ಚಿಕ್ಕಮಗಳೂರು:- ನಗರದ ಹೆರಿಗೆ ಆಸ್ಪತ್ರೆ ಸಮೀಪದ ಬಿ.ಆರ್.ಅಂಬೇಡ್ಕರ್ ಆಟೋ ನಿ ಲ್ದಾಣದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಹಾಗೂ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ವಿತರಿಸುವ ಮೂಲಕ ಆಟೋ ಚಾಲಕರು ಸಂಭ್ರಮದಿAದ ಆಚರಿಸಿದರು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಆರ್.ರಾಮು ಆಟೋ ಚಾಲಕರಲ್ಲಿ ಒಗ್ಗಟ್ಟಿನಿಂದ ಕೈಗೊಂಡ ಕಾರ್ಯ ಯಶಸ್ವಿಯಾಗಲು ಅಂಬೇಡ್ಕರ್ ಜಯಂತಿ ಸ್ಪಷ್ಟ ಉದಾಹರಣೆಯಾಗಿದೆ. ಹೀಗಾಗಿ ನಿಲ್ದಾಣದಲ್ಲಿ ರುವ ಚಾಲಕರು ದೇಶಕ್ಕಾಗಿ ತ್ಯಾಗದ ಮಹಾತ್ಮರನ್ನು ಸ್ಮರಿಸುವಂಥ ಕಾರ್ಯವಾಗಬೇಕು ಎಂದು ತಿಳಿಸಿದರು.

ಆಟೋ ಚಾಲಕರು ಅನಾರೋಗ್ಯದಿಂದ ಬಳಲಿದರೆ ಸಂಘದಿಂದ ಸಹಾಯಹಸ್ತ ಚಾಚಲು ಸಾಧ್ಯವಾ ಗುತ್ತಿಲ್ಲ. ಹೀಗಾಗಿ ಪ್ರತಿ ಮಾಹೆಯಾನ ಒಂದಿಷ್ಟು ಹಣವನ್ನು ಚಾಲಕರು ಸಂಗ್ರಹಿಸಿದರೆ, ನಮ್ಮ ನಿಲ್ದಾಣದ ಚಾಲಕರಿಗೆ ಅಳಿಲು ಸೇವೆಯಂತೆ ಧನಸಹಾಯ ಒದಗಿಸಲು ಸಾಧ್ಯ. ಹಾಗಾಗಿ ಚಾಲಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹೊನ್ನಪ್ಪ, ಸದಸ್ಯರಾದ ರವಿನಾಯ್ಕ್, ನಿಂಗರಾಜ್, ಜೇಮ್ಸ್, ವಸಂತಕುಮಾರ್, ಪುಟ್ಟಸ್ವಾಮಿ, ಮಂಜುನಾಥ್, ರವಿ, ಮುನಾವರ್, ಸತೀಶ್, ಸದಾಶಿವ, ಸಂಪ ತ್, ಅಸೀಫ್ ಸೇರಿದಂತೆ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.