ಚಿಕ್ಕಮಗಳೂರು:– ತಾಲ್ಲೂಕಿನ ಬೆಳವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಎರ ಡೂ ಪಕ್ಷಗಳ ಕಸರತ್ತಿನ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಿರಾಜ್ ಉನ್ನಿಸಾ ಅವರಿಗೆ ಗುರುವಾರ ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಅಧಿಕಾರದ ಚುಕ್ಕಾಣಿ ಒಲಿದುಬಂತು.
ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷಗಿರಿಗೆ ಬಿಜೆಪಿ ಅಭ್ಯರ್ಥಿ ಚಂದ್ರಮ್ಮ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿರಾಜ್ ಉನ್ನಿಸಾ ಈರ್ವರ ನಾಮಪತ್ರ ಸಲ್ಲಿಕೆಯಾಗಿತ್ತು. ಒಟ್ಟು ಪಂಚಾಯ್ತಿಯಲ್ಲಿ 13 ಸದಸ್ಯರ ಬಲವಿದ್ದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 7 ಮತ ಚಲಾವಣೆಗೊಂಡ ಹಿನ್ನೆಲೆ ಚುನಾವಣಾಧಿಕಾರಿ ಸಿ.ಸುಜಾತ ಅಧಿಕೃತ ವಾಗಿ ಸಿರಾಜ್‌ಉನ್ನಿಸಾ ಅವರನ್ನು ಘೋಷಿಸಿದ
ಬೆಳಿಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರು ಕಳೆದ ಬಾರಿಯಂತೆ ಈ ಬಾರಿಯು ಅಧಿಕಾರ ಪಡೆಯುವ ವಿಶ್ವಾಸದಿಂದ ಸಕಲ ತಯಾರಿ ನಡೆಸಿದ್ದವು. ಎಂದಿನಂತೆ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಗ್ರಾ.ಪಂ. ಅಧಿಕಾರದ ಚಿತ್ರಣವೇ ಬದಲಾಗಿ, ಕೊನೆಗೆ ಕಾಂಗ್ರೆಸ್‌ಗೆ ಅದೃಷ್ಟ ದಂತೆ ಸ್ಥಾನ ಒಲಿದು ಗೆಲುವಿನ ನಗೆ ಬೀರಿತು.
ಪ್ರಸ್ತುತ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 6, ಕಾಂಗ್ರೆಸ್ 6 ಮತ್ತು ಪಕ್ಷೇತರ 1 ಸದಸ್ಯರಿದ್ದಾರೆ. ಅಂತಿ ಮವಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 7ಸದಸ್ಯರು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರದ ಚುಕ್ಕಾ ಣಿ ಪಡೆದುಕೊಂಡಿತು. ಈ ನಡುವೆ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ನಿರಾಸೆ ಉಂಟಾಯಿತು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷೆ ಶ್ರೀಮತಿ ಸಿರಾಜ್ ಉನ್ನಿಸಾ ಪಕ್ಷದ ಆದೇಶದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದು, ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಅಭಿವೃದ್ದಿ ಕಾರ್ಯ ಹಾಗೂ ಬಡವರ ಶ್ರೇಯೋಭಿವೃಧ್ದಿಗೆ ಗ್ಯಾರಂಟಿ ಯೋಜನೆ ಅನುಷ್ಟಾನದಿಂದ ಇಂದು ಅಲ್ಪಸಂಖ್ಯಾತರಿಗೆ ಅಧಿಕಾರ ದೊರೆಯಲು ಸಾಧ್ಯವಾಗಿದೆ ಎಂದರು.
ಲಕ್ಯಾ ಬ್ಲಾಕ್ ಅಧ್ಯಕ್ಷ ಬಿ.ಶಂಕರನಾಯ್ಕ್ ಮಾತನಾಡಿ ಕ್ಷೇತ್ರದ ಶಾಸಕರು ಬಯಲುಭಾಗಕ್ಕೆ ನೀಡಿರುವ ಕೊಡುಗೆ ಹಾಗೂ ರಾಜ್ಯಸರ್ಕಾರದ ಯೋಜನೆಗಳು ಸಮರ್ಪಕವಾಗಿ ಪೂರೈಸುತ್ತಿರುವ ಕಾರಣ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಇಂದು ಕಾಂಗ್ರೆಸ್ ಅಧಿಕಾರ ಪಡೆದು ವಿಜಯ ಸಾಧಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಕಾವೇರಮ್ಮ, ಉಪಾಧ್ಯಕ್ಷೆ ಕೆ.ಎನ್.ಭಾಗ್ಯ, ಸದಸ್ಯ ರುಗಳಾದ ರಂಗಸ್ವಾಮಿ, ಜಿ.ಸಿ.ಪರಮೇಶ್ವರಪ್ಪ, ಹೆಚ್.ಎಸ್.ಕಲ್ಪನ, ಜಯಲಕ್ಷ್ಮಿ,ಪಿಡಿಓ ವಿಶ್ವನಾಥಯ್ಯ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಂಗೇಗೌಡ, ಮುಖಂಡರುಗಳಾದ ಹೊನ್ನಬೋವಿ, ಕೃಷ್ಣಮೂರ್ತಿ, ಚಂದ್ರಶೇ ಖರ್, ಹರೀಶ್, ಅಂಗಡಿ ಕೃಷ್ಣ ಮೂರ್ತಿ, ನಾಗರಾಜ್, ಬೋಮಣ್ಣ, ಆನಂದ್, ಚಿನ್ನಬೋವಿ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.