ಚಿಕ್ಕಮಗಳೂರು, ಮೇ.07:– ಅರಣ್ಯ ಇಲಾಖೆ ಒತ್ತುವರಿ ಸಮಸ್ಯೆಯಿಂದ ಕಂಗಾಲಾಗಿರುವ ಜಿಲ್ಲೆಯ ರೈತರನ್ನು ಸಂಘಟಿಸಿ ಪರಿಹಾರ ಕಂಡುಹಿಡಿಯಲು ಜೂನ್ 09 ರಂದು ತಾಲ್ಲೂಕಿನಲ್ಲಿ ಜಿಲ್ಲಾ ಮಟ್ಟದ ಬೃಹ ತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನಾಗರೀಕ ಮತ್ತು ಅಹಿತ ಹೋರಾಟ ಸಮಿತಿ ಅಧ್ಯಕ್ಷ ವಿಜಯ್‌ಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಅರಣ್ಯ ಸಮಸ್ಯೆಯಲ್ಲಿರುವ ರೈತರ ಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡಿದ ಅವರು ಅರಣ್ಯ ಸಮಸ್ಯೆ, ಸೆಕ್ಷನ್ 4.1, ಡೀಮ್ಡ್ ಫಾರೆಸ್ಟ್, ನಿವೇಶನ, ಸ್ಮಶಾನ ಹೀಗೆ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸುವ ಕುರಿತು ದೀರ್ಘಾಕಾಲ ಚರ್ಚಿಸಿ ಸಮಾವೇಶಕ್ಕೆ ಒಪ್ಪಿಗೆ ಸೂಚಿಸಲಾ ಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1.30 ಲಕ್ಷ ನಿವೇಶನ ರಹಿತರು, ಲಕ್ಷಕ್ಕೂ ಹೆಚ್ಚು ಮಂದಿ ಜೀವನೋಪಾಯಕ್ಕೆ ಸಣ್ಣ ಪ್ರಮಾಣದ ಭೂಮಿ ಸಾಗುವಳಿ ರೈತರು, ಸ್ಮಶಾನವಿಲ್ಲದೇ ಗ್ರಾಮಗಳು ಹಾಗೂ ಕಂದಾಯ ಗ್ರಾಮಳಾಗದೇ ಸಮಸ್ಯೆ ಗಳನ್ನು ಎದುರಿಸುವ ನಿವಾಸಿಗಳಿಗೆ ಈ ಸಮಾವೇಶ ಪೂರಕವಾಗಲಿದೆ ಎಂದರು.

ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜೂನ್ 9ರಂದು ಜಿಲ್ಲೆಯ ರೈತರು ಒಗ್ಗಟ್ಟಾಗಿ ಸೇರಿಸುವ ಜೊತೆಗೆ ಜಿಲ್ಲೆಯ ಪ್ರತಿ ತಾಲ್ಲೂಕಿನ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ರೈತರ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಮುಖಂಡರಾದ ಕೆ.ಕೆ.ರಘು, ಕೃಷ್ಣಪ್ಪ, ರವಿಕುಮಾರ್, ಮುನಿಸ್ವಾಮಿ, ಬಸವರಾಜ್, ಈಶ್ವರ್, ಬೀರೇಗೌಡ, ಕುಮಾರ್, ಅಕ್ಮಲ್, ಜಯಂತಿ, ಪೂರ್ಣೇಶ್, ಗಿರೀಶ್, ಗಂಗಾಧರ್, ಲೋಕೇಶ್ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.