ಚಿಕ್ಕಮಗಳೂರು, ಮೇ.28:- ಕನ್ನಡ ನೆಲ, ಜಲ, ಭಾಷೆಗಾಗಿ ಪ್ರತಿಯೊಬ್ಬ ಕನ್ನಡಿಗರು ಕರವೇಯನ್ನು ಬಲಪಡಿಸಲು ಒಗ್ಗಟ್ಟಿನಿಂದ ಹೋರಾಡಬೇಕು ಹಾಗೂ ಕನ್ನಡವನ್ನು ಸಂರಕ್ಷಣೆ ಮಾಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಹೇಳಿದರು.
ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ನಡೆದ ಜಿಲ್ಲಾ, ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಕರವೇ ಸಂಘಟಿಸುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಅಡಗಿದೆ. ಕಾವೇರಿ, ಮಹ ದಾಯಿ ನದಿ ಹೋರಾಟದ ಭಾಗವಾಗಿ ಯಾವುದೇ ರಾಜಕೀಯ ಪಕ್ಷ ಮಾಡದ ರೀತಿಯಲ್ಲಿ ಕರವೇ ಹೋ ರಾಟ ಮಾಡುತ್ತಿದೆ ಎಂದು ತಿಳಿಸಿದರು.

ನಾಡಿನ ಮಣ್ಣಿನ ಋಣ ತೀರಿಸುವಲ್ಲಿ ಪ್ರತಿ ಕರವೇ ಕಾರ್ಯಕರ್ತರು, ಕನ್ನಡಿಗರು ಸ್ವಯಂ ಮುಂದಾಗಬೇಕು. ರಾಜ್ಯಾಧ್ಯಕ್ಷರ ಸಹಕಾರದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆ ಕಟ್ಟಲಾಗುವುದು. ಕೈಬಲಪಡಿಸಿ ದ ಕಾರ್ಯಕರ್ತರಿಗೆ ಚಿರಋಣಿ. ನಮ್ಮ ಸಂಘಟನೆಗೆ ಕಾರ್ಯಕರ್ತರೆ ಜೀವಾಳವಾಗಿದ್ದಾರೆ ಎಂದರು.
ಎಲ್ಲ ಪದಾಧಿಕಾರಿಗಳು ಕಾನೂನು ತಿಳುವಳಿಕೆ ಹೊಂದಿರಬೇಕು. ನಮ್ಮ ಹೋರಾಟ ಕಾನೂನು ಚೌಕಟ್ಟಿ ನಲ್ಲಿರಬೇಕು ಎಂದ ಅವರು ಕನ್ನಡಾಂಬೆಯ ಪ್ರತೀಕವಾಗಿರುವ ಶಾಲು ಪ್ರತಿಯೊಬ್ಬ ಕರವೇ ಕಾರ್ಯಕರ್ತ ರ ಶಕ್ತಿಯಾಗಿದ್ದು ನ್ಯಾಯಬದ್ಧ ಹೋರಾಟಗಳಲ್ಲಿ ಗಟ್ಟಿ ಧ್ವನಿಯಾಗಬೇಕು ಎಂದು ಹೇಳಿದರು.

ಕರವೇ ಉಪಾಧ್ಯಕ್ಷ ದಶರಥ ರಾಜ್ ಅರಸ್ ಮಾತನಾಡಿ, ಕನ್ನಡ ಕಟ್ಟುವ ನಿಟ್ಟಿನಲ್ಲಿ ನಾಗರೀಕರು ದೈನ ಂದಿನ ಕಾಯಕವನ್ನು ಕೆಲಸಮಯ ಬದಿಗಿರಿಸಿ ನಾಡು ಕಟ್ಟುವ ಕಾಯಕಕ್ಕೆ ಮುಂದಾಗಬೇಕು. ಜೀವನದುದ್ದ ಕ್ಕೂ ಸಂಸಾರ, ಕೆಲಸ, ಒತ್ತಡ ಸಾಮಾನ್ಯ. ಈ ನಡುವಿನಲ್ಲಿ ಭುವನೇಶ್ವರಿ ದೇವಿಯ ಪರಂಪರೆ ಎತ್ತಿಹಿಡಿಯು ವ ಕೆಲಸಕ್ಕೆ ಮುಂದಾಗಿ ಎಂದರು.
ಇದೇ ವೇಳೆ ಕಡೂರು ಕರವೇ ಮಹಿಳಾ ಘಟಕಕ್ಕೆ ಅನಿತಾ ಲಕ್ಷ್ಮೀಶ್ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಲತಾ ಸೇರಿದಂತೆ ಹತ್ತು ಮಂದಿ ಕರವೇ ಕುಟುಂಬಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ಪಂಚಾಕ್ಷರಿ, ಉಪಾಧ್ಯಕ್ಷ ಕೋಟೆ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಕುಮಾರ್.ಆರ್.ಶೆಟ್ಟಿ, ವಕ್ತಾರ ಕೋಟೆ ಸೋಮಣ್ಣ, ಸಂಚಾಲಕ ಸಿದ್ದಪ್ಪ, ಮಹಿಳಾ ಘಟಕದ ಉಪಾಧ್ಯಕ್ಷೆ ಶೈಲಶ್ರೀ ಸಿದ್ದಪ್ಪ, ಪ್ರ.ಕಾರ್ಯದರ್ಶಿ ನಾಗಲತಾ, ತಾಲ್ಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರುದ್ರೇಶ್ ಸಿಂಹಾದ್ರಿ ಸ್ವಾಗತಿಸಿದರು. ಪೂರ್ಣಿಮಾ ನಿರೂಪಿಸಿದರು. ಶೈಲಾ ಬಸವ ರಾಜ್ ಪ್ರಾರ್ಥಿಸಿದರು. ಹರಿಣಾಕ್ಷಿ ವಂದಿಸಿದರು.
- ಸುರೇಸ್ ಎನ್.