ಚಿಕ್ಕಮಗಳೂರು:- ಪ್ರಾಕೃತಿಕ ಹಾನಿ, ಧೂಮಕೇತು ಅಪ್ಪಳಿಸುವ ಅಥವಾ ಜ್ವಾಲಮುಖಿಗಳಿಂದ ವಿಶಾಲ ಭೂಮಿಗೆ ಹಾನಿ ಸಂಭವಿಸುತ್ತಿಲ್ಲ. ಮಾನವನ ದುರಾಸೆ ಹಾಗೂ ಯಂತ್ರೀಕರಣ ಜೀವನ ಶೈಲಿಯಿಂದ ಪ್ರಕೃತಿ ಮಲೀನಗೊಂಡು ಹಂತ ಹಂತವಾಗಿ ಕುಗ್ಗುತ್ತಿದೆ ಎಂದು ಪರಿಸರವಾದಿ ಡಾ|| ಸಂಜೀವ್ ಕುಲಕರ್ಣಿ ಹೇಳಿದರು.
ತಾಲ್ಲೂಕಿನ ತೊಂಗರಿಹಂಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ರೋಟರಿ ಜಿಲ್ಲೆ-3182 ಹಾಗೂ ರೋಟರಿ ಕಾಫಿಲ್ಯಾಂಡ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ಧ ಭೂಮಿಯನ್ನು ಸಂರಕ್ಷಿಸುವ ಕುರಿತು ಜಿಲ್ಲಾ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,
ವಿಶಾಲ ಬ್ರಹ್ಮಾಂಡದ ಭೂಗರ್ಭದಲ್ಲಿ ಮಾತ್ರ ಜೀವಸಂಕುಲ ಸೃಷ್ಟಿ ಮತ್ತು ವಿಕಸನ ಹೊಂದಿವೆ. ಕಾಲ ಕ್ರಮೇಣ ಮನುಷ್ಯಪ್ರಬೇಧಗಳು ಶುರುವಾದರೂ ಪ್ರಾಕೃತಿಕ ಸಂಪತ್ತು ಏರುಪೇರಾಗಿಲ್ಲ. ಆದರೆ ಕಳೆದ ಮೂನ್ನೂರು ವರ್ಷಗಳಿಂದ ಮಾನವ ಆಧುನಿಕತೆಗೆ ಶರಣಾಗಿ ಅರಣ್ಯ ಸಂಪತ್ತನ್ನು ಸರ್ವ ನಾಶಗೊಳಿಸಿ ವಿಶ್ವನ್ನು ಅಳಿನಂಚಿನತ್ತ ಕೊಂಡೊಯ್ಯುತ್ತಿದ್ದಾನೆ ಎಂದು ಹೇಳಿದರು.

ಮೊಟ್ಟಮೊದಲು ಪ್ರಪಂಚದಲ್ಲಿ ಮಾನವ ಎರಡು ಕಾಲಿನಿಂದ ನಿಯಂತ್ರಣ ಕಂಡುಕೊಂಡನು, ಪ್ರಾಣಿ ಪ್ರಬೇಧಗಳು ಕಾಣಿಸಿದವು. ಒತ್ತಡವಿರದ ಪರಿಸರಸ್ನೇಹಿ ವಾತಾವರಣವು ನಿರ್ಮಾಣವಾಯಿತು. ಕಾಲ ಉರುಳಿದಂತೆ ಮಾನವ ಯಾಂತ್ರೀಕರಣ ಸೃಷ್ಟಿಸಿ, ಕೆಲವೇ ಸಮಯದಲ್ಲಿ ತಂತ್ರಜ್ಞಾನ ಇಡೀ ಪ್ರಪಂಚವನ್ನು ಅತಿ ವೇಗವಾಗಿ ಆವರಿಸಿಕೊಂಡು ಭೂಗರ್ಭವನ್ನು ಸುಡುವಂತಾಯಿತು ಎಂದರು.
ವಿಪರೀತ ಪ್ಲಾಸ್ಟಿಕ್ ಬಳಕೆ, ವೈಯಕ್ತಿಕ ಲಾಭದ ಉದ್ದೇಶದಿಂದ ಅರಣ್ಯ ಸಂಪತ್ತು ನಾಶಮಾಡಿ ವಾಣಿ ಜ್ಯೀಕರಣಗೊಳಿಸಿ ಮನುಷ್ಯ ಭೂಸಿರಿಯನ್ನು ಅಲ್ಲಗೆಳೆದನು. ಯಾವುದೇ ತಂತ್ರಜ್ಞಾನ ಅಥವಾ ರಾಜಕೀ ಯ ದಿಂದ ಪರಿಸರವನ್ನು ಸರಿಪಡಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರೀಕರ ಕೈನಲ್ಲಿದೆ. ಹಚ್ಚಹಸಿನಿಂದ ಪರಿಸರ ಕಾಪಾಡುವುದು, ಜಲಮೂಲ ಉಳಿಸುವ ಕಾರ್ಯವಾಗಬೇಕಿದೆ ಎಂದರು.
