ಚಿಕ್ಕಮಗಳೂರು-ಅರಣ್ಯ ಹೆಸರಿನಲ್ಲಿ ರೈತಾಪಿ ವರ್ಗಕ್ಕೆ ತೊಂದರೆ ನೀಡುತ್ತಿರುವ ಅಧಿಕಾರಿಗಳು ಹಾಗೂ ಕನ್ನಡ ಫಲಕ ಹಾಕುವಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಹೋರಾಟ ರೂಪಿಸಲು ಸನ್ನದ್ಧರಾಗಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಶೆಟ್ಟಿ ಹೇಳಿದರು.
ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲಾ ಕರವೇ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಅವರು ಮಾತನಾಡಿದರು.
ಅಭಯಾರಣ್ಯದಿಂದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಭಾಗಗಳಲ್ಲಿ ರೈತರು ಭಯಭೀತರಾಗಿ ಬದುಕುವ ಸ್ಥಿತಿಯಿದೆ. ಈ ನಡುವೆ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುಕು ಕಟ್ಟು ಕೊಂಡಿರುವ ಭೂಮಿಯನ್ನು ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಕೆಲಸದಲ್ಲಿ ನಿರಂತರಾಗಿದ್ದು ಈ ವಿರುದ್ಧ ಗಟ್ಟಿತನದಿಂದ ಕರವೇ ರೈತರ ಧ್ವನಿಯಾಗಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡರೂ ವ್ಯವಸ್ಥಿತ ಸೌಲಭ್ಯದ ಕೊರತೆಯಿಂದ ರೋಗಿಗಳು ಅಕ್ಕಪಕ್ಕದ ಜಿಲ್ಲೆಗಳಿಗೆ ಇಂದಿಗೂ ಚಿಕಿತ್ಸೆಗೂ ತೆರಳುತ್ತಿರುವುದು ಶೋಚನೀಯವಾಗಿದ್ಆದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರ ಜನತೆಯ ಆರೋಗ್ಯದ ದೃಷ್ಠಿಯಿಂದ ಹೆಚ್ಚು ಗಮನಹರಿಸಿ ಸಮರ್ಪಕ ಸವಲತ್ತು ಒದಗಿಸಿಕೊಡಬೇಕು ಎಂದರು.

ಜಿಲ್ಲೆಯ ಪ್ರತಿ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವುದು ಹಾಗೂ ಹೊಸದಾಗಿ ಯಾವುದೇ ಕಾರ್ಖಾನೆಗಳು ಸ್ಥಾಪನೆಗೊಂಡರೂ ಮೊದಲು ಕನ್ನಡಿಗರಿಗೆ ಆದ್ಯತೆ ನೀಡಿ ಈ ನೆಲದ ಮಕ್ಕಳಿಗೆ ಗೌರವಿಸಬೇಕು. ಅಲ್ಲದೇ ಅನೇಕ ರಸ್ತೆಗಳು ನೆನೆಗುದಿಗೆ ಬಿದ್ದಿರುವ ಕಾರಣ ಅಭಿವೃದ್ದಿಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಪಂಚನದಿಗಳ ಉಗಮವಾಗಿದೆ. ಆದರೆ ರೈತರಿಗೆ ಅಣೆಕಟ್ಟು ನಿರ್ಮಿಸಿ ಜಮೀನಿಗೆ ನೀ ರೋದಗಿಸುವ ಕೆಲಸವಾಗಿಲ್ಲ. ಈ ಕೂಡಲೇ ನೀರಾವರಿ ಯೋಜನೆ ಬಗ್ಗೆ ಹೆಚ್ಚು ಗಮನಹರಿಸಿ ಅನ್ನದಾತ ನಿಗೆ ಸಮರ್ಪಕ ಸೌಲಭ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿನ ರೈತರು ಹಾಗೂ ಕನ್ನಡಪರವಾಗಿ ಅನೇಕ ನ್ಯಾಯಬದ್ಧ ಹೋರಾಟ ಗಳಲ್ಲಿ ಕರವೇ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮುಖಾಂತರ ಜನತೆಯ ಪರವಾಗಿ ಎಂದಿಗೂ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ, ತಾಲೂಕು ಅಧ್ಯಕ್ಷ ಜೀವನ್ ನಗರ ಅಧ್ಯಕ್ಷ ದರ್ಶನ್, ಉಪಾಧ್ಯಕ್ಷ ಗಿರೀಶ್ ಮತ್ತಿತರರು ಹಾಜರಿದ್ದರು.