ಚಿಕ್ಕಮಗಳೂರು. ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಭಕ್ತರು ತೆರಳುತ್ತಿದ್ದು ಮಾರ್ಗ ಮದ್ಯೆ ಭಕ್ತಾದಿಗಳಿಗೆ ಕರ್ನಾಟಕ ಪೊಲೀಸ್ ಮಹಾ ಸಂಘದ ವತಿಯಿಂದ ಆಹಾರ ಪಾನೀಯಗಳನ್ನು ವಿತರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷರಾದ ಡಾಕ್ಟರ್ ರೈತ ಮನೋಜ್ ಅವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ಬಿಸ್ಕೆಟ್ ಹಾಗೂ ಮಜ್ಜಿಗೆ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಸಖರಾಯಪಟ್ಟಣದ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೊತೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರಾದ ದಿಲೀಪ್, ಮಣಿಕಂಠ, ದೀಪಕ್, ಮಧು, ನಿರಂಜನ್, ಜಯಶೀಲ, ಮೀನಾಕ್ಷಿ ವಿವಿ ಮತ್ತು ಇನ್ನಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು