ಚಿಕ್ಕಮಗಳೂರು-ಕಾನೂನು-ಸೇವೆಗಳ-ಪ್ರಾಧಿಕಾರಕ್ಕೆ-ಪ್ಯಾನಲ್- ವಕೀಲರ-ನೇಮಕಕ್ಕೆ-ಅರ್ಜಿ-ಆಹ್ವಾನ


ಚಿಕ್ಕಮಗಳೂರು: ನಗರದಲ್ಲಿ ಕಾರ್ಯ ನಿರ್ವಹಿಸಲು ಪ್ರಾಧಿಕಾರದ ಪ್ಯಾನಲ್ ವಕೀಲರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಿರ್ಧರಿಸಿದ್ದು, ಅರ್ಹ ಕಾನೂನು ವೃತ್ತಿಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿ ಕಾನೂನು ವೃತ್ತಿ ನಿರ್ವಹಿಸಿರುವ ಅಭ್ಯರ್ಥಿಗಳು ನಗರದ ನ್ಯಾಯಾಲಯಗಳ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಿಂದ ಪಡೆದ ನಿಗದಿತ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಕಾನೂನು ಪದವಿ ಅಂಕಪಟ್ಟಿಗಳ ದೃಢೀಕೃತ ದಾಖಲಾತಿಗಳು, ಆಧಾರ್ ಕಾರ್ಡ್‌ನ ಪ್ರತಿ, ಅಭ್ಯರ್ಥಿ ನೋಂದಣಿ ಮಾಡಿಕೊಂಡ ವಕೀಲರ ಸಂಘದಿಂದ ವೃತ್ತಿಯ ಅನುಭವದ ಪ್ರಮಾಣ ಪತ್ರ, ರಾಜ್ಯ ವಕೀಲರ ಪರಿಷತ್‌ನಿಂದ ಪಡೆದುಕೊಂಡ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ಪಾಸ್‌ಪೋರ್ಟ್ ಭಾವಚಿತ್ರದೊಂದಿಗೆ ಸಲ್ಲಿಸಬೇಕು.

ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳ ಸಂದರ್ಶನದ ಸಮಯ ಹಾಗೂ ಸ್ಥಳವನ್ನು ಪ್ರಾಧಿಕಾರವು ಪ್ರಕಟಣೆಯ ಮುಖಾಂತರ ತಿಳಿಸಲಿದೆ ಹಾಗೂ ಆಯ್ಕೆಯನ್ನು ಅಂತಿಮವಾಗಿ ನೇಮಕಾತಿ ಸಮಿತಿಯೇ ನಿರ್ಣಯಿಸಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?