪುರಾತನ ಜಾನಪದ ಪ್ರಕಾರಗಳು ಮರೆಮಾಚುತ್ತಿವೆ. ಇಂದಿನ ಹೊಸ ಕಲಿಕೆಗಳು ಮಕ್ಕಳಿಗೆ ಮಾನಸಿಕ ಹಾ ಗೂ ಆತ್ಮಸ್ಥೆöÊರ್ಯ ಕುಂದಿಸುವ ಕೆಲಸ ಮಾಡುತ್ತವೆ. ಆದರೆ ಜಾನಪದ ಮನಸ್ಸಿನ ಶಕ್ತಿಯನ್ನು ಹಸನು ಮಾ ಡುತ್ತವೆ ಎಂದರು.


ಜಿಲ್ಲಾ ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಕ್ಷಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಇತ್ತೀಚಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಕ್ಕಳು ವಚನ, ಕೀರ್ತನೆ ಹಾಗೂ ಜಾನಪದಗಳ ಕಲಿಕೆಯಿಂದ ಹಿಂದು ಳಿಯುತ್ತಿರುವ ಪರಿಣಾಮ ಸಂಸ್ಕೃತಿ ನಶಿಸುವ ಹಾದಿಯಲ್ಲಿದೆ. ಹೀಗಾಗಿ ಶಾಲಾ ಶಿಕ್ಷಕರು ಪಠ್ಯದ ಜೊತೆಗೆ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಜಾನಪದ ಗೀತೆಗಳನ್ನು ಪರಿಚಯಿಸಬೇಕು ಎಂದು ಸಲಹೆ ಮಾಡಿದರು.


ಜಿಲ್ಲಾ ಜಾನಪದ ಯುವಬ್ರಿಗೇಡ್ ಡಾ.ವಿಜಯ್‌ಕುಮಾರ್ ಮಾತನಾಡಿ ಇದೀಗ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಜಾನಪದ ಕಲೆಗಳ ಶಿಬಿರ ಹಮ್ಮಿಕೊಂಡಿದ್ದೇವೆ. ಮುಂದಿನ ಪಿಯುಸಿ ಪರೀಕ್ಷಾ ನಂತರ ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು ವಿದ್ಯಾರ್ಥಿದೆಸೆಯಿಂದಲೇ ಜಾನಪದವನ್ನು ಆಳವಾಗಿ ಮ ಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಲಿದ್ದೇವೆ ಎಂದರು.


ಕಾರ್ಯಕ್ರಮದಲ್ಲಿ ಕಜಾಪ ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ, ಮಹಿಳಾ ಘಟಕದ ಅಧ್ಯಕ್ಷರಾದ ಚೈತ್ರ ಎಸ್.ಗೌಡ, ಎಸ್.ಕೆ. ವಿಜಯಲಕ್ಷ್ಮಿ, ಯುವಬ್ರಿಗಡ್ ಸದಸ್ಯರಾದ ಜೋಯಲ್ ಮಿಕಾ, ಮನು, ಸಚಿನ್, ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರು, ಶಾಲೆಯ ಶಿಕ್ಷಕರು ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?