ಚಿಕ್ಕಮಗಳೂರು-ನ್ಯಾಯಬೆಲೆ ಅಂಗಡಿಗಳಲ್ಲಿ ಸಮಯದ ಫಲಕ ಅಳವಡಿಸಿ- ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್

ಚಿಕ್ಕಮಗಳೂರು, ಮೇ.05:- ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಅನುಕೂಲವಾಗಲು ಅಕ್ಕಿ ವಿತರಣಾ ಸಮಯ ಹಾಗೂ ಅನ್ನಭಾಗ್ಯ ಯೋಜನೆಯ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಸೂಚಿಸಿದರು.

ನಗರದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ನ್ಯಾಯಬೆಲೆ ಅಂಗಡಿದಾರರು ಮತ್ತು ಸಹಕಾರ ಸಂಘದವರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.

ಅಕ್ಕಿ ವಿತರಣೆ ವೇಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿತರಣಾ ಸಂಸ್ಥೆಗಳು ಅಚ್ಚುಕಟ್ಟಾ ಗಿ ಕಾರ್ಯನಿರ್ವಹಿಸಬೇಕು. ಸಣ್ಣಪುಣ್ಣ ಲೋಪದೋಷಗಳು ಕಂಡುಬಂದಲ್ಲಿ ಆಹಾರ ಇಲಾಖೆ ಅಥವಾ ತಮ್ಮ ಗಮನಕ್ಕೆ ತಂದಲ್ಲಿ ಶೀಘ್ರವೇ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಹಸಿವು ಮುಕ್ತ ಕರ್ನಾಟಕ ದೃಷ್ಟಿಯಿಂದ ರಾಜ್ಯಸರ್ಕಾರ ಅಂತ್ಯೋದಯ, ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಅಕ್ಕಿ ವಿತರಿಸಿ ನೆರವಾಗುತ್ತಿದೆ. ಅನ್ನಭಾಗ್ಯ ಯೋಜನೆಗಳಿಗೆ ಅಡ್ಡಿಯಾಗದಂತೆ ಗಮನಹರಿಸುವುದು ಆಯಾ ನ್ಯಾಯಬೆಲೆ ಅಂಗಡಿದಾರರು ಮುಖ್ಯ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.

ಕಳೆದ ತಿಂಗಳು ನ್ಯಾಯಬೆಲೆ ಅಂಗಡಿಗೆ ಅಕ್ಕಿ ವಿತರಣೆ ವಿಳಂಬವೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಕಳೆದ ಮಾಹೆಯಲ್ಲಿ ತಾಲ್ಲೂಕಿನಲ್ಲಿ ತಾಂತ್ರಿಕ ದೋಷದಿಂದ ವಿಳಂಭವಾಗಿದೆ. ಇದೀಗ ಸ್ವಂತ ಗೋದಾಮುಗಳು ನಿರ್ಮಾಣಗೊಂಡಿರುವ ಹಿನ್ನೆಲೆ ಈ ತಿಂಗಳು ದಿನಾಂಕಕ್ಕಿಂತ ಮುಂಚಿತವಾಗಿ ನ್ಯಾಯಬೆಲೆ ಅಂಗಡಿಗೆ ಅಕ್ಕಿ ಸೇರಲಿದೆ ಎಂದರು.

ಕೆಲವು ಸಹಕಾರ ಸಂಘ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ, ಓಟಿಪಿ ಅಳವಡಿಸಿ ದರೆ ಬಹಳಷ್ಟು ಅನುಕೂಲವೆಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಈ ಹಿಂದೆ ಆಹಾರ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದ್ದು ಸರ್ಕಾರದ ಗಮನಕ್ಕೆ ತರುವ ಮೂಲಕ ಎಲ್ಲವು ಸುಲಭಗೊಳಿಸಿ ಪಡಿತರದಾರರ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಅವ್ಯವಹಾರ ಪ್ರಕರಣಗಳು ಕಂಡುಬಂದರೆ ಕಾರ್ಡ್ದಾರರು ನೇರವಾಗಿ ತಮ್ಮನ್ನು ಅಥವಾ ಆಹಾರ ಇಲಾಖೆಯ ತಿಳಿಸಿದ್ದಲ್ಲಿ ಶಿಸ್ತು ಕ್ರಮಕ್ಕೆ ಮುಂದಾಗುತ್ತೇವೆ. ರಾಜ್ಯಸರ್ಕಾರ ಯೋ ಜನೆಗಳು ಎಂದಿಗೂ ದುರುಪಯೋಗವಾಗದಂತೆ ಎಲ್ಲಾ ಅಂಗಡಿದಾರರು ನಿಗಾವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್‌ಆಲಿ, ಸದಸ್ಯರಾದ ಜಯಂತಿ ಶಿವಾಜಿ, ಗೌಸ್‌ಮೊಹಿಯುದ್ದೀನ್, ನಾಗೇಂದ್ರ ಅರಸ್, ಪುನೀತ್, ಆಹಾರ ಇಲಾಖೆಯ ಅಧಿಕಾರಿಗಳಾದ ಪ್ರಕಾಶ್, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?