ಚಿಕ್ಕಮಗಳೂರು, ಮೇ.05:- ತಾಲೂಕಿನ ಕಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗಸೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಶೇ.100 ಫಲಿತಾಂಶ ಪಡೆದು ಕೊಂಡು ಸತತ ಹನ್ನೇರು ವರ್ಷಗಳಿಂದ ಮುನ್ನೆಡೆ ಸಾಧಿಸುತ್ತಿದೆ.
ಈಗಾಗಲೇ ಬೊಗಸೆ ಶಾಲೆಯಲ್ಲಿ ಉತ್ತಮ ಫಲಿತಾಂಶಕ್ಕೆ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಿದೆ, ರಾಷ್ಟ್ರೀಯ ಹಬ್ಬಗಳು ಮತ್ತೆ ವಿಷಯಗಳಿಗೆ ಮತ್ತು ಸೈನ್ಸ್ಗೆ ಸಂಬAಧಪಟ್ಟ ಪ್ರತಿಯೊಂದು ಕಾರ್ಯಕ್ರಮಗಳನ್ನು ಆಯೋ ಜಿಸಿ ಮಕ್ಕಳಿಗೆ ಬೌದ್ಧಿಕ ಮತ್ತು ಮಾನಸಿಕವಾಗಿ ಸದೃಢವನ್ನಾಗಿ ಮಾಡಲು ಅಲ್ಲಿಯ ಶಿಕ್ಷಕರು ಸಿಬ್ಬಂದಿ ವರ್ಗದವರು, ಎಸ್‌ಡಿಎಂಸಿ ಸದಸ್ಯರು ಶ್ರಮಿಸಿದ್ದಾರೆ ಎಂದರು.

ಗ್ರಾಮದ ಪ್ರಮುಖರು ದಾನಿಗಳು ಶೈಕ್ಷಣಿಕವಾಗಿ ಹೆಚ್ಚು ಉತ್ತೇಜನವನ್ನು ನೀಡಿದ ಕಾರಣ ಶಾಲೆಯು ಈ ಮಟ್ಟಕ್ಕೆ ಕೀರ್ತಿಯನ್ನು ಪಡೆದುಕೊಂಡಿದೆ. ಈ ವಿಚಾರವಾಗಿ ಪ್ರತ್ಯಕ್ಷವಾಗಿ ದುಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ನಿಮ್ಮ ಮುಂದಿನ ಜೀವನ ಉತ್ತಮವಾಗಿರಲಿ ವಿದ್ಯಾಭಾಸವನ್ನು ಮುಂದುವರಿಸಿ ನಿಮಗೆ ಸಹಕಾರ ಬೇಕಾದಲ್ಲಿ ಗ್ರಾಮ ಪಂಚಾಯಿತಿ ಸಹಕಾರ ನೀಡಲಿದೆ.
- ಸುರೇಶ್ ಎನ್.