ಚಿಕ್ಕಮಗಳೂರು-ಕಸಾಪ ಸಮ್ಮೇಳನ-ಸತ್ಯನಾರಾಯಣ-ಚಂದ್ರಕಲಾಗೆ- ಸಾಹಿತ್ಯ-ಸಿರಿ-ಪ್ರಶಸ್ತಿ


ಚಿಕ್ಕಮಗಳೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಚ್ 7 ಮತ್ತು 8 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತರೀಕೆರೆಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.


ಈ ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗೈದ ಎಚ್. ಎಸ್.ಸತ್ಯನಾರಾಯಣ ಹಾಗೂ ಕೊಪ್ಪ ತಾಲೂಕಿನ ಸಾಹಿತಿ ಎಸ್.ಎನ್.ಚಂದ್ರಕಲಾ ಇವರಿಗೆ ನೀಡಲಾಗುವುದು. ಪ್ರಶಸ್ತಿ ಫಲಕ ಹಾಗೂ ತಲಾ 5೦೦೦ ನಗದು ಸಹಿತ ಈ ಬಾರಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?