ಚಿಕ್ಕಮಗಳೂರು- ಮಹಿಳಾ ದಿನಾಚರಣೆ ಪ್ರಯುಕ್ತ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ವೈಯಕ್ತಿಕ ಸೇವೆ ಪರಿಗಣಿಸಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದಿರುವ ಶಿಕ್ಷಕಿ ಗೀತಾ ಅವರಿಗೆ ಜೆಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಚಿಕ್ಕಮಗಳೂರು ತಾಲ್ಲೂಕಿನ ಯಲಗುಡಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಶಿಕ್ಷಕಿ ಗೀತಾ ಅವರಿಗೆ ಜೆಸಿಐ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಿ ಮಹಿಳಾ ದಿನಾಚರಣೆಯನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐನ ಅಧ್ಯಕ್ಷರಾದ ಪ್ರದೀಪ್ ಅವರು ಮಾತನಾಡಿ ಪ್ರಸ್ತುತ ತಲೆ ಮಾರಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳನ್ನು ಮುಂದುವರೆದಿದ್ದು ಇವರ ಕೊಡುಗೆ ನಮ್ಮ ಜೀವನಕ್ಕೆ ಅಪಾರವಾಗಿದೆ ಚಂದ್ರನ ಮೇಲೆ ಕಾಲಿಡುವುದರೊಂದಿಗೆ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಬೇಟೆಯಾಡಿ ಸಮಾಜದಲ್ಲಿ ಸರಿಸಮಾನ ನ್ಯಾಯವನ್ನು ಲಿಂಗತ್ವ ಭೇದವಿಲ್ಲದೆ ಸಾರುವ ಮೂಲಕ ಪ್ರತಿಯೊಬ್ಬರು ಈ ಸಮಾಜದಲ್ಲಿ ಸಮಾನರು ಎಂದು ಒಂದು ಉತ್ತಮ ಸಂದೇಶವನ್ನು ನೀಡಿದ್ದು ಇದರಂತೆಯೇ ಈ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕಿ ಗೀತಾ ಅವರ ಸಾಧನೆ ಅಪಾರವಾಗಿದೆ. ಇದನ್ನು ಮನಗಂಡು ಇವರನ್ನು ಗೌರವಿಸಲು ಅವಕಾಶ ಸಿಕ್ಕಿರುವ ನಮ್ಮ ಜೆಸಿಐ ಸಂಸ್ಥೆಗೆ ನಿಜಕ್ಕೂ ಸಂತೋಷದಾಯಕವಾಗಿದೆ ಮುಂದಿನ ದಿನಗಳಲ್ಲಿ ಇಂತಹ ಶಿಕ್ಷಕರು ಪ್ರತಿ ಶಾಲೆಗಳಲ್ಲಿಯೂ ಕಾರ್ಯ ನಿರ್ವಹಿತರಾಗಿ ಮಾದರಿಯಾಗಬೇಕಿದೆ ಎಂದು ತಿಳಿಸಿದರು.

ಜೆಸಿಐನ ಸಂಸ್ಥಾಪಕ ಅಧ್ಯಕ್ಷರಾದ ಅನಿಲ್ ಆನಂದ್ ಅವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆಗಿರುವಾಗ ಮಹಿಳೆಯರ ಬಗೆಗಿನ ಸಾಮಾಜಿಕ ಸಮ ಗೌರವದ ಕಾಳಜಿ ಮತ್ತು ಮಹಿಳೆಯರ ಸಾಧನೆಗಳ ಬಗೆಗಿನ ಅರಿವು ಬಹು ಮುಖ್ಯವಾಗಿದ್ದು ಸಾಧನೆಗೈದ ಮಹಿಳೆಯರನ್ನು ನೆನೆದು ಅವರನ್ನು ಆದರ್ಶವಾಗಿ ಇಟ್ಟುಕೊಳ್ಳುವುದು ಇಂದಿನ ಪೀಳಿಗೆಯ ಮಕ್ಕಳ ಬಹುದೊಡ್ಡ ಕರ್ತವ್ಯವಾಗಿದ್ದು ಅಂತೆಯೇ ಸಾಧನೆಯ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರ ಮತ್ತು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಈಗಿನ ತಲೆಮಾರಿನಲ್ಲಿ ನಡೆಯಬೇಕಿದೆ ಮತ್ತು ಹೆಣ್ಣು ಮಕ್ಕಳನ್ನು ಇನ್ನಷ್ಟು ಸಮಾಜದ ಮುನ್ನಡೆಗೆ ತರಲು ವೇದಿಕೆಯನ್ನು ಸೃಷ್ಟಿಸುವ ಅಗತ್ಯವಿದ್ದು ಈ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಅಲ್ಲದೆ ಹೆಣ್ಣು ಮಕ್ಕಳ ಸಾಧನೆಯನ್ನು ಗೌರವಿಸಿ ಆಶೀರ್ವದಿಸುವ ಕಾರ್ಯ ಸಮಾಜದ ಪ್ರತಿಯೊಬ್ಬರು ಮಾಡಬೇಕಿದೆ ಎಂದು ಮನವಿ ಮಾಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಗೀತಾ ಅವರು ನನ್ನ ಸಾಧನೆಯನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ಸರ್ಕಾರವು ನೀಡಿದ್ದು ಇನ್ನಿತರರಿಗೆ ಮಾದರಿಯಾಗಲಿ ಎಂದು ಜೆಸಿಐ ಸಂಸ್ಥೆ ನನ್ನನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿರುವುದು ಅಪಾರ ಸಂತಸ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯು ಸಹ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆಯನ್ನು ತೋರಲು ಇದು ದಾರಿ ದೀಪವಾಗಲಿದೆ ಎಂದು ಅಭಿಪ್ರಾಯಸಿದರು.
ಮಕ್ಕಳಿಗೆ ಸಿಹಿ ಹಂಚುವ ಮೂಲಕ ಮಕ್ಕಳ ದಿನಾಚರಣೆಯನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ಮುಖ್ಯಸ್ಥರಾದ ಶಬರಿ ತಿಲಕ್, ತಿಲಕ್, ಯೋಗಿತ್ ಹಾಗೂ ಪೂರ್ವಾಧ್ಯಕ್ಷರಾದ ಗಿರಿಧರ್ ರಾಜ್ ಅರಸ್ ಹಾಗೂ ರವಿ ಮತ್ತು ಶಾಲಾ ಶಿಕ್ಷಕರಾದ ಮಂಜಪ್ಪ ಸೇರಿದಂತೆ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಗಿತ್ ನಿರೂಪಿಸಿದರು, ಗಿರಿಧರ್ ರಾಜ್ ಅರಸ್ ವಂದಿಸಿದರು.