ಚಿಕ್ಕಮಗಳೂರು:– ಖಾಸಗೀ ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಕಾಯ್ದೆಯನ್ವಯ ಶುಲ್ಕವನ್ನು ಪಡೆಯಲು ಸೂಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಹೆಚ್.ಗುರುಮೂರ್ತಿ, ಇತ್ತೀಚಿಗೆ ಖಾಸಗೀ ಶಿಕ್ಷಣ ಸಂಸ್ಥೆ ಗಳು ವರ್ಷನುವರ್ಷ ಮಕ್ಕಳ ಶಾಲಾ ಶುಲ್ಕವನ್ನು ಮನಸ್ಸೋ ಇಚ್ಚೆ ಹೆಚ್ಚಿಸುತ್ತಿದ್ದು ಕೂಡಲೇ ಈ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಶಿಕ್ಷಣವು ಅತಿಹೆಚ್ಚು ಲಾಭದಾಯಕ ಉದ್ಯಮವಾಗಿದೆ. ಹೀಗಾಗಿ ಕೆಲವು ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷವು ವೈಜ್ಞಾನಿಕವಾಗಿ ಶಾಲಾ ಶುಲ್ಕ ಹೆಚ್ಚಳ ಮಾಡುತ್ತಿವೆ. ಇದರಿಂದಾಗಿ ಪಾಲಕರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿ ತೀವ್ರ ಕಳಕವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚಿನ ಬೆಲೆಏರಿಕೆ ನಡುವೆ ಸಾಮಾನ್ಯ ಕುಟುಂಬವು ಬದುಕುವುದೇ ದುಸ್ತರವಾಗಿದೆ. ಈ ನಡುವೆ ಶಾಲೆಯ ಶಿಕ್ಷಣವು ಗಗನಕ್ಕೇರುತ್ತಿರುವುದು ಇನ್ನಷ್ಟು ತಲೆನೋವು ತಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾ ರಿಗಳು ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ನಿಯಂತ್ರಿಸಲು ಕಡಿವಾಣ ಹಾಕಿ ಆರ್‌ಟಿಇ ಕಾಯ್ದೆಯನ್ವಯ ಶುಲ್ಕ ಪಡೆ ಯಲು ಸೂಚಿಸಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಮಂಜುನಾಥ್ ತೆರದಾಳ್, ಸಂಘಟನಾ ಕಾರ್ಯದರ್ಶಿ ವಾಸೀಂ, ಸದಸ್ಯರುಗಳಾದ ಅನಿಲ, ಕಿರಣ್‌ಕುಮಾರ್ ಮತ್ತಿತರರು ಹಾಜರಿದ್ದರು.
– ಸುರೇಶ್ ಎನ್.