ಚಿಕ್ಕಮಗಳೂರು, :- ತಾಲ್ಲೂಕಿನ ಇಂದಾವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂ ಘದ ಅಧ್ಯಕ್ಷರಾಗಿ ಐ.ಎಸ್.ಯತೀಶ್ ಮತ್ತು ಉಪಾಧ್ಯಕ್ಷರಾಗಿ ಐ.ಸಿ.ಗುರುಸಿದ್ದೇಗೌಡ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಗ್ರಾಮ ಸ್ಥರನ್ನು ಒಗ್ಗೂಡಿಸಿಕೊಂಡು ಎಲ್ಲರ ಕೆಲಸಗಳನ್ನು ಮಾಡುವುದು ಅಧ್ಯಕ್ಷರ ದೊಡ್ಡ ಜವಾಬ್ದಾರಿ. ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.
ಗ್ರಾಮದ ಅಭಿವೃಧ್ದಿಗಾಗಿ ಹಿರಿಯರು ಸಂಘವನ್ನು ಸ್ಥಾಪಿಸಿದ್ದು ಜೊತೆಗೆ ಸರ್ಕಾರವು ಪ್ರಾಮುಖ್ಯತೆ ನೀಡಿರುವ ಕಾರಣ ನೂತನ ಆಡಳಿತ ಮಂಡಳಿ ರಾಜಕೀಯ ಬೆರೆಸದೇ, ಪಕ್ಷಾತೀತವಾಗಿ ಸೊಸೈಟಿಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಲಹೆ ಮಾಡಿದರು.

ನಿರ್ದೇಶಕರು, ಗ್ರಾಮಸ್ಥರ ಸಹಕಾರದಿಂದ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಕೈಗೊಂಡು ಮುನ್ನೆಡೆ ಸಾಧಿಸಿ, ಇಡೀ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಬೇಕು. ಸೊಸೈಟಿಯ ಹಿಂದಿನ ಘಟನೆಗಳಿಗೆ ಮಣೆಹಾಕದೇ, ಮುಂದಿನ ಸಹಕಾರ ಸಂಘದ ಅಭಿವೃಧ್ದಿಗಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಸಹಕಾರ ಸಂಘದ ನೂತನ ಅಧ್ಯಕ್ಷ ಐ.ಸಿ.ಯತೀಶ್ ಮಾತನಾಡಿ ಇಂದಾವರ ಸೊಸೈಟಿ ಪುರಾತನ ಹಿನ್ನೆಲೆ ಹೊಂದಿರುವ ಸಂಘವಾಗಿದೆ. ಗ್ರಾಮಸ್ಥರ ಏಳಿಗೆಗೆ ಹಿರಿಯರು ಸಂಘವನ್ನು ಸ್ಥಾಪಿಸಿ ಅಭಿವೃದ್ದಿಗೆ ಮುಡಿಪಿಟ್ಟಿದ್ದು, ಆ ಹಾದಿಯಲ್ಲೇ ನೂತನ ಆಡಳಿತ ಮಂಡಳಿಯು ಕಾರ್ಯನಿರ್ವಹಿಸಿ ಎಲ್ಲಿಯೂ ಕಪ್ಪುಚುಕ್ಕೆ ಬರದಂತೆ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕಾದ ಐ.ಆರ್.ಗಜೇಂದ್ರ, ಐ.ಪಿ.ಪ್ರೇಮ್‌ಕುಮಾರ್, ಐ.ಎಂ. ಮಂಜುನಾಥ್, ಐ.ಜೆ.ಮಲ್ಲೇಗೌಡ, ಐ.ಆರ್.ಕೆಂಚಯ್ಯ, ಐ.ಆರ್.ಮಂಜುನಾಥ್, ಐ.ಎಂ.ಸೋಮಶೇಖರ್, ಸಿ.ಎಂ. ವನಜಾಕ್ಷಿ, ನೀಲಾ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್‌ಕುಮಾರ್, ಮುಖಂಡರುಗಳಾದ ಬೀಕನಹಳ್ಳಿ ಸೋಮ ಶೇಖರ್, ಮುಗುಳುವಳ್ಳಿ ನಿರಂಜನ್, ಹೆಚ್.ಕೆ.ಕೇಶವಮೂರ್ತಿ, ಗ್ರಾಮಸ್ಥರಾದ ಸುರೇಶ್, ಸುಭಾಶ್, ದಿನೆÃಶ್, ರಾ ಜು, ರವಿ, ಲವಕುಮಾರ್, ರಿರ್ಟನಿಂಗ್ ಅಧಿಕಾರಿ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.