ಚಿಕ್ಕಮಗಳೂರು-ಸರ್ಕಾರಿ-ಶಾಲಾ-ವಿದ್ಯಾರ್ಥಿಗಳು-ಗಟ್ಟಿಕಾಳಿನಂತೆ-ಶಾಸಕ ಹೆಚ್.ಡಿ.ತಮ್ಮಯ್ಯ


ಚಿಕ್ಕಮಗಳೂರು, – ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಟ್ಟಿಕಾಳಿನಂತೆ. ಭಿತ್ತಿದ ಕಡೆಗಳಲ್ಲಿ ವಿಶಾಲವಾಗಿ ಹರಡಿಕೊಂಡು ಸಾಧನೆಯ ಮೆಟ್ಟಿಲೇರುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.


ತಾಲ್ಲೂಕಿನ ಕಬ್ಬಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.


ರಾಜ್ಯ ಹಾಗೂ ದೇಶದಲ್ಲಿ ಕೀರ್ತಿ ಪತಾಕೆ ಹಾರಿಸಿರುವ ಅನೇಕ ಸಾಧಕರು ತಮ್ಮ ಬಾಲ್ಯವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿತಂಥ ಶಿಕ್ಷಣವೇ ಪ್ರೇರಣೆಯಾಗಿದೆ. ಸ್ನೇಹ, ಪ್ರೀತಿ, ಸಹನೆ ಹಾಗೂ ಬಾಂಧವ್ಯವನ್ನು ಪರ ಸ್ಪರ ಬೆಸೆಯುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಕಾರ್ಯೋನ್ಮುಖವಾಗಿವೆ ಎಂದರು.


ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ಪೂರೈಸುವ ನಿಟ್ಟಿನಲ್ಲಿ ಪರಿಣಿತ ಶಿಕ್ಷಕರನ್ನು ನೇಮಕಾತಿಗೊಳಿಸಿ ಸರ್ಕಾ ರ ಪ್ರೋತ್ಸಾಹಿಸುತ್ತಿದೆ. ಪಠ್ಯದ ಜೊತೆಗೆ ಕ್ರೀಡಾಸಕ್ತಿ, ಪ್ರತಿಭೆ ಅನಾವರಣಕ್ಕೆ ಮಕ್ಕಳಲ್ಲಿ ಹುರುಪು ತುಂಬಲು ಶಿಕ್ಷಕರು ನಿರಂತರ ಪ್ರಯತ್ನಿಸುತ್ತಿರುವ ಕಾರಣ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದಲ್ಲಿ ಶಾಲೆಗಳು ಉನ್ನ ತ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಿವೆ ಎಂದರು.


ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಬಡತನದ ಸೊಗಿನಲ್ಲಿ ಬೆಳೆದಂಥ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಉತ್ತಮ ಶಿಕ್ಷಕರ ಬೋಧನೆ ಹಾ ಗೂ ಸ್ವಚ್ಛಂಧ ವಾತಾವರಣದಲ್ಲಿ ಶಾಲೆಗಳು ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸವು ಗಟ್ಟಿತನದಿಂದ ಕೂಡಿರುತ್ತದೆ ಎಂದರು.


ಹಿAದೆ ಶಾಲೆಗಳಿಗೆ ತೆರಳಲು ಬಹಳಷ್ಟು ಕಷ್ಟಪಡಬೇಕಿತ್ತು. ಸೈಕಲ್ ಅಥವಾ ನಡೆದುಕೊಂಡೇ ಶಾಲೆಗ ಳಿಗೆ ತೆರಳಿ ಶಿಕ್ಷಣ ಕಲಿಯುವ ಸನ್ನಿವೇಶವಿತ್ತು. ಆದರೀಗ ಸರ್ಕಾರ ಶಾಲಾ ಮಕ್ಕಳಿಗೆ ಸಂಪೂರ್ಣ ವಿದ್ಯಾ ರ್ಜನೆಗೆ ಒತ್ತು ಕೊಟ್ಟು, ಮೂಲ ಸವಲತ್ತನ್ನು ಪೂರೈಸಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿವೆ ಎಂದರು.


ದಾನಿ, ಕಾಫಿ ಬೆಳೆಗಾರ ಶರತ್‌ಗೌಡ ಮಾತನಾಡಿ ಪ್ರಸ್ತುತ ಆಧುನಿಕತೆ ಯುಗದಲ್ಲಿ ಸರ್ಕಾರಿ ಶಾಲಾ ಮಕ್ಕಳು ಡಿಜಿಲೀಕರಣದ ವ್ಯವಸ್ಥೆಯಿಂದ ದೂರ ಸರಿಯಬಾರದೆಂಬ ದೃಷ್ಟಿಯಿಂದ ಕಂಪ್ಯೂಟರ್ ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ಒದಗಿಸಿದೆ. ವಿದ್ಯಾರ್ಥೀಗಳು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಶಾಲೆಗೆ ಹಾಗೂ ಪಾಲಕರು ಹೆಸರು ಉಳಿಸಬೇಕಿದೆ ಎಂದರು.


ಶಿಕ್ಷಕ ಧರಗುಣಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಕಬ್ಬಿನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ದಿಗಾಗಿ ಅನೇಕ ದಾನಿಗಳು, ಹಳೇ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಕಾಫಿ ಬೆಳೆಗಾರರು ದಾನದ ರೂ ಪದಲ್ಲಿ ಪೀಠೋಪಕರಣ ಸೇರಿದಂತೆ ಇನ್ನಿತರೆ ಸಹಾಯಹಸ್ತ ಚಾಚಿ ಮಕ್ಕಳ ಬೆಳವಣಿಗೆಗೆ ಸಹಕರಿಸುತ್ತಿರು ವುದು ಹೆಮ್ಮೆ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಮೋಹನ್‌ಗೌಡ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಯ ವಸಂತ್‌ಕುಮಾರ್, ಹಿರೇಕೊಳಲೆ ಪಿಡಿಓ ವಿಜಯ, ಕಾಫಿ ಬೆಳೆಗಾರರಾದ ಮಲ್ಲೇಶ ಗೌಡ, ಕೆ.ಸಿ.ಧರ್ಮೇಶ್, ಬಿ.ಸಿ.ಹರೀಶ್, ಸಿ.ಜಿ.ಸುರೇಶ್, ಕೆ.ಕೆ.ಮನುಕುಮಾರ್, ಹಿರಿಯ ವಿದ್ಯಾರ್ಥಿ ಸಿ.ಡಿ. ಪುಟ್ಟಸ್ವಾಮಿ, ಸ್ತಿçÃಶಕ್ತಿ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮನುಕುಮಾರ್, ವಕೀಲ ಅನಿಲ್‌ಕುಮಾರ್, ಹಳೇ ವಿದ್ಯಾರ್ಥಿಗಳಾದ ಉಮೇಶ್‌ಕುಮಾರ್, ಡಿ.ಸುಧಾ, ಸಿಂಚನ, ಅರುಣ್‌ಕುಮಾರ್, ಉಮೇಶ್, ಚೇತನ್, ರವಿ, ಶ್ರೀಕಾಂತ್ ಮತ್ತಿತರರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?