ದೈನAದಿನ ಸೇವಿಸುವ ಆಹಾರ ಉತ್ಪನ್ನಗಳು ಎಲ್ಲಿಂದ ಬರಲಿವೆ ಎಂಬ ಆತ್ಮಾವಲೋಕನದ ಪ್ರಶ್ನೆ ಮಾ ಡಿಕೊಳ್ಳಬೇಕು. ಫಲವತ್ತತೆ ಮಣ್ಣನ್ನು ಕಲುಷಿತಗೊಳಿಸುವ ಹಕ್ಕು ಯಾರಿಗೂ ಇಲ್ಲ. ಪರಿಸರ ಕಾಳಜಿ ಪ್ರತಿ ಯೊಬ್ಬರ ಹಕ್ಕು ಎಂಬ ಧ್ಯೇಯ ಸೂತ್ರಗಳನ್ನು ನಾಗರೀಕರು ಬದುಕಿನಲ್ಲಿ ಅಳವಡಿಸಿಕೊಂಡಾಗ ವಿಶಾಲ ಭೂಮಂಡಲ ಸುರಕ್ಷಿತವಾಗಿ ರಕ್ಷಿಸಬಹುದು ಎಂದು ಸಲಹೆ ಮಾಡಿದರು.

ಭೂರಕ್ಷಿಸುವ ಸಂಬಂಧ ರೋಟರಿ ಕಾಫಿಲ್ಯಾಂಡ್ ವಿಶೇಷ ಉಪನ್ಯಾಸ ಹಮ್ಮಿಕೊಂಡು ಕಾರ್ಯೋನ್ಮು ಖವಾಗಿವೆ. ಮಲೆನಾಡು ಪ್ರದೇಶ ಜಿಲ್ಲೆ ವಿಶಿಷ್ಟ ತಾಣವಾಗಿದ್ದು, ನೈಸರ್ಗಿಕವಾಗಿ ಸಂಪತ್ಪರಿತ ಭೌಗೋಳಿಕವಾ ಗಿ ವಿಶಾಲ ವಿಸ್ತೀರ್ಣ ಹೊಂದಿರುತ್ತದೆ. ಪಂಚನದಿಗಳ ಉಗಮ ಸ್ಥಾನವಾಗಿದ್ದು ಇಡೀ ರಾಜ್ಯಕ್ಕೆ ಜೀವ ಜಲದ ನೆಲೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ ಭೂಸಿರಿ ಪ್ರಾಮುಖ್ಯತೆ, ಜವಾಬ್ದಾರಿ ಪ್ರತಿಯೊಬ್ಬ ಕರ್ತವ್ಯ ಪರಿಚಯಿಸುವ ಕಾರ್ಯಕ್ರಮ. ಹಸಿರು, ಮಣ್ಣು ಸಮಗ್ರವಾಗಿ ಬಳಸಿಕೊಳ್ಳಲು ರೋಟರಿ ಪ್ರೇರೇಪಿಸುತ್ತಿದೆ. ಸಂಪತ್ಪರಿತ ಭೂಮಿಯನ್ನು ಸಂರಕ್ಷಿಸುವ ಕುರಿತು ಎಲ್ಲರು ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
ಈಗಾಗಲೇ ರೋಟರಿ 400ಕ್ಕೂ ಹೆಚ್ಚು ಸದಸ್ಯರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಮುನ್ನೆಡೆ ಸಾಧಿಸುತ್ತಿರುವುದು ಸಂತೋಷ ವಿಷಯ. ಈ ಶ್ರಮದ ಹಿಂದೆ ಪ್ರತಿಯೊಬ್ಬರ ಬಹಳಷ್ಟು ಕೆಲಸವಿದ್ದು ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಿನ ಸದಸ್ಯರನ್ನು ನೋಂದಾಯಿಸಿ ಸಾಮಾಜಿಕ ಕಾರ್ಯಗಳತ್ತ ಹೆಜ್ಜೆಹಾಕಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮೀನುಗಾರಿಕೆ ಕಾಲೇಜು ಮಾಜಿ ಡೀನ್ ಡಾ|| ಶಿವಕುಮಾರ್ ಮಗಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು, ರೋಟರಿ ಜಿಲ್ಲಾ ಸಲಹೆಗಾರ ಅಭಿನಂದನ್ ಎ.ಶೆಟ್ಟಿ, ಕಲಿಕೆ ಸಹಾಯಕ ಬಿ.ರಾಜರಾಂ ಭಟ್, ಸಹಾಯಕ ಗವರ್ನರ್ ನಾಸೀರ್ ಹುಸೇನ್, ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಪಿ.ತನೋಜ್‌ಕುಮಾರ್, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಭೂಸಂರಕ್ಷ ಅಧ್ಯಕ್ಷ ಕೆ.ಬಿ.ಪ್ರಸನ್ನ, ಪದಾ ಧಿಕಾರಿಗಾಳದ ರಾಮದೇವ್ ಕಾಮತ್, ಎಂ.ಆನಂದ್ ಉಪಸ್ಥಿತರಿದ್ದರು.