ಚಿಕ್ಕಮಗಳೂರು, ಮೇ.14:- ರಾಜ್ಯಸರ್ಕಾರ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಉಪ ಪಂಗ ಡಗಳ ಸಮಾಜ ಬಾಂಧವರು ವೀರಶೈವ ಲಿಂಗಾಯಿತ ಎಂದು ನಮೂದಿಸಿ ಜನಾಂಗದ ಶಕ್ತಿಯನ್ನು ಬಲಿಷ್ಟ ಗೊಳಿಸಬೇಕು ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ನಡೆದ ಸರ್ವ ಶರಣರ ಜಾಥಾ ಮತ್ತು ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅಧಿಕಾರದ ದಾಹ ಅಥವಾ ರಾಜಕಾರಣದ ದೃಷ್ಟಿಯಿಂದ ಸಮಾಜ ಬಾಂಧವರು ಬಲಿಯಾಗಬಾರದು ಹೀಗಾಗಿ ಮುಂಬರುವ ಜಾತಿ ಗಣತಿಯಲ್ಲಿ ವೀರಶೈವರು ಧರ್ಮಗಳ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಕಡ್ಡಾಯವಾಗಿ ನಮೂದಿಸುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಪರಂಪರೆಯಲ್ಲಿರುವವರು ತಮ್ಮ ದಾಖಲಾತಿಗಳಲ್ಲಿ ಉಪಪಂಗಡಗಳನ್ನು ನಮೂದಿಸಿವೆ. ಕೆಲವರು ವೀರಶೈವ ಲಿಂಗಾಯತ ಹೆಸರಿಗೆ ಜೊತೆಗೆ ತಮ್ಮ ಮೂಲಜಾತಿಯನ್ನೂ ನಮೂ ದಿಸಿದ್ದಾರೆ. ವೀರಶೈವ ಲಿಂಗಾಯತ ಉಪಜಾತಿಯವರಿಗೆ ಮೂಲ ಜಾತಿಗೆ ಸಮಸ್ಯೆಯಾಗದಿರಲು ಈ ನಿರ್ಣ ಯ ಕೈಗೊಳ್ಳಲಾಗಿದೆ ಎಂದರು.
ಬಸವತತ್ವ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ತಾತ್ವಿಕ, ಧಾರ್ಮಿಕವಾಗಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿದಿಲ್ಲ. ರಾಜಕೀಯ, ಸಾಮಾಜಿಕವಾಗಿ ನಾವುಗಳು ಒಗ್ಗಟ್ಟಾಗದಿದ್ದರೆ ಸಮಾಜಕ್ಕೆ ಭವಿಷ್ಯವಿಲ್ಲ. ಹೀಗಾಗಿ ಸಮಾಜದಲ್ಲಾಗುತ್ತಿರುವ ಗೊಂದಲವನ್ನು ಪರಿಹರಿಸಲು ಸ್ವಾಮೀಜಿಗಳ ವರ್ಗ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿನ ಪ್ರಪ್ರಥಮ ಸಭೆ ಸಣ್ಣಮಟ್ಟಿನ ಬೀಜದ ಸ್ವರೂಪಿಯಲ್ಲಿ ಉದಯಿಸಿದೆ. ಜಾತಿಗಣತಿಯಲ್ಲಿ ಗೊಂದಲಗಳು ಸಮಾಜವನ್ನು ಕಾಡುತ್ತಿದೆ. ಬಗೆಹರಿಸಲು ಎಲ್ಲಾ ಉಪಪಂಗಡಗಳು ಒಟ್ಟಾಗಬೇಕು. ಪ್ರಸ್ತುತ ಒಗ್ಗಟ್ಟಿನ ಕೊರತೆಯಿಂದ ಶೇ.40 ರಷ್ಟು ಜನಸಂಖ್ಯೆ ಕ್ಷೀಣಿಸುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ಸಮಾಜವನ್ನು ಒಳಗೆ ಹಾಗೂ ಹೊರಗಿನಿಂದ ದಾರಿ ತಪ್ಪಿಸುವ ಶಕ್ತಿಗಳು ಜಾಗೃತವಾಗುತ್ತಿ ವೆ. ಅಲ್ಲದೇ ನಮ್ಮಗಳ ನಡುವೆ ವಿಷಬೀಜ ಭಿತ್ತುವ ಕೆಲಸವಾಗುತ್ತಿದೆ. ನಾವೆಲ್ಲರೂ ಒಂದಾಗಲು ಸಮಾಜದ ಇತಿಹಾಸ, ಧಾರ್ಮಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ದುರಾಚಾರಗಳು ಕಡೆಗಣಿಸಿ ವೀರಶೈವರು ಲಿಂಗಾಯಿತರು ಒಂದೇ ಎಂಬ ಮನೋಭಾವನೆ ಮೂಡಿಸಬೇಕು ಎಂದರು.

ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜವು ಎಷ್ಟೇ ಒತ್ತಡ ಕೊಟ್ಟರು, ಕೊನೆಯದಾಗಿ ನಿರ್ಧಾರ ಕೈಗೊಳ್ಳುವುದು ವಿಧಾನಸೌಧದಲ್ಲಿ ಎಂದ ಅವರು ಆ ನಿರ್ಣ ಯನ್ನು ಬದಲಾಯಿಸಲು ಸಮಾಜದ ಶಾಸಕರು ಕೈಜೋಡಿಸಬೇಕು. ಪ್ರಪ್ರಥಮವಾಗಿ ಜಿಲ್ಲೆಯ ಶಾಸಕರಿಂದ ಲೇ ಈ ನಿರ್ಣಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸಮುದಾಯದ ಅಜ್ಞಾನದ ಕೊರತೆಯಿಂದ ಇಂದು ವೀರಶೈವ-ಲಿಂಗಾಯಿತರು ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಈ ಜಾತಿಗಣತಿ ಎಂಬುದು ಬ್ರಿಟೀಷರ್ ಕಾಲದ ಆಳ್ವಿಕೆಯಲ್ಲಿತ್ತು. ಅಂದು ಭಾರತೀ ಯರನ್ನು ಛಿದ್ರಗೊಳಿಸಲು ಜಾತಿ ಬೀಜ ಬಿತ್ತಿದ ಪರಿಣಾಮ ಇಂದು ಜಾತಿಯಿಂದಲೇ ಅಧಿಕಾರ ಗಿಟ್ಟಿಸಿಕೊಳ್ಳ ಲು ಪಕ್ಷಗಳು ಮುಂದಾಗುತ್ತಿವೆ ಎಂದು ತಿಳಿಸಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ವೀರಶೈವ-ಲಿಂಗಾಯಿತ ಒಗ್ಗಟ್ಟಾಗಲು ಜಿಲ್ಲೆಯಿಂದ ಅಡಿಪಾಯ ಹಾಕಿರುವುದು ಉತ್ತಮ ಬೆಳವಣಿಗೆ. ಈ ಜಾಥಾ ರಾಜ್ಯಾದ್ಯಂತ ಪಸರಿಸುವಂತಾಗಬೇಕು. ಈ ನಿರ್ಣ ಯದ ಎತ್ತಿಹಿಡಿಯಲು ಸಮಾಜದ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು, ನಾಯಕರು ಸದಾಕಾಲ ಒಗ್ಗಟ್ಟಿನಿಂದ ಕೈಜೋಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ರುದ್ರಮುನಿ, ತಾಲ್ಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್, ಸರ್ವ ಶರ ಣರ ಸಮಿತಿ ಮುಖ್ಯಸ್ಥ ನಂಜೇಶ್ ಬೆಣ್ಣೂರು, ಸಮಾಜ ಬಾಂಧವರಾದ ಧನಂಜಯ್, ದರ್ಶನ್, ಕೀರ್ತ ನ್, ಕೃತಿಕ್ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.