ಚಿಕ್ಕಮಗಳೂರು-ಎಸ್‌ಎಸ್‌ಎಲ್‌ಸಿಯಲ್ಲಿ ಕುನಾಲ್‌ಗೆ 624 ಅಂಕ-ಅಭಿನಂದನೆ ಸಲ್ಲಿಕೆ

ಚಿಕ್ಕಮಗಳೂರು, ಮೇ.06:- ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾ ಗೂ ಪಾಲಕರ ಸಹಕಾರವಿದ್ದಲ್ಲಿ ಯಾವುದೇ ಕ್ಷೇತ್ರದಲ್ಲೂ ಉನ್ನತ ಸ್ಥಾನಮಾನ ಗಳಿಸಬಹುದು ಎಂದು ಯು ರೇಕಾ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ದೀಪಕ್‌ದೊಡ್ಡಯ್ಯ ಹೇಳಿದರು.

ತಾಲ್ಲೂಕಿನ ವಸ್ತಾರೆ ಹೋಬಳಿಯ ಬಸ್ಕಲ್ ಗ್ರಾಮದ ವಿದ್ಯಾರ್ಥಿ ಕುನಾಲ್ ರವಿರೇಜ ಅವರು ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳಿಸಿದ ಹಿನ್ನೆಲೆಯಲ್ಲಿ ಯುರೇಕಾ ಅಕಾಡೆಮಿಯಿಂದ ವಿದ್ಯಾರ್ಥಿ ಸ್ವಗೃಹಕ್ಕೆ ತೆರಳಿ ಅಭಿನಂದಿಸಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳು ಅಭ್ಯಾಸುವಂಥ ಶಾಲೆಗಳು ಸ್ವಚ್ಚಂಧ ಪರಿಸರ, ಪರಿಣಿತ ಶಿಕ್ಷಕರಿಂದ ಕೂಡಿರುತ್ತಾರೆ. ಶಿಕ್ಷಕರು ಪ್ರೋತ್ಸಾಹ, ಪಾಲಕರ ಸಹಕಾರವಿದ್ದರೆ ಸಮಾಜದ ಮುಖ್ಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಹೀಗಾಗಿ ಆಸಕ್ತಿಯಿರುವ ಕ್ಷೇತ್ರದಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು.‌

ವಿಶೇಷವಾಗಿ ಕುನಾಲ್ ರವಿತೇಜ ವ್ಯಾಸಂಗ ಪೂರೈಸಿ ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಳ್ಳುವ ಜೊತೆ ಗೆ ಸ್ವಗ್ರಾಮದಲ್ಲೇ ಸೇವೆ ಸಲ್ಲಿಸುವ ಗುರಿ ಹೊಂದಿರುವುದು ಹೆಮ್ಮೆಯ ಸಂಗತಿ. ಈ ರೀತಿಯಲ್ಲೇ ಪ್ರತಿಯೊ ಬ್ಬ ವಿದ್ಯಾರ್ಥಿಗಳು ಗುರಿ ಹೊಂದುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಉತ್ತ ಮ ಸಂಗತಿ ಎಂದರು.

ಗ್ರಾಮಾAತರ ಪ್ರದೇಶಗಳ ಮಕ್ಕಳು ಜೀವನದ ಕಷ್ಟ-ಸುಖಗಳನ್ನು ಎಲ್ಲವೂ ಗಮನಿಸಿರುತ್ತಾರೆ. ಹೀಗಾ ಗಿ ಪಾಲಕರ ಪರಿಶ್ರಮಕ್ಕೆ ನಿರಾಸೆ ಮಾಡದೇ ಓದುವ ಜವಾಬ್ದಾರಿ ಹೊರಬೇಕು. ಇದಾದ ಬಳಿಕ ಯಶಸ್ಸಿನ ಮೆಟ್ಟಿಲು ದೊರಕುವುದು ಖಚಿತ ಎಂದ ಅವರು ಕಲಿಕೆಯ ವಯಸ್ಸಿನಲ್ಲಿ ಯಾರೂ ಕೂಡಾ ಸಮಯ ವ್ಯರ್ಥ ಗೊಳಿಸದಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಪಾಲಕರಾದ ಮಮತಾ ರವಿಕುಮಾರ್, ಜೆಡಿಎಸ್ ಮುಖಂಡ ಭೈರೇಗೌಡ, ಮುಖಂಡರಾದ ಸಚಿನ್‌ಸಿಂಗ್, ಶಶಿ ಮತ್ತಿತರರು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